ಶಾಲಾ ವಿದ್ಯಾರ್ಥಿ ನಿಗೂಢ ಸಾವಿನ ಪ್ರಕರಣ : ಪೊಷಕರಿಗೆ ಪರಿಹಾರದ ಚೆಕ್‌ ವಿತರಣೆ

ಕೊರಟಗೆರೆ 

   ಏಕಲವ್ಯ ಶಾಲೆಯಲ್ಲಿ ಇತ್ತೀಚಿಗೆ ನಿಗೂಢವಾಗಿ ಸಾವಿಗೀಡಾದ 8ನೇ ತರಗತಿಯ ವಿದ್ಯಾರ್ಥಿ ಅಭಿಲಾಶ್ ಪೋಷಕರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಚಿವ ಡಾ. ಜಿ ಪರಮೇಶ್ವರ್ 2 ಲಕ್ಷ ಪರಿಹಾರ ಹಣವನ್ನು ವಿತರಣೆ ಮಾಡಿದರು.

   ಕೊರಟಗೆರೆ ತಾಲೂಕಿನ ಶಕುನಿ ತಿಮ್ಮನಹಳ್ಳಿ ಗ್ರಾಮದ ವಾಸಿ ರಮೇಶ ಹಾಗೂ ಮಂಜುಳಾ ಎಂಬುವರ ದಂಪತಿಗಳ ಮಗನಾದ ಅಭಿಲಾಷ್ 8ನೇ ತರಗತಿ ವಿದ್ಯಾರ್ಥಿಯಾಗಿದ್ದು, ಆತನ ಕೊಠಡಿಯಲ್ಲಿ ಅನುಮಾನ ಸ್ಪರ್ಧವಾಗಿ ಬಾಯಿ ಹಾಗೂ ಮೂಗಿನಲ್ಲಿ ನೊರೆಭರಿತ ರಕ್ತಸ್ರಾವ ಮಾಡಿಕೊಂಡು ಅನುಮಾನಾಸ್ಪದವಾಗಿ ಸಾವಿಗೆ ಡಾಗಿದ್ದು ಆತನ ಕುಟುಂಬಕ್ಕೆ ಡಾ. ಜಿ ಪರಮೇಶ್ವರ್ ಜಿಲ್ಲಾಡಳಿತ, ತಾಲೂಕ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ವತಿಯಿಂದ 2 ಲಕ್ಷ ಪರಿಹಾರ ಹಣವನ್ನ ವಿತರಿಸಿದರು.

   ಮೃತ ಅಭಿಲಾಷ್ ವಿದ್ಯಾರ್ಥಿ ನಿಲಯದಲ್ಲಿ ಬೆಳಿಗ್ಗೆ ತಿಂಡಿ ಮುಗಿಸಿ ಕೊಂಡು ಶಾಲೆಗೆ ಹೋದವನು ನಂತರ 1:30ರ ನಂತರ ಕೊಠಡಿ ಸೇರಿದವನು, ಸಹ ವಿದ್ಯಾರ್ಥಿಗಳು ಕೊಠಡಿಗೆ ಬಂದು ಮಧ್ಯಾಹ್ನದ ಊಟಕ್ಕೆ ಹೋಗಲು ಹಲವಾರು ಬಾರಿ ಕರೆದರೂ ಸಹ ಯಾಕೋ ಮೈ ಗೆ ಹುಷಾರಿಲ್ಲ ನನಗೆ ಹೆಂಗೆ ಹೆಂಗೋ ಆಗುತ್ತಿದೆ ನನಗೆ ಊಟ ಬೇಡ ಎಂದು ಮಲಗಿದ್ದವನು ನಂತರ ವಿದ್ಯಾರ್ಥಿಗಳು ಊಟ ಮುಗಿಸಿ ಅರ್ಧ ತಾಸು ಕಳೆದ ನಂತರ ಬಂದು ನೋಡಿದಾಗ ಬಾಯಿ ಮೂಗು ನಲ್ಲಿ ನೊರೆ ಬರುತ್ತಿದ್ದನ್ನು ಕಂಡು ಮಾತನಾಡಿಸಿದರು ಮಾತನಾಡದ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ಶಿಕ್ಷಕರುಗಳ ಮುಖ್ಯನಾ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗಲಿ ಕೊನೆ ಉಸಿರೆಳೆದಿರುತ್ತಾನೆ ಈ ಪ್ರಕರಣ ದೊಡ್ಡಮಟ್ಟದ ಸುದ್ದಾಗಿ ಪೋಷಕರ ವಿರೋಧದ ನಡುವೆ ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದು , ಮೃತ ಅಭಿಲಾಷ್ ತಾಯಿ ಮನೆಯಲ್ಲಿ ಅಂತ್ಯಕ್ರಿಯೆ ನಡೆಯುವ ಮೂಲಕ ಸುಖಾಂತ್ಯ ಕಂಡಿದೆ.

   ಒಟ್ಟರೆ ಈ ಪ್ರಕರಣ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಧುಗಿರಿ ಉಪ ವಿಭಾಗಾಧಿಕಾರಿ ಡಿ ಎಸ್ ಪಿ ರಾಮಚಂದ್ರಪ್ಪ, ತಾಸಿಲ್ದಾರ್ ಮಂಜುನಾಥ್, ಸಿಪಿಐ ಅನಿಲ್ ಕುಮಾರ್, ಪಿಎಸ್ಐ ಚೇತನ್ ಗೌಡ, ಯೋಗೇಶ್, ಮಂಜುನಾಥ್ ವಿದ್ಯಾರ್ಥಿ ನಿಲಯದಲ್ಲಿ ಕುಲಂಕುಶವಾಗಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಕಸ್ತಾಂತರಿಸಿದ ನಂತರ ವಿದ್ಯಾರ್ಥಿಯ ಮೃತ ದೇಹ ಅಂತ್ಯಕ್ರಿಯೆ ನಡೆಯುವವರೆಗೂ ಡಾ ಜಿ ಪರಮೇಶ್ವರ್ ಅವರ ವಿಶೇಷ ಅಧಿಕಾರಿ ಡಾ.ನಾಗಯ್ಯ, ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವತ್ ನಾರಾಯಣ್, ಪರಮೇಶ್ವರ್ ಆಪ್ತ ಸಹಾಯಕ ಅರವಿಂದ್ ಪ್ರಕರಣದ ಸುಖಾಂತ್ಯದವರೆಗೂ ಜೊತೆಯಲ್ಲಿದ್ದು ತಂದೆ ತಾಯಿಗಳನ್ನ ಹಾಗೂ ಪೋಷಕರನ್ನ ಸಮಾಧಾನಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರನ್ನ ಾಸ್ಟಲ್‍ಗೆ ಹಾಗೂ ನಿಮ್ಮ ಮನೆಗೆ ಭೇಟಿ ನೀಡಿ ಸರ್ಕಾರದಿಂದ ಮೃತ ವಿದ್ಯಾರ್ಥಿ ಕುಟುಂಬಕ್ಕೆ ಏನು ಪರಿಹಾರ ಸಿಗಬೇಕು ಅಷ್ಟನ್ನು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪರಮೇಶ್ವರ್ ಅವರ ಆದೇಶವನ್ನ ಪೋಷಕರ ಮುಂದಿಟ್ಟು ಮೃತ ವಿದ್ಯಾರ್ಥಿಯ ಪೋಷಕರ ಆಕ್ರೋಶ ಅಸಮಾಧಾನವನ್ನ ತಣ್ಣಗಾಗಿಸಿ ಇಡೀ ಪ್ರಕರಣವನ್ನು ಸುಖಾಂತ್ಯಗೊಳಿಸುವಲ್ಲಿ ಯಶಸ್ವಿಯಾದರು.

ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸಹಾಯ ಹಸ್ತ

    ಮೃತ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನೂಂದಿಗೆ ನಿಖಟ ಸಂಪರ್ಕದೊಂದಿಗೆ ಈ ಒಂದು ಪ್ರಕರಣ ಸುಖಾಂತ್ಯ ಕಾಣುವವರೆಗೂ ಕೊರಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ ನಾರಾಯಣ್ ,ತಹಶೀಲ್ದಾರ್ ಲ್ದಾರ್ ಮಂಜುನಾಥ್ ಸಿಪಿಐ ಅನಿಲ್ ಸತತ ಪ್ರಯತ್ನ ಪಟ್ಟು ಅಂತ್ಯಕ್ರಿಯೆ ಸಂದರ್ಭದಲ್ಲಿ2 ಲಕ್ಷ ಪರಿಹಾರವನ್ನು ನೀಡಿದ್ದಲ್ಲದೆ 

  ಸಿಎಂ ನಿಧಿಯಿಂದ ಸೇರಿದಂತೆ ಇನ್ನಿತರ ಸರ್ಕಾರಿ ಇಲಾಖೆಗಳಿಂದ ಎಷ್ಟು ಪರಿಹಾರ ಕಲ್ಪಿಸಲು ಸಾಧ್ಯವೊ ಅಷ್ಟು ಅವರ ಕುಟುಂಬಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ಪಟ್ಟು 2 ಲಕ್ಷ ಪರಿಹಾರ ನೀಡಿದ್ದಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಹಾರ ನೀಡುವಂತ ಭರವಸೆಯನ್ನ ಕುಟುಂಬಕ್ಕೆ ಒಬ್ಬನೇ ಮಗನಿದ್ದ ಕಾರಣ ಪೋಷಕರಿಗೆ ಧೈರ್ಯ ತುಂಬಿದಲ್ಲದೆ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಗುವಿಗೆ ವಿದ್ಯಾಭ್ಯಾಸದ ಪೂರ್ಣ ಜವಾಬ್ದಾರಿಯನ್ನ ಜಿಲ್ಲಾ ಉಸ್ತುವಾರಿ ಸಚಿವರು ವಹಿಸಿಕೊಳ್ಳಲಿದ್ದಾರೆ, ಆತನ ಪೋಷಕರು ಯಾವುದೋ ಗಾರ್ಮೆಂಟ್ಸ್ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಶಾಶ್ವತವಾಗಿ ಒಂದು ಯಾವುದಾದರೂ ಒಂದು ಹಾಸ್ಟೆಲ್ ನಲ್ಲಿ ಕಾರ್ಯನಿರ್ವಹಿಸುವಂತಹ ಅವಕಾಶ ಕಲ್ಪಿಸಿ ಕೊಡುವುದಾಗುವುದು ಎಂದು ಭರವಸೆ ನೀಡಿದರು.

   ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಅವರ ಆದೇಶದ ಮೇರೆಗೆ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್, ಪರಮೇಶ್ವರ್ ವಿಶೇಷ ಅಧಿಕಾರಿ ಡಾ. ನಾಗಣ್ಣ , ತಹಸಿಲ್ದಾರ್ ಮಂಜುನಾಥ್, ಸಿಪಿಐ ಅನಿಲ್, ಪಿಎಸ್ಐ ಚೇತನ್ ಗೌಡ, ಯೋಗೇಶ್ , ಮಂಜುನಾಥ್ , ತಾ.ಪಂ ಇ ಓ ಅಪೂರ್ವ ಅನಂತರಾಮು, ತಾ. ಪಂ ವ್ಯವಸ್ಥಾಪಕ ಮಧುಸೂದನ್, ಮುಖಂಡರುಗಳಾದ ರಂಗಧಾಮಯ್ಯ, ಶಿವಣ್ಣ, ನಂಜುಂಡಯ್ಯ, ರಘುನಂದನ್ ಸೇರಿದಂತೆ ಹಲವರು ಹಾಜರಿದ್ದರು.

   ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್, ಪಿಎಸ್ಐ ಚೇತನ್ ಗೌಡ, ಯೋಗೇಶ್ ,ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Recent Articles

spot_img

Related Stories

Share via
Copy link
Powered by Social Snap