ಶುರುವಾಯ್ತು ಐ ಫೋನ್‌ 15 ಮಾರಟ : ಸ್ಟೋರ್‌ ಎದುರು ಜಮಾಯಿಸಿದ ಜನ

ಮುಂಬೈ
 
       iPhone 15 ಮಾರಾಟ ಆರಂಭವಾಗಿದ್ದು, ಇದನ್ನು ಖರೀದಿಸಲು ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇನ್ನು ಮುಂಬೈನ BKC ದೇಶದ ಮೊದಲ ಆಪಲ್-ಮಾಲೀಕತ್ವದ ಔಟ್‌ಲೆಟ್ ಆಗಿದ್ದು, ಇಲ್ಲಿ 100 ತಂಡದ ಸದಸ್ಯರಿದ್ದಾರೆ.ಅಲ್ಲದೇ ಒಟ್ಟಾಗಿ 20 ಭಾಷೆಗಳನ್ನು ಮಾತನಾಡುವ ಚಾಕಚಕ್ಯತೆ ಈ ಸಿಬ್ಬಂದಿಗಳಲ್ಲಿದೆ ಎಂಬುವುದು ಮತ್ತೊಂದು ವಿಶೇಷ ಎಂದು ಕಂಪನಿ ಹೇಳಿದೆ.
    ಮುಂಬೈನಲ್ಲಿ ಆಪಲ್ ಸ್ಟೋರ್‌ ಪ್ರಾರಂಭ ಆಗಿರುವುದರಿಂದ ದೇಶದಲ್ಲಿ ಕಂಪನಿಯ ಕಾರ್ಯಾಚರಣೆಗಳ ಗಮನಾರ್ಹ ವಿಸ್ತರಣೆಯನ್ನು ಸೂಚಿಸುತ್ತದೆ, ಇದು ಭವಿಷ್ಯದ ಬೆಳವಣಿಗೆಗೆ ಹೆಚ್ಚು ಮಹತ್ವದ್ದಾಗಿದೆ ಎಂಬುವುದು ಉಲ್ಲೇಖನೀಯ.

    ಇನ್ನು ಐಫೋನ್​ 15 ಸೀರಿಸ್ ಮಾರಾಟ ಆರಂಭವಾಗುವ ಮೊದಲೇ ಇದರ ಬೆಲೆಯಲ್ಲಿ ಭಾರೀ ರಿಯಾಯಿತಿ​ ಘೋಷಿಸಲಾಗಿದ್ದು, ಈ ಮೂಲಕ ಬಳಕೆದಾರರು 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಐಫೋನ್ 15 ಫೋನ್ ಖರೀದಿಸಬಹುದು. ಹೌದು ಆಪಲ್ ಕಂಪನಿ ಬಿಡುಗಡೆ ಮಾಡಿರುವ iPhone 15 ಸರಣಿಯ (iPhone 15) ಮಾಡೆಲ್‌ಗಳ ಮಾರಾಟವು ಸೆಪ್ಟೆಂಬರ್ 22 ರಿಂದ ಅಂದರೆ ಇಂದಿನಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಪ್ರಿಬುಕಿಂಗ್‌ಗಳಿಗೆ ಉತ್ತಮ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟು ಕೊಂಡು, ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಐಫೋನ್ 15 ಖರೀದಿಸಲು ಅನೇಕರು ಆಸಕ್ತಿ ತೋರಿಸುತ್ತಾರೆ.

 ಹಾಗಾಗಿ ಆದಷ್ಟು ಬೇಗ ಅವುಗಳನ್ನು ಬುಕ್ ಮಾಡುವುದು ಉತ್ತಮ. ಭಾರತದಲ್ಲಿ iPhone 15 ಮೂಲ ಆವೃತ್ತಿಯ ಬೆಲೆ ರೂ.79,900 ರಿಂದ ಪ್ರಾರಂಭವಾಗುತ್ತದೆ. ಆದರೆ ರೂ.50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಅವಕಾಶವಿದೆ. ವಾಸ್ತವವಾಗಿ, ಭಾರತದಲ್ಲಿನ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಆಯಪಲ್ ಸ್ಟೋರ್‌ನಂತಹ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಐಫೋನ್ 15 ನ ಬೆಲೆ ಒಂದೇ ಆಗಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap