ಕೊರಟಗೆರೆ :
ಲೋಕೋಪಯೋಗಿ ಇಲಾಖೆಯಲ್ಲಿ ಕಾನೂನು ಬಾಹಿರವಾಗಿ 8 ಕೋಟಿ ತುಂಡುಗುತ್ತಿಗೆ ನೆಪದಲ್ಲಿ ಹಣ ದುರುಪಯೋಗವಾಗಿರುವ ಸುದ್ದಿ ಪ್ರಜಾಪ್ರಗತಿಯಲ್ಲಿ ಬಿತ್ತರಿಸಿದ ಕೆಲವೇ ದಿನಗಳಲ್ಲಿ ಕೊರಟಗೆರೆ ಕಾರ್ಯಪಾಲಕ ಇಂಜಿನಿಯರ್ ಕೆ.ಎಸ್ ಸ್ವಾಮಿ ತಲೆದಂಡವಾಗಿದ್ದು, ಈ ಅಧಿಕಾರಿಯನ್ನ ಯಾವುದೇ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆಗೊಳಿಸುವ ಮೂಲಕ ಪ್ರಜಾ ಪ್ರಗತಿ ಸುದ್ದಿಗೆ ಪಾಲಶ್ರುತಿ ದೊರಕಿದೆ.
ಕೊರಟಗೆರೆ ಲೋಕೋಪಯೋಗಿ ಇಲಾಖೆಯಲ್ಲಿ 2022- 23 ಹಾಗೂ 23 24 ನೇ ಸಾಲಿನ ಲೆಕ್ಕ ಶೀರ್ಷಿಕೆ 30:54 ರಾಜ್ಯ ಹೆದ್ದಾರಿ ಮುಖ್ಯ ರಸ್ತೆಗಳ ನಿರ್ವಹಣೆ, 20:59 ಲೆಕ್ಕ ಶೀರ್ಷಿಕೆ ಕಟ್ಟಡ ದುರಸ್ತಿ 22:16 ಲೋಕೋಪಯೋಗಿ ವಸತಿ ಹಾಗೂ ನ್ಯಾಯಾಂಗ ವಸತಿ ದುರಸ್ತಿ ನಿರ್ವಹಣೆ ಸೇರಿದಂತೆ ಇನ್ನಿತರ 787.10 ಲಕ್ಷ (7 ಕೋಟಿ ಎಪ್ಪತ್ತೆಂಟು ಲಕ್ಷದ 10 ಸಾವಿರ ) ಹಣ ತುಂಡು ಗುತ್ತಿಗೆ ನೆಪದಲ್ಲಿ ಕಾರ್ಯಪಾಲಕ ಇಂಜಿನಿಯರ್ ಸುರೇಶ ಕಾರ್ಯ ಪಾಲ ಇಂಜಿನಿಯರ್ ಕೆ ಸ್ವಾಮಿ ದುರುಪಯೋಗ ಪಡಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಬಿತ್ತರವಾದ ಸುದ್ದಿಗೆ ಅಧಿಕಾರಿಯ ತಲೆತಂಡವಾಗುವ ಮೂಲಕ ಪ್ರಜಾ ಪ್ರಗತಿ ಸುದ್ದಿಗೆ ಫಲ ಶ್ರುತಿ ದೊರಕಿದೆ.
ಲೋಕೋಪಯೋಗಿ ಇಲಾಖೆಯಲ್ಲಿ ನಿಯಮಾನುಸರ ಕೇವಲ ಹತ್ತು ಸಾವಿರ ಅನುದಾನ ಸಹ ಆನ್ಲೈನ್ ಟೆಂಡರ್ ಇಲ್ಲದೆ ತುಂಡುಗುತ್ತಿಗೆ ನೀಡುವಂತಿಲ್ಲ ಎಂದು ಸರ್ಕಾರಿ ಆದೇಶ ಇದ್ದರೂ ಸಹ ತುಮಕೂರು ಜಿಲ್ಲೆಯ ಮಧುಗಿರಿ ಲೋಕೋಪಯೋಗಿ ಇಲಾಖೆಯ ಈ ಹಿಂದಿನ ಕಾರ್ಯ ಪಾಲಕ ಎಂಜಿನಿಯರ್ ಸುರೇಶ್ ಹಾಗೂ ಕೊರಟಗೆರೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕೆ ಎಸ್ ಸ್ವಾಮಿ ಈ ಇಬ್ಬರು ಅಧಿಕಾರಿಗಳು 7 ಕೋಟಿ 87 ಲಕ್ಷ ಹಣವನ್ನು ತುಂಡುಗುತ್ತಿಗೆ ನೆಪದಲ್ಲಿ ದುರುಪಯೋಗವಾಗಿದೆ ಎಂಬ ಆರೋಪದಡಿ ಪ್ರಜಾ ಪ್ರಗತಿ ಸುದ್ದಿ ಬಿತ್ತರವಾದ ಕೆಲವೇ ದಿನದಲ್ಲಿ ಕೊರಟಗೆರೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕೆ ಎಸ್ ಸ್ವಾಮಿ ವರ್ಗಾವಣೆಯಾಗುವ ಮೂಲಕ ಪ್ರಜಾ ಪ್ರಗತಿ ಸುದ್ದಿಗೆ ಫಲ ಶ್ರುತಿ ದೊರಕಿದೆ.
ಕೊರಟಗೆರೆ ಲೋಕೋಪಯೋಗಿ ಇಲಾಖೆಯಲ್ಲಿ ಆನ್ಲೈನ್ ನಲ್ಲೂ ಅದೇ ಕಾಮಗಾರಿ ತುಂಡು ಗುತ್ತಿಗೆಯಲ್ಲೂ ಅದೇ ಕಾಮಗಾರಿ ನಿರ್ವಹಣೆಯನ್ನು ತೋರಿಸಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿರುವುದಲ್ಲದೆ ಕೆಲವೊಂದು ಕಾಮಗಾರಿಗಳು ಬಹಳಷ್ಟು ಕಳಪೆ ಮಟ್ಟದಲ್ಲಿದೆ ಎಂದು ಸಾರ್ವಜನಿಕರು ಆರೋಪಿಸಿತ ಹಿನ್ನೆಲೆಯಲ್ಲಿ ಜೊತೆಗೆ ಕೊರಟಗೆರೆ ಲೋಕೋಪಯೋಗಿ ಇಲಾಖೆಯಲ್ಲಿ ಎಲ್ ಓ ಸಿ ವಿಚಾರದಲ್ಲಿ ನಡೆಯಲಾಗಿರುವ ಹಗರಣ ಸಹ ಅಧಿಕಾರಿಗಳ ವಿರುದ್ಧ ಹೇಳಿ ಬಂದಿದ್ದು,
ಇದಲ್ಲದೆ ಬಹಳಷ್ಟು ಕಾಮಗಾರಿಗಳ ಲೋಪ ದೋಷಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಪದ ಮೇರೆಗೆ ಪ್ರಜಾ ಪ್ರಗತಿ ಪತ್ರಿಕೆಯಲ್ಲಿ ಸುದ್ದಿ ಬಿತ್ತರವಾದ ಕೆಲವೇ ದಿನಗಳಲ್ಲಿ ಕೊರಟಗೆರೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕೆ ಸ್ವಾಮಿ ಅವರನ್ನ ವರ್ಗಾವಣೆಗೊಳಿಸಲಾಗಿದ್ದು, ಇವರ ಕಾರ್ಯವೈಖರಿಯ ವಿರುದ್ಧವಾಗಿ ಇವರನ್ನು ವರ್ಗಾವಣೆಗೊಳಿಸಿ ಯಾವುದೇ ಸ್ಥಳ ನಿಯೋಜನೆಗೊಳಿಸದೆ ಅವರ ಹುದ್ದೆಯನ್ನು ಕಾಯ್ದಿರಿಸಲಾಗಿದ್ದು ಇವರ ಅವಧಿಯ ಪೂರ್ಣ ಕಾಮಗಾರಿಗಳನ್ನ ಉನ್ನತಮುಟ್ಟದ ತನಿಖೆ ಅಥವಾ ಲೋಕಾಯುಕ್ತ ಇಲಾಖಾ ತನಿಕೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.








