ನಾಯಕನಹಟ್ಟಿ :
ವರದಿ : ಹರೀಶ್ ನಾಯಕನಹಟ್ಟಿ
ಹೋಬಳಿಯ ನೇರಲಗುಂಟೆ ಗ್ರಾಮದ ನಮ್ಮೂರ ಕ್ಲಸ್ಟರ್ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1ನೇ ತರಗತಿಯ ಕೂಸಿನ ಮನೆ ಗೊಡೆ ಕುಸಿದು ಬಿದ್ದಿದ್ದು ಪುಟಾಣಿ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಶಾಲೆಯಲ್ಲಿ 9 ಕೊಠಡಿಗಳಿದ್ದು ಎಲ್ಲಾ ಕೊಠಡಿಗಳು ಮಳೆ ಬಂದಾಗ ಸೋರುತ್ತಿವೆ.ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಬೋಜನಾಲಯದ ಕಟ್ಟಡವಿಲ್ಲ, ಮಕ್ಕಳು ಹೊರಗಡೆ ಕುಳಿತು ಊಟ ಮಾಡುವ ಪರಿಸ್ಥಿತಿ ಇದೆ. ಪುಟಾಣಿ ಮಕ್ಕಳಿಗೆ ಏನಾದರು ತೊಂದರೆಯಾದರೆ.ಚಿತ್ರದುರ್ಗ ಜಿಲ್ಲಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ ಅವರೆ ಅದಕ್ಕೆ ನೇರ ಹೊಣೆಗಾರರಾಗಿರುತ್ತಾರೆ. 9 ವರ್ಷಗಳಿಂದ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ರಚನೆಯಿಲ್ಲ.
ಸುಸಜ್ಜಿತವಾದ ಕಟ್ಟಡಗಳು ಇಲ್ಲದೆ ಇರುವುದರಿಂದ ಮಕ್ಕಳಿಗೆ ಶಿಕ್ಷಕರು ಹೊರಗಡೆ ಪಾಠ ಮಾಡುತ್ತಾರೆ. ಮಳೆ ಬಂತು ಎಂದರೆ ಹೊಡೆದ ಸಿಮೆಂಟ್ ಸೀಟಿನಿಂದ ಬಿರುಕು ಬಿಟ್ಟು ಗೊಡೆಯಿಂದ ನೀರು ಸೋರಲು ಆರಂಭಿಸುತ್ತದೆ. ಸುಮಾರು ವರ್ಷಗಳಿಂದ ಈ ಶಾಲೆ ಸೋರುತ್ತಿದ್ದರುಸಹ ಶಿಕ್ಷಣಾಧಿಕಾರಿ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ನೇರಲಗುಂಟೆ ಗ್ರಾಮದ ದಲಿತ ಮುಖಂಡರುಗಳು ಆರೋಪಿಸಿದ್ದಾರೆ.ಸಂಬಂಧ ಪಟ್ಟ ಅಧಿಕಾರಿಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
ಈ ಶಾಲೆಯಲ್ಲಿ 180 ಮಕ್ಕಳಿದ್ದು, 1ನೇ ತರಗತಿಯಿಂದ 7ನೇ ತರಗತಿ ಮಕ್ಕಳು ಪಾಠ ಕಲಿಯುತ್ತಿದ್ದಾರೆ.ಶಾಲೆಯ ಕೊಠಡಿಗಳು ಸಂಪೂರ್ಣವಾಗಿ ಸೋರುತ್ತಿವೆ. ಶಾಲೆಯಲ್ಲಿ ಏನಾದರು ಅವಗಡ ಸಂಭವಿಸುವ ಮುನ್ನ ಸಂಬAಧಪಟ್ಟ ಇಲಾಖೆಯವರು ಇತ್ತಕಡೆ ಗಮನ ಹರಿಸಬೇಕಾಗಿದೆ. ಕೆಲವು ಕೊಠಡಿಗಳ ಬಾಗಿಲು ಮುರಿದು ಹೋಗಿವೆ.ಈ ಶಾಲೆಯ ದುಸ್ಥಿತಿ ಕೇಳುವವರು ಯಾರು? ಕೆಲವು ಪೋಷಕರು ಶಾಲೆಯ ದುಸ್ಥಿತಿಯನ್ನು ನೋಡಿ ಪುಟಾಣಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ.ಇದರಿಂದಾಗಿ ಶಾಲೆಯ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳನ್ನು ಬೇರೆ ಊರಿನ ಖಾಸಗಿ ಶಾಲೆಗೆ ಕಳುಹಿಸುವುದರಿಂದ ತೊಂದರೆಯಾಗುತ್ತಿದೆ.ಶಾಲೆಯು ಕುಸಿಯುವ ಅಂತಕ್ಕೆ ತಲುಪಿದ್ದರಿಂದ ವಿದ್ಯಾರ್ಥಿ, ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕ ಮನೆಮಾಡಿದೆ.
ಆದ್ದರಿಂದ ಈ ಶಾಲೆಯ ಎಲ್ಲಾ ಕೊಠಡಿಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಿಸಿದರೆ ಸೂಕ್ತ ಎಂದು ಗ್ರಾಮಸ್ಥರ ಒತ್ತಾಯವಾಗಿದೆ.ಶೀಥಿಲ ವ್ಯವಸ್ಥೆಯಲ್ಲಿರುವ ಕೋಣೆಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಿಲ್ಲ. ಶೀಥಲಗೊಂಡ ಕೋಣೆಯಲ್ಲಿ ಮಕ್ಕಳಿಗೆ ಪಾಠ ಮಾಡಬಾರದು ಎಂದು ದಲಿತ ಮುಖಂಡರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಶಾಲೆಯ ಕಟ್ಟಡದ ಗೋಡೆ ಕುಸಿದಿದ್ದು ಬೀಳುವ ಅಂತದಲ್ಲಿದೆ. ಇದು ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಠಿಸಿದೆ. ಇಲಾಖೆ ಅಧಿಕಾರಿಗಳು ಎಚ್ಚತ್ತುಕೊಳ್ಳದೆ ಇದ್ದರೆ ಪುಟಾಣಿ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಕಂಡುಬರುತ್ತಿವೆ.
ಎಲ್ಲೆಡೆ ಬಿರುಕುಬಿಟ್ಟು ತಳಪಾಯ ಕುಸಿದಿದೆ. ಇಂದೊ ನಾಳೆಯೋ ಮುರಿದು ಬೀಳುವ ಅಂತದಲ್ಲಿದೆ. ಗೋಡೆ ಮಣ್ಣಿನಿಂದ ನಿರ್ಮಿಸಿದರಿಂದ ಈಗಾಗಲೆ ಕುಸಿದು ಬಿದ್ದಿದೆ, ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ.ಗೋಡೆಗಳನ್ನು ಮಣ್ಣಿನಿಂದ ನಿರ್ಮಿಸಿದ್ದ ಮಳೆಯ ರಭಸಕ್ಕೆ ಗೋಡೆ ಬಿದ್ದಿದ್ದು ಮೇಲ್ಛಾವಣಿ ಬೀಳುವ ಸಾಧ್ಯತೆ ಇದೆ.ದಲಿತ ಮುಖಂಡ ದುರುಗೇಶ್ ಮಾತನಾಡಿ ಈ ಶಾಲೆಯ ಕಟ್ಟಡಗಳು ಬೀಳುವ ಅಂತಕ್ಕೆ ತಲುಪಿದ್ದು, ಶಿಕ್ಷಣ ಮಂತ್ರಿ, ಜಿಲ್ಲಾಧಿಕಾರಿಗಳು ಇತ್ತಕಡೆ ಗಮನ ಹರಿಸಬೇಕು.
9 ಕೊಠಡಿಗಳು ನೆಲಸಮ ಮಾಡಿ ನೂತನ ಕೊಠಡಿಗಳನ್ನು ನಿರ್ಮಿಸಬೇಕು, ವಿಫರೀತ ಗಾಳಿ ಬೀಸುತ್ತಿರುವುದರಿಂದ ಮಣ್ಣಿನಿಂದ ಕಟ್ಟಿರುವ ಶಾಲೆಗಳು ಕುಸಿಯುವ ಅಂತಕ್ಕೆ ಬಂದಿವೆ. ಕೆಲವು ಕೊಠಡಿಗಳ ಮೇಲ್ಛಾವಣಿ ಮಳೆಗೆ ಸೋರುತ್ತಿವೆ. ಆದಷ್ಟು ಬೇಗನೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಯ ಕುಸಿದ ಗೋಡೆ, ಕುಡಿಯುವ ಬೀತಿ ಎದರಿಸುತ್ತಿರುವ ಶಾಲೆಯ ಕೊಠಡಿಗಳನ್ನು ದುರಸ್ಥೆ ಮಾಡಬೇಕು ಎಂದರು.
