ಶೈಕ್ಷಣಿಕ ಜಿಲ್ಲೆಯಲ್ಲೇ ಮೈಲಿಗಲ್ಲೆನಿಸಿದ ವಿದ್ಯಾಪ್ರಗತಿ ಮೇಳ

ತುಮಕೂರು:

ಪ್ರಜಾಪ್ರಗತಿ-ಪ್ರಗತಿ ಟಿವಿ ಮೇಳಕ್ಕೆ ಹರಿದ ಬಂದ ವಿದ್ಯಾರ್ಥಿಗಳ ಸಮೂಹ

ಪ್ರಜಾಪ್ರಗತಿ ಪತ್ರಿಕೆ ಮತ್ತು ಪ್ರಗತಿ ಟಿವಿ ಆಡ್ 6 ಸಹಭಾಗಿತ್ವದಲ್ಲಿ ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾ.5-6ರಂದು ನಡೆದ ಬೃಹತ್ ವಿದ್ಯಾ ಪ್ರಗತಿ ಶಿಕ್ಷಣ ಮೇಳ ಶೈಕ್ಷಣಿಕ ಜಿಲ್ಲೆಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲೆನಿಸಿತು.

ಕಳೆದ ಎರಡು ತಿಂಗಳ ನಿರಂತರ ಸಿದ್ಧತೆಯಿಂದ ಅಚ್ಚುಕಟ್ಟಾಗಿ ಸಂಘಟಿತವಾದ ಈ ಶೈಕ್ಷಣಿಕ ಮೇಳದಲ್ಲಿ ರಾಜಧಾನಿ ಬೆಂಗಳೂರು, ತುಮಕೂರು ಜಿಲ್ಲೆಯ ಸುಮಾರು 40ಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳು, ಎರಡೂವರೆ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದರು. ತಮ್ಮ ಇಚ್ಚೆಯ ಕಾಲೇಜು, ಕೋರ್ಸ್‍ಗಳು, ಕಾಂಬಿನೇಷನ್‍ಗಳು ಒಂದೇ ಸೂರಿನಡಿ ತಿಳಿಯಲು ವೇದಿಕೆಯೊದಗಿಸಿದ್ದು ಮೇಳದ ವೈಶಿಷ್ಟ್ಯವೆನಿಸಿತು.

ಮೇಳದಲ್ಲಿ ಗಣ್ಯರು, ಶಿಕ್ಷಣ ತಜ್ಞರುಭಾಗಿ: ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಹಾಗೂ ಗಣ್ಯರಿಂದÀ ಲೋಗೋ ಅನಾವರಣದ ಮೂಲಕ ವಿದ್ಯಾಪ್ರಗತಿ ಮೇಳಕ್ಕೆ ಶುಭಾರಂಭ ದೊರಕಿತು. ಶನಿವಾರ ಬೆಳಿಗ್ಗೆ ರಾಮಕೃಷ್ಣಾಶ್ರಮದ ಸ್ವಾಮಿ ಜಪಾನಂದಜೀ ಅವರ ಸಮ್ಮುಖದಲ್ಲಿ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಮೇಳಕ್ಕೆ ವಿದ್ಯುಕ್ತ ಚಾಲನೆ ಕೊಟ್ಟರು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಚಿದಾನಂದ.ಎಂ.ಗೌಡ, ರಾಮಯ್ಯ ವಿವಿ ಕುಲಸಚಿವÀ ಸಾಯಿಬಾಬಾ ಸೇರಿ ಹಲವು ಗಣ್ಯರು

ಮೇಳಕ್ಕೆ ಸಾಕ್ಷಿಯಾದರು. ಬಳಿಕ ನಡೆದ ವಿವಿಧ ಗೋಷ್ಠಿಯಲ್ಲಿ ಆಚಾರ್ಯ ಸಂಸ್ಥೆಯ ವಿಶೇಷ್ ಚಂದ್ರಶೇಖರ್, ಪ್ರಣವಸ್ಯ ಅಕಾಡೆಮಿಯ ಟಿ.ಸಿ.ಜಾಗೇಂದ್ರ, ಕೌಶಲ್ಯ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕಿ ಕವಿತಾ ಎಸ್.ಗೌಡ, ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ, ನ್ಯಾಕ್ ಸಲಹೆಗಾರರಾದ ಪೊನ್‍ಮುದ್ದುರಾಜ್, ಎಸ್.ಶ್ರೀನಿವಾಸ್, ವಿಷನ್ ಗ್ರೂಪ್ ಸಂಸ್ಥೆಯ ಪ್ರಾಂಶುಪಾಲ ಡಾ.ವೆಂಕಟಾಚಲನ್,

ತುಮಕೂರು ರಾಮಕೃಷ್ಣ ವಿವೇಕಾನಂದಾಶ್ರಮ ವಿರೇಶಾನಂದಸರಸ್ವತಿ ಸ್ವಾಮೀಜಿ, ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ್ ವಾನಳ್ಳಿ, ಶಿಕ್ಷಣ ತಜ್ಞ ಸಂಜಯ್‍ಗೌಡ, ಸಿಐಟಿ ನಿರ್ದೇಶಕ ಡಾ.ಡಿ.ಎಸ್.ಸುರೇಶ್, ನಾಗಾರ್ಜುನ ನಿದೇಶಕಡಾ.ಎಸ್.ಜಿ.ಗೋಪಾಲಕೃಷ್ಣ, ಎಸ್‍ಐಟಿಯ ಡಾ.ಸುಧೀರ್ ರಂಗನಾಥ್, ಸೌಂದರ್ಯ ಗ್ರೂಪ್ ಸಿಇಒ ಕೀರ್ತನ್‍ಕುಮಾರ್ ಪಾಲ್ಗೊಂಡು ಉಪಯುಕ್ತ ಶೈಕ್ಷಣಿಕ ಮಾಹಿತಿ ಹಂಚಿಕೊಂಡರು.


ಮೇಳದ ಕೊನೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರುಗಳು ಎಲ್ಲಾ ಮಳಿಗೆಗಳವರಿಗೂನೆನಪಿನ ಕಾಣಿಕೆ ವಿತರಿಸಿ ಪ್ರೋತ್ಸಾಹಿಸಿದರು.

ಈ ಮೇಳದ ಪ್ರಧಾನ ನೇತೃತ್ವವನ್ನು ಸಂಪಾದಕರಾದ ಎಸ್.ನಾಗಣ್ಣ, ಸಹ ಸಂಪಾದಕರಾದ ಟಿ.ಎನ್.ಮಧುಕರ್, ಪ್ರಗತಿ ಟಿವಿ ಸಿಇಓ ಶಿಲ್ಪಶ್ರೀ, ಆ್ಯಡ್ 6 ಸಂಸ್ಥೆಯ ಮುಖ್ಯಸ್ಥ ಸುಧಾಕರ್,  ಸಂಸ್ಥೆಯ ಮುಖ್ಯಸ್ಥ ದೇವರಾಜು ಮತ್ತವರ ತಂಡ ವಹಿಸಿ ಯಶಸ್ವಿಗೊಳಿಸಿತು. ಜಿಲ್ಲೆಯ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ಸಾರ್ವಜನಿಕ, ಪ.ಪೂ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳವರು ಪೂರಕ ಸಹಕಾರ ನೀಡಿದರು. ಮೇಳದಲ್ಲಿ ಪಾಲ್ಗೊಂಡಿದ್ದ ಅನೇಕ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

ವಿಶ್ವದರ್ಜೆಯ ಕಲಿಕಾ ವ್ಯವಸ್ಥೆ ಪರಿಚಯಿಸಲು ಸಹಕಾರಿ

ಬೆಂಗಳೂರಿನ ಎಂ.ಎಸ್. ರಾಮಯ್ಯ ವಿವಿ ಅರವತ್ತು ವರ್ಷದ ಇತಿಹಾಸ ಹೊಂದಿದ್ದು 2013ರಲ್ಲಿ ಸ್ವಾಯತ್ತ ಯೂನಿವರ್ಸಿಟಿಯಾಗಿ ಯುಜಿಸಿ ಅಪೆÇ್ರೀವಲ್ ಆಗಿದೆ. ಡೆಂಟಲ್, ಮೆಡಿಕಲ್, ಇಂಜಿನಿಯರಿಂಗ್ ಫಾರ್ಮಸಿ, ಹೋಟೆಲ್ ಮ್ಯಾನೇಜ್ಮೆಂಟ್ ಸೇರಿದಂತೆ ಯಾವುದೇ ಒಬ್ಬ ಪಿಯುಸಿ ವಿದ್ಯಾರ್ಥಿ ತಮ್ಮ ಮುಂದಿನ ಶಿಕ್ಷಣದ ಬಗ್ಗೆ ಹೊಂದಿರುವಂತಹ ಕನಸುಗಳನ್ನು ವಿಶ್ವದರ್ಜೆಯ ಕಲಿಕಾ ವ್ಯವಸ್ಥೆ ಮೂಲಕ ಎಂಎಸ್ ರಾಮಯ್ಯ ಶಿಕ್ಷಣ ಸಂಸ್ಥೆ ಪೂರೈಸುತ್ತಿದೆ. ಇವನ್ನೆಲ್ಲ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಮೇಳ ಪೂರಕವೆನಿಸಿತು. ಇದಕ್ಕಾಗಿ ಪ್ರಜಾಪ್ರಗತಿ-ಪ್ರಗತಿ ಟಿವಿಯವರಿಗೆ ಧನ್ಯವಾದ ಹೇಳುತ್ತೇವೆ.

– ಶಿವರಾಮ, ಸಹಾಯಕ ಪ್ರಾಧ್ಯಾಪಕರು ಎಂಎಸ್ ರಾಮಯ್ಯ ವಿವಿ,

ಬೆಂಗಳೂರಿನ ಅತೀದೊಡ್ಡ ಕ್ಯಾಂಪಸ್ ಪರಿಚಯಿಸಿದ್ದೇವೆ

ನಮ್ಮ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟ್ಯೂಷನ್ ಬೆಂಗಳೂರಿನ ಪೂರ್ವ ಭಾಗದಲ್ಲಿದ್ದು, ಅತಿ ದೊಡ್ಡ ಕ್ಯಾಂಪಸ್ ಹೊಂದಿದೆ. ಮೆಡಿಕಲ್, ಎಂಜಿನಿಯರಿಂಗ್ , ಪದವಿ ಕಾಲೇಜು ಸೇರಿ ಎಲ್ ಕೆ ಜಿಯಿಂದ ಪಿಎಚ್ ಡಿ ವರೆಗೆ ಸುಮಾರು 40 ರಿಂದ 45 ಕಲಿಕಾ ವಿಭಾಗಗಳು ನಮ್ಮ ಸಂಸ್ಥೆಯಲ್ಲಿವೆ. ಮೇಳದ ಮೂಲಕ ತುಮಕೂರಿನ ಉನ್ನತ ಶಿಕ್ಷಣಾರ್ಥಿಗಳಿಗೂ ನಮ್ಮ ಸಂಸ್ಥೆ ಪರಿಚಯವಾಗಿದೆ. ಮೇಳದ ಆಯೋಜಕರಿಗೆ ಈ ನಿಟ್ಟಿನಲ್ಲಿ ಧನ್ಯವಾದ ಹೇಳಬಯಸುತ್ತೇನೆ.

-ಡಾ.ಕಾಂತರಾಜು, ಪ್ರಾಧ್ಯಾಪಕರು ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟ್ಯೂಷನ್

ಜೀವನ ಮಾರ್ಗದರ್ಶನ ನೀಡುವ ಕಾಲೇಜು

ತುಮಕೂರಿನಲ್ಲಿ ಇಂತಹ ವಿದ್ಯಾ ಪ್ರಗತಿ ಶಿಕ್ಷಣ ಮೇಳ ಆಯೋಜನೆ ಮಾಡಿರುವುದು ನಮಗೆಲ್ಲರಿಗೂ ತುಂಬಾ ಅನುಕೂಲವನ್ನು ಮಾಡಿಕೊಟ್ಟಿದೆ. ನಮ್ಮ ಕಾಲೇಜು ಬೋರ್ಡ್ ಎಕ್ಸಾಮ್ ಮತ್ತು ಕಾಂಪಿಟೇಟಿವ್ ಎಕ್ಸಾಮ್ಸ್ ಗಳಿಗೆ ಮಾತ್ರ ಸೀಮಿತವಾಗಿರದೆ. ಮುಂದಿನ ಜೀವನದ ಗುರಿಗಳಿಗೆ ಮಾರ್ಗದರ್ಶನ ನೀಡುತ್ತದೆ. ಉತ್ತಮ ಭವಿಷ್ಯಕ್ಕೆ ವಿದ್ಯಾರ್ಥಿಗಳ ಮೊದಲ ಆಯ್ಕೆ ಶ್ರೀ ಸಪ್ತಗಿರಿ ಪದವಿ ಪೂರ್ವ ಕಾಲೇಜು ಆಗಿದೆ. ಈ ಹಾದಿಯಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜು ಅಗತ್ಯ ಬೆಂಬಲವನ್ನು ಸದಾನೀಡುತ್ತಾ ಬಂದಿದೆ ಎಂದರು.

-ಅರ್ಚನಾ ಆಡಳಿತಾಧಿಕಾರಿ ಸಪ್ತಗಿರಿ ಪ.ಪೂ ಕಾಲೇಜು

ಬೆಂಗಳೂರಿನ ಸಿಎಂಆರ್ ಯೂನಿವರ್ಸಿಟಿಯಿಂದ ಇಂಜಿನಿಯರಿಂಗ್, ಲಾ, ಬಿ ಡಿಸೈನ್, ಎಂಎಸ್ಸಿ, ಎಂಟೆಕ್, ಪಿಜಿ ಕೋರ್ಸ್‍ಗಳನ್ನು ಬೋಧಿಸುತ್ತಿದ್ದು, ಕ್ಯಾಂಪಸ್ ಪ್ಲೇಸ್‍ಮೆಂಟ್‍ನಲ್ಲಿ ಮುಂಚೂಣಿಯಲ್ಲಿದೆ. ವಿದ್ಯಾಪ್ರಗತಿ ಮೇಳ ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಇವನ್ನೆಲ್ಲ ಪರಿಚಯಿಸಲು ನಮಗೆ ಒಂದು ಒಳ್ಳೆ ವೇದಿಕೆ ಕಲ್ಪಿಸಿಕೊಟ್ಟಿದೆ. ವಿದ್ಯಾರ್ಥಿ, ಪೋಷಕ ಸ್ನೇಹಿ ಗ್ರೀನ್ ಕ್ಯಾಂಪಸ್ ಸಿಎಂಆರ್ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.

-ಆಕಾಶ್ ಸಿಎಂಆರ್ ಯುನಿವರ್ಸಿಟಿ.

ವಿದ್ಯಾವಾಹಿನಿಗೆ ಇಂಬು ನೀಡಿದ ವಿದ್ಯಾಪ್ರಗತಿ

ತುಮಕೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯೆನಿಸಿದ ವಿದ್ಯಾವಾಹಿನಿ ಪಿಯು ಕಾಲೇಜಿ, ವಿದ್ಯಾವಾಹಿನಿ ಫಸ್ಟ್ ಗ್ರೇಡ್ ಕಾಲೇಜು, ಮತ್ತು ವಿದ್ಯಾನಿಧಿ ಪಿಯು ಕಾಲೇಜು ವಿದ್ಯಾಪ್ರಗತಿ ಮೇಳದಲ್ಲಿ ಭಾಗವಹಿಸಿದ್ದು ತುಂಬಾ ಹೆಮ್ಮೆ ಎನಿಸುತ್ತದೆ. ಪ್ರಜಾಪ್ರಗತಿ, ಪ್ರಗತಿ ಟಿವಿ ಮುಖ್ಯಸ್ಥರಿಗೆ ಈ ದಿಸೆಯಲ್ಲಿ ಅಭಿನಂದಿಸುವೆ. ನಮ್ಮಲ್ಲಿ ವಿಜ್ಞಾನ, ವಾಣಿಜ್ಯ ವಿಭಾಗಗಳಿದ್ದು, ವಿದ್ಯಾರ್ಥಿ ಸ್ನೇಹಿಯಾಗಿ ಕಲಿಕೆ ವಾವಾವರಣ ನಿರ್ಮಿಸಲಾಗಿದೆ. ಮೇಳದಲ್ಲಿ ಪಾಲ್ಗೊಂಡ ಜಿಲ್ಲೆಯ ವಿವಿಧ ಭಾಗಗಳ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ವ್ಯವಸ್ಥೆ, ಕಲಿಕಾ ಪ್ರಕ್ರಿಯೆ ಕೇಳಿ ಕಾಲೇಜು ಸೇರ್ಪಡೆಗೆ ಉತ್ಸುಕತೆ ತೋರಿದ್ದು, ಸಂತಸತರಿಸಿದೆ.

-ಎನ್.ಬಿ.ಪ್ರದೀಪ್‍ಕುಮಾರ್, ಕಾರ್ಯದರ್ಶಿಗಳು ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ

ಚರಿತ್ರಾರ್ಹ ಕಾಲೇಜಿನ ಅರಿವಿಗೆ ವೇದಿಕೆಯಾದ ಮೇಳ

ಪಿಯುಸಿ, ಸಿಇಟಿಯಲ್ಲಿ ಅತ್ಯುನ್ನತ ಫಲಿತಾಂಶಕ್ಕೆ ತುಮಕೂರಿನ ಸರ್ವೋದಯ ಶಿಕ್ಷಣ ಸಂಸ್ಥೆ ಪ್ರಖ್ಯಾತಿ. ವಿದ್ಯಾಪ್ರಗತಿ ಮೇಳದ ಮೂಲಕ ಸಂಸ್ಥೆಯ ಕಲಿಕಾ ಸಾಮಾರ್ಥ್ಯ ಇನ್ನೂ ಹೆಚ್ಚಿನದಾಗಿ ಪರಿಚಯವಾಗಿದೆ. ಶಿಸ್ತು, ಸಂಸ್ಕಾರದೊಟ್ಟಿಗೆ ಗುಣಮಟ್ಟದ ಕಲಿಕೆ ಸರ್ವೋದಯ ಸಂಸ್ಥೆಯ ಧ್ಯೇಯವಾಗಿದ್ದು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅನೇಕ ಉನ್ನತಸ್ತರದ ಹುದ್ದೆಗಳು, ಅವಕಾಶಗಳನ್ನು ಪಡೆದಿದ್ದು, ಚರಿತ್ರಾರ್ಹ ಕಾಲೇಜಿನ ಬಗ್ಗೆ ಹೊಸಪೀಳಿಗೆಗೆ ಪರಿಚಯಿಸಲು ಮೇಳದ ಮೂಲಕ ಪ್ರಜಾಪ್ರಗತಿ ಪ್ರಗತಿ ಟಿವಿ ಅವಕಾಶ ಕಲ್ಪಿಸಿದಕ್ಕೆ ಧನ್ಯವಾದ ಹೇಳುತ್ತದೆ.

-ಆಸಿಫ್‍ಖಾನ್, ಉಪನ್ಯಾಸಕ ಸರ್ವೋದಯ ಪ.ಪೂ ಕಾಲೇಜು,

ಇಂಟರ್ ಡಿಸಿಪ್ಲಿನಿರಿ ಎಂಜಿನಿಯರಿಂಗ್ ಕುರಿತು ಅರಿವು ಮೂಡಿಸಿದ ಮೇಳ

ವಿದ್ಯಾಪ್ರಗತಿ ಮೇಳದ ಮೊದಲ ಗೋಷ್ಠಿ ವಿಶೇಷವಾಗಿದ್ದು, ಎಂಜಿನಿಯರಿಂಗ್ ಕೋರ್ಸ್ ಹೊಸ ವಿಭಾಗವಾದ ಇಂಟರ್ ಡಿಸಿಪ್ಲಿನಿರಿ ಎಂಜಿನಿಯರಿಂಗ್ ಕುರಿತು ಆಚಾರ್ಯ ಇನ್ಸ್‍ಟ್ಯೂಟ್‍ನ ನಿರ್ದೇಶಕ ವಿಶೇಷ ಚಂದ್ರಶೇಖರ್ ಅವರು ಬೆಳಕು ಚೆಲ್ಲಿದರು. ಇದು ಇತರ ವಿಭಾಗಗಳೊಂದಿಗೆ ಸಂಬಂಧಿಸಿದ ಜ್ಞಾನ ಮತ್ತು ಕೌಶಲ್ಯಗಳನ್ನು ಸಂಯೋಜಿಸುವ ಎಂಜಿನಿಯರಿಂಗ್ ಆಗಿದೆ.

ಈ ರೀತಿಯ ಎಂಜಿನಿಯರಿಂಗ್ ಕೋರ್ಸ್‍ಗಳು ಸಾಂಪ್ರದಾಯಿಕ ಎಂಜಿನಿಯರಿಂಗ್‍ಗಿಂತ ವಿಶಾಲ ವ್ಯಾಪ್ತಿಯನ್ನು ಹೊಂದಿರುತ್ತವೆ. ಈ ಕೋರ್ಸ್‍ಗಳಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಗಳಿಸುವುದು ಹಾಗೂ ವಿದ್ಯಾರ್ಥಿಗಳಿಗೆ ವಿಶಿಷ್ಟ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಾಂಪ್ರದಾಯಿಕ ವಿಭಾಗ ಪದವಿ ಕಾರ್ಯಕ್ರಮದಲ್ಲಿ ಒದಗಿಸದ ಪ್ರದೇಶಗಳಲ್ಲಿ ಪರಿಣತಿ ಪಡೆಯಲು ಅನುಮತಿಸುತ್ತದೆ ಎಂದು ವಿವರಿಸಿದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap