ಮಧುಗಿರಿ:
ವಿವಾಹದ ಆಮಂತ್ರಣದ ನೆಪದಲ್ಲಿ ತೋಟದಲ್ಲಿನ ಒಂಟಿ ಮನೆಗೆ ನುಗ್ಗಿ ವೃದ್ದೆಯ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಘಟನೆ ನಡೆದ 24 ಗಂಟೆಯೊಳಗೆ ಮಧುಗಿರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ನಡೆದಿದೆ.
ತಾಲೂಕಿನ ಕಸಬಾ ವ್ಯಾಪ್ತಿಯ ವಡೇರಹಳ್ಳಿಯ ಗ್ರಾಮದ ವಾಸಿ ಕಾಂತಮ್ಮ(55)ಗ್ರಾಮದಲ್ಲಿನ ತೋಟದ ಒಂಟಿ ಮನೆಯಲ್ಲಿದ್ದಾಗ ಆರೋಪಿಯೊಬ್ಬ ಮನೆಯ ಸಮೀಪ ಆಗಮಿಸಿ ವಿವಾಹದ ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ ವೃದ್ದೆಯನ್ನು ಪುಸಲಾಯಿಸಿ ಆಕೆಯ ಕಣ್ಣಿಗೆ ಕಾರದ ಪುಡಿ ಎರಚಿ ವೃದ್ದೆಯ ಬಳಿಯಿದ್ದ ಸುಮಾರು 3.5ಲಕ್ಷ ಬೆಲೆ ಬಾಳುವ 55 ಗ್ರಾಂ.ತೂಕದ ಮಾಂಗಲ್ಯ ಸರವನ್ನು ಜೂನ್.2 ರ ಬೆ.11:40 ರ ಸಮಯದಲ್ಲಿ ಕಿತ್ತು ಪರಾರಿಯಾಗಿದ್ದ ವೃದ್ದೆ ನೀಡಿದ ದೂರಿನ ಅನ್ವಯ ಮಧುಗಿರಿ ಠಾಣೆಯ ಸಿಪಿಐ ಹನುಮಂತರಾಯಪ್ಪ,ಪಿಎಸ್ ಐಗಳಾದ ಮುತ್ತುರಾಜು
ವಿಜಯ್ ಕುಮಾರ್ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಸುಮಾರು 48 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಬಂಧಿತ ಆರೋಪಿಯು ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಸದಸ್ಯ ನೆಂದು ತಿಳಿದು ಬಂದಿದ್ದು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.








