ಲಕ್ನೋ:
ಉತ್ತರಪ್ರದೇಶದ ಮಹಿಳೆಯೊಬ್ಬಳು ನನಗೆ ಸಿಎಂ ಯೋಗಿ ಆದಿತ್ಯನಾಥ್ ರಾತ್ರಿ ವೇಳೆ ಕರೆ ಮಾಡುತ್ತಾರೆ ಎಂದು ಹೇಳಿದ್ದಾರೆ.ಕಾನ್ಪುರ ಮೂಲದ ಹೇಮಾ ಸಕ್ಸೇನಾ ಎಂಬಾಕೆ ಈ ಹೇಳಿಕೆ ನೀಡಿದ ಮಹಿಳೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಬಂದು ಮಾತನಾಡಿದ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಾನು ಪ್ರೀತಿಸುತ್ತಿದ್ದೇನೆ.
ಯೋಗಿ ಆದಿತ್ಯನಾಥ್ ಕೂಡ ನನ್ನ ಬಗ್ಗೆ ಇದೇ ರೀತಿಯ ಭಾವನೆ ಹೊಂದಿದ್ದಾರೆ. ಸಿಎಂ ರಾತ್ರಿ ವೇಳೆ ನನಗೆ ವೀಡಿಯೊ ಕರೆ ಮಾಡುತ್ತಾರೆ ಎಂದು ಹೇಳಿದ್ದಾಳೆ.ಯೋಗಿ ಆದಿತ್ಯನಾಥ್ ಕಳೆದ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಯೋಗಿ ಆದಿತ್ಯನಾಥ್ ಹೊರಗೆ ಬಂದು ತನ್ನನ್ನು ಭೇಟಿಯಾಗಬೇಕು. ಯೋಗಿ ಇತ್ತೀಚಿಗೆ ನನ್ನ ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಕೋರಿದ್ದರು ಎಂದು ಹೇಳಿದ್ದಾರೆ.
ಆದರೆ ಹೇಮಾಳ ತಾಯಿ ಈ ಬಗ್ಗೆ ಮಾತನಾಡಿ, ಹೇಮಾಳ ಮಾನಸಿಕ ಆರೋಗ್ಯ ಸ್ಥಿರವಾಗಿಲ್ಲ, ಅದಕ್ಕಾಗಿಯೇ ಈ ರೀತಿಯ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾಳೆ ಎಂದು ಹೇಳಿದ್ದಾರೆ.








