ಶಿರಸಿ :
ನ್ಯಾಯಾಲಯದ ವಾರೆಂಟ್ ಆರೋಪಿ ಸಂಜಯ್ ಎಂ ಗಜಕೋಶ ಸಾ // ವಿಜಯಪುರ ಈತ ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದು, ಡಿ ಎಸ್ ಪಿ ಶಿರಸಿ ,ಸಿ ಪಿ ಐ ಶಿರಸಿ ಮತ್ತು ಪಿ ಎಸ್ ಐ ಶಿರಸಿ ಹೊಸ ಮಾರುಕಟ್ಟೆಪೊಲೀಸ್ ಠಾಣೆ ರವರ ಮಾರ್ಗದರ್ಶನದಲ್ಲಿ ಇಂದು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸ್ ಸಿಬ್ಬಂದಿಗಳಾದ ಪ್ರದೀಪ ನಾಯಕ ಮತ್ತು ಮಲ್ಲೇಶಿ ಅರಳಗುಂಡಗಿ ಇವರು ಬಿಜಾಪುರದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
