ಬೆಂಗಳೂರು:
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಇದು ಇನ್ನೂ ಎರಡರಿಂದ ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಗುರುವಾರ ಹೇಳಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತವೇ ನಿರಂತರ ಮಳೆಗೆ ಕಾರಣವಾಗಿದೆ. ಇದು ಚೆನ್ನೈ ಸಮೀಪ ಕೇಂದ್ರೀಕೃತಗೊಂಡಿದೆ. ಇದರಿಂದಾಗಿಯೇ ಚೆನ್ನೈ ಸೇರಿದಂತೆ ಅಲ್ಲಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ಅತಿಯಾದ ಮಳೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಪ್ರತಿವರ್ಷ ನವೆಂಬರ್ಡಿ, ಸೆಂಬರ್ ತಿಂಗಳುಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಾಮಾನ್ಯ. ಸಮುದ್ರದ ಮೇಲ್ಮೆಯಲ್ಲಿ ಇದರ ಪರಿಣಾಮ ಹೆಚ್ಚಾಗಿರುತ್ತದೆ. ಭೂಮಿ ಸಮೀಪಿಸಿದಂತೆ ಇದರ ಪರಿಣಾಮ ತಗ್ಗುತ್ತದೆ. ಆದರೆ ಸಮುದ್ರತೀರದ ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಿರುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಇನ್ನೂ ಕೆಲವಾರು ಜಿಲ್ಲೆಗಳಲ್ಲಿಯೂ ಮಳೆಯ ಪರಿಣಾಮವಿರುತ್ತದೆ. ವಾಯುಭಾರ ಕುಸಿತ ಪರಿಣಾಮ ಪರಿಧಿ 500 ಕಿಲೋ ಮೀಟರ್ ತನಕ ಪಸರಿಸಿರುತ್ತದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ