ಬೆಂಗಳೂರು:
90ರ ದಶಕದ ಹುಡುಗರ ಕನಸಿನ ಬೈಕ್ ಎಂದೇ ಕರೆಸಿಕೊಂಡ ಹೀರೋ ಕರಿಜ್ಮಾ ಹೊಸ ರೂಪ ದೊಂದದಿಗೆ ಬೈಕ್ ಬಿಡುಗಡೆ ಮಾಡುವುದಾಗಿ ಹೇಳಿ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಹೊಸ ಕರಿಜ್ಮಾ ಸ್ಪೋರ್ಟ್ಸ್ ಬೈಕ್ 2023ರ ಆಗಸ್ಟ್ 29 ರಂದು ಬಿಡುಗಡೆಯಾಗಲಿದೆ.
ಹೊಸ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ದಿ ರಿಟರ್ನ್ ಆಫ್ ದಿ ರಿಟರ್ನ್” ಎಂದು ಬರೆದುಕೊಂಡಿದೆ. ಈ ಹೊಸ ಬೈಕಿನ ಬಿಡುಗಡೆ ಕಾರ್ಯಕ್ರಮವು ಗುರುಗ್ರಾಮ್‌ನಲ್ಲಿ ನಡೆಯಲಿದೆ. ಆದರೆ 2023ರ ಹೀರೋ ಕರಿಜ್ಮಾದ ಅಧಿಕೃತ ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ನಮಗೆ ಈ ಹೊಸ ಹೀರೋ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಬಗ್ಗೆ ತಿಳಿದಿರುವ ಮಾಹಿತಿಗಳು ಇಲ್ಲಿದೆ.
ಹೀರೋ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಹೊಸ 210cc ಎಂಜಿನ್‌ನೊಂದಿಗೆ ಬರುವ ಸಾಧ್ಯತೆಯಿದೆ. ಈ ಎಂಜಿನ್ ಅನ್ನು ಪವರ್ ಫುಲ್ ಆಗಿ ಪರಿಷ್ಕರಿಸುವ ನಿರೀಕ್ಷೆಯಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ ಅನ್ನು 25bhp ಮತ್ತು 30Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಹೊಸ ಹೀರೋ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಕ್ಷನ್ ಅನ್ನು ಒಳಗೊಂಡಿರಬಹುದು. ಇನ್ನು ಸುರಕ್ಷತೆ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಹೊಂದಿರಲಿವೆ.
ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ, ಡ್ಯುಯಲ್-ಚಾನೆಲ್ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಸ್ಟ್ಯಾಂಡರ್ಡ್ ಫಿಟ್ಮೆಂಟ್ ಆಗಿ ನೀಡಬಹುದು. ಹೊಸ ಹೀರೋ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಬೆಲೆಯು ಬಿಡುಗಡೆಯ ವೇಳೆ ಬಹಿರಂಗಪಡಿಸುತ್ತದೆ. ರೂ. 1.50 ಲಕ್ಷದಿಂದ ರೂ 1.80 ಲಕ್ಷದವರೆಗೆ ಬೆಲೆಯನ್ನು ಹೊಂದಿದ್ದು, ಈ ಬೆಲೆಯು ಎಕ್ಸ್ ಶೋರೂಂ ಪ್ರಕಾರವಾಗಿದೆ. ಹೊಸ ಹೀರೋ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ Gixxer SF 250 ಮತ್ತು Yamaha YZF-R15 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.
ಹೀರೋ ಕರಿಜ್ಮಾ ಸ್ಪೋರ್ಟ್ಸ್ ಬೈಕ್ ಮುಂಭಾಗದ ತುದಿ, ತೀಕ್ಷ್ಣವಾದ ಸೈಡ್ ಫೇರಿಂಗ್, ಫ್ಯೂಯಲ್ ಟ್ಯಾಂಕ್ ಮತ್ತು ಸ್ಪ್ಲಿಟ್ ಸೀಟ್ ಸೆಟಪ್ ಜೊತೆಗೆ ದಪ್ಪನಾದ ಮತ್ತು ಮೊಂಡುತನದ ಎಕ್ಸಾಸ್ಟ್ ಸೆಟಪ್‌ನೊಂದಿಗೆ ತೀಕ್ಷ್ಣವಾಗಿ ಕಾಣುವ ಬೈಕ್ ಅನ್ನು ತೋರಿಸುತ್ತದೆ. ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೂ ಕಾಲಿಟ್ಟಿರುವ ಹೀರೋ ಮೋಟೊಕಾರ್ಪ್, ‘ವಿಡಾ’ ಸರಣಿ ಸ್ಕೂಟರ್ ಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದು, ಕರಿಜ್ಮಾ ಸೇರಿದಂತೆ ಮತ್ತಷ್ಟು ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಐಷಾರಾಮಿ ಬೈಕ್ ತಯಾರಕ ಹಾರ್ಲೆ ಡೇವಿಡ್‌ಸನ್ ಸಹಯೋಗದೊಂದಿಗೆ ಅತ್ಯಾಕರ್ಷಕ ಬೈಕ್ ಗಳನ್ನು ತಯಾರಿಸುತ್ತಿದ್ದು, ಇವೆರೆಡು ಕಂಪನಿಗಳಿಂದ ಅತ್ಯತ್ತಮ ದ್ವಿಚಕ್ರ ವಾಹನ ಬರುವುದು ಖಚಿತ ಎಂದು ಹೇಳಬಹುದು. ಇನ್ನು, ಮುಂಬರುವ ಕೆಲವೇ ತಿಂಗಳಲ್ಲಿ ಯುವಕರ ಹಾಟ್ ಫೇವೆರೆಟ್ ಕರಿಜ್ಮಾ ಲಾಂಚ್ ಆಗಲು ಸಜ್ಜಾಗಿದೆ. ಇದು ಯುವ ಗ್ರಾಹಕರಲ್ಲಿ ದೊಡ್ಡಮಟ್ಟದಲ್ಲಿ ನೀರಿಕ್ಷೆ ಹುಟ್ಟುಹಾಕಿದೆ. ದಶಕಗಳ ಕಾಲ ಭಾರತದ ಮಾರುಕಟ್ಟೆ ಪಾರುಪಾತ್ಯ ಮೆರೆದಿದ್ದ ಈ ಕರಿಜ್ಮಾ, ಮತ್ತೊಮ್ಮೆ ಹೇಗೆ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ