ಅಸ್ಸಾಂ : ತಪ್ಪಿಸಿಕೊಂಡು ಕೆರೆಗೆ ಹಾರಿದ ಅತ್ಯಾಚಾರ ಆರೋಪಿ ಸಾವು

ಗುವಾಹಟಿ:

   ಅಸ್ಸಾಂನ ಧಿಂಗ್‌ನಲ್ಲಿ 14 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಕೊಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ತಫಜುಲ್ ಇಸ್ಲಾಂ ಎಂದೂ ಕರೆಯಲ್ಪಡುವ ತಫೀಕುಲ್ ಇಸ್ಲಾಂನನ್ನು ಪೊಲೀಸರು ಶನಿವಾರ ಮುಂಜಾನೆ ಅಪರಾಧ ಸ್ಥಳಕ್ಕೆ ಮಹಜರು ಮಾಡಲು ಕರೆದೊಯ್ದಿದ್ದರು. ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿರುವಾಗ ಇಸ್ಲಾಂ ಪರಾರಿಯಾಗಲು ಯತ್ನಿಸಿ ಸಮೀಪದ ಕೆರೆಗೆ ಹಾರಿದ್ದಾನೆ ಎಂದು ನಾಗಾನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸ್ವಪ್ನನಿಲ್ ದೇಕಾ ತಿಳಿಸಿದ್ದಾರೆ. ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿತ್ತು. ಪ್ರಕರಣದ ಮರುಸೃಷ್ಠಿಗೆ ಆತನನ್ನು ಶನಿವಾರ ಮುಂಜಾನೆ 3.30ಕ್ಕೆ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಪೊಲೀಸ್‌ ವಶದಿಂದ ಆರೋಪಿ ತಪ್ಪಿಸಿಕೊಂಡ ಆರೋಪಿ ಕೆರೆಗೆ ಹಾರಿದ್ದಾನೆ. ತಕ್ಷಣವೇ ಆತನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಯಿತು. ಸುಮಾರು ಎರಡು ತಾಸಿನ ಬಳಿಕ ಮೃತದೇಹ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link