ತೆಲಂಗಾಣ:ಖತರ್ನಾಕ್ ದಂಪತಿಯ ಬಂಧನ : ಕಾರಣ ಕೇಳಿದ್ರೆ ಷಾಕ್‌ ಆಗೋದು ಪಕ್ಕಾ…!

ತೆಲಂಗಾಣ: 

    ಆಘಾತಕಾರಿ ಘಟನೆಯೊಂದರಲ್ಲಿ ಹಣಕ್ಕಾಗಿ ಮೊಬೈಲ್ ಆ್ಯಪ್ ನಲ್ಲಿ ಲೈಂಗಿಕ ಚಟುವಟಿಕೆಯ ಲೈವ್ ಸ್ಟ್ರೀಮಿಂಗ್ ಆರೋಪದ ಮೇಲೆ ಖತರ್ನಾಕ್ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

    ಲೈವ್ ಲಿಂಕ್ ವೀಕ್ಷಿಸಲು ಗ್ರಾಹಕರಿಗೆ ಶುಲ್ಕ ವಿಧಿಸಲಾಗುತಿತ್ತು. ಲೈವ್ ಸ್ಟ್ರೀಮ್‌ ಸಮಯದಲ್ಲಿ ವೃತ್ತಿಯಲ್ಲಿ ಕಾರ್ ಡ್ರೈವರ್ ಆಗಿರುವ ವ್ಯಕ್ತಿ (41) ಮತ್ತು ಅವರ ಪತ್ನಿ (37) ತಮ್ಮ ಗುರುತನ್ನು ಮರೆಮಾಚಲು ಮಾಸ್ಕ್ ಧರಿಸಿದ್ದರು ಎಂದು ವರದಿಯಾಗಿದೆ.

    ಲೈವ್ ಲಿಂಕ್ ವೀಕ್ಷಿಸಲು ರೂ.2,000 ಶುಲ್ಕ ವಿಧಿಸಲಾಗುತಿತ್ತು. ರೆಕಾರ್ಡ್ ಮಾಡಿದ ವಿಡಿಯೋಗಳಿಗೆ ರೂ. 500 ಶುಲ್ಕ ವಿಧಿಸುತ್ತಿದ್ದರು. ಅಲ್ಲದೇ ತಮ್ಮ ವಿಡಿಯೋಗಳನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಹಣ ತೆಗೆದುಕೊಂಡು ಗ್ರಾಹಕರಿಗೆ ಲಿಂಕ್ ಕಳುಹಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಕಳೆದ ನಾಲ್ಕು ತಿಂಗಳಿನಿಂದ ಈ ದಂಪತಿ ತಮ್ಮ ನಗ್ನ ವಿಡಿಯೋಗಳನ್ನು ಇನ್ಸಾಟಾಗ್ರಾಂ ಮತ್ತಿತರ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ‘ಸ್ವೀಟ್ ತೆಲುಗು ಕಪಲ್ 2027 ‘ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ದೊರೆತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದು, ದಂಪತಿ ಬಂಧಿಸಲಾಗಿದೆ. ದಾಳಿ ವೇಳೆಯಲ್ಲಿ ಲೈವ್ ಲಿಂಕ್ ಹಂಚಿಕೆಗೆ ಬಳಸಲಾದ ಕ್ಯಾಮರಾಗಳು, ಲೈವ್ ಸ್ಟ್ರೀಮಿಂಗ್ ಸಾಧನಗಳು, ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

   ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯದಲ್ಲಿ ತೊಡಗಿದ್ದಾಗಿ ದಂಪತಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link