ರಸ್ತೆಯ ಅವ್ಯವಸ್ಥೆ ಕೇಳುವವರೆ ದಿಕ್ಕಿಲ್ಲ

ಗುಬ್ಬಿ:

          ತಾಲ್ಲೂಕಿನ ಕೋಣನಕಲ್ಲು ಗ್ರಾಮದಿಂದ ನಸರಿಪಾಳ್ಯ ಮಾರ್ಗವಾಗಿ ಲಕ್ಕೇನಹಳ್ಳಿವರೆಗೂ ರಸ್ತೆ ಹಾಳಾಗಿದ್ದು, ಕೇಳುವವರೇ ದಿಕ್ಕಿಲ್ಲದಂತಾಗಿದೆ.

ರಸ್ತೆಯುದ್ದಕ್ಕೂ ಹಳ್ಳ, ಗುಂಡಿಗಳು ಬಿದ್ದಿದ್ದು, ಮಳೆ ಬಂದರಂತೂ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಸುಮಾರು 4 ಕಿ.ಮೀ.ವರೆಗೂ ರಸ್ತೆ ತೀರಾ ಹದಗೆಟ್ಟಿದೆ. ಈ ಭಾಗದಲ್ಲಿ ಓಡಾಡುವ ಜನಸಾಮಾನ್ಯರು ಹಾಗೂ ವಾಹನಗಳಿಗೆ ತೀವ್ರತರಹದ ತೊಂದರೆಯಾಗಿದೆ.

ಶಾಲಾ ಮಕ್ಕಳಂತೂ ದಿನಂಪ್ರತಿ ಎದ್ದುಬಿದ್ದು ಬರುತ್ತಿದ್ದಾರೆ. ಸೈಕಲ್‍ನಲ್ಲಿ ಹೋಗಲಾಗದಷ್ಟು ರಸ್ತೆ ಹದಗೆಟ್ಟಿದ್ದು, ವಾಹನಗಳು ರಸ್ತೆಯಲ್ಲಿ ಹೂತು ಹೋಗುವುದರಿಂದ ಸಂಚರಿಸಲಿಕ್ಕೂ ಬಹಳ ತೊಂದರೆಯಾಗಿದೆ. ಲಕ್ಕೇನಹಳ್ಳಿ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿಗಳು ದಿನಂಪ್ರತಿ ಎದ್ದುಬಿದ್ದು ಬರುತ್ತಿದ್ದಾರಲ್ಲದೆ, ಬಟ್ಟೆಗಳೆಲ್ಲವೂ ಕೆಸರಿನಿಂದ ಒದ್ದೆಯಾಗಿ, ಚಪ್ಪಲಿಗಳನ್ನು ಕೈನಲ್ಲಿ ಹಿಡಿದುಕೊಂಡೇ ನಡೆದು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಾಲೆಗೆ ಹೋಗುವುದಕ್ಕೇ ಮುಜುಗರವಾಗುತ್ತಿದೆ.

ರಸ್ತೆ ಹದಗೆಟ್ಟಿರುವ ಬಗ್ಗೆ ಈ ಭಾಗದ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದಿದ್ದರೂ ಸಹ ಯಾರೊಬ್ಬರೂ ಗಮನಹರಿಸಿರುವುದಿಲ್ಲ. ದಯವಿಟ್ಟು ಇನ್ನಾದರೂ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಿ ಹದಗೆಟ್ಟಿರುವ ರಸ್ತೆಯನ್ನು ಆದಷ್ಟು ಶೀಘ್ರವಾಗಿ ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಈ ಮೂಲಕ ಮನವಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link