ಮಣಿಪುರ: ಭದ್ರತಾ ಪಡೆಗಳಿಂದ 203 ಶಸ್ತ್ರಾಸ್ತ್ರ, ಐಇಡಿ, ಸ್ಫೋಟಕ ಜಪ್ತಿ

ಗುವಾಹಟಿ:

    ಜುಲೈ 3 ರ ಮಧ್ಯರಾತ್ರಿಯಿಂದ ಮಣಿಪುರದ ಬೆಟ್ಟದ ಜಿಲ್ಲೆಗಳಲ್ಲಿ ನಡೆಸಿದ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 203 ಶಸ್ತ್ರಾಸ್ತ್ರಗಳು, ಐಇಡಿಗಳು, ಗ್ರೆನೇಡ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

   ವಿವಿಧ ಸ್ಥಳಗಳಲ್ಲಿ ಅಡಗಿಸಿಟ್ಟಿರುವ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಯುದ್ಧೋಚಿತ ಸಾಮಗ್ರಿಗಳ ದೊಡ್ಡ ಸಂಗ್ರಹದ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ, ತೆಂಗ್ನೌಪಾಲ್, ಕಾಂಗ್ಪೋಕ್ಪಿ, ಚಾಂಡೆಲ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳ ಒಳ ಪ್ರದೇಶಗಳಲ್ಲಿ ಸಂಘಟಿತ ಮತ್ತು ಏಕಕಾಲದ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸರು, ಅಸ್ಸಾಂ ರೈಫಲ್ಸ್, ಸೇನೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ.

   ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಇನ್ಸಾಸ್ ರೈಫಲ್‌ಗಳು(21), ಎಕೆ ಸರಣಿ ರೈಫಲ್‌ಗಳು(11), ಎಸ್‌ಎಲ್‌ಆರ್‌ಗಳು (26), ಸ್ನೈಪರ್‌ಗಳು (2), ಕಾರ್ಬೈನ್‌ಗಳು (3), .303 ರೈಫಲ್‌ಗಳು (17) ಮತ್ತು ಪಿಸ್ತೂಲ್‌ಗಳು (9) ಸೇರಿವೆ. ಮೂವತ್ತು ಐಇಡಿಗಳು, 12 ಗ್ರೆನೇಡ್‌ಗಳು ಮತ್ತು ಒಂಬತ್ತು ಪೊಂಪಿ ಶೆಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

  “ಗುಡ್ಡಗಾಡು ಜಿಲ್ಲೆಗಳಲ್ಲಿ ಈ ಗುಪ್ತಚರ ಆಧಾರಿತ ಸಂಘಟಿತ ಕಾರ್ಯಾಚರಣೆಯು, ಮಣಿಪುರ ಪೊಲೀಸ್, ಅಸ್ಸಾಂ ರೈಫಲ್ಸ್/ಸೇನೆ ಮತ್ತು ಕೇಂದ್ರ ಭದ್ರತಾ ಪಡೆಗಳು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು, ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮತ್ತು ನಾಗರಿಕರು ಹಾಗೂ ಅವರ ಆಸ್ತಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಡೆಸುತ್ತಿರುವ ನಿರಂತರ ಪ್ರಯತ್ನಗಳಲ್ಲಿ ಇದು ಗಮನಾರ್ಹ ಸಾಧನೆಯಾಗಿದೆ” ಎಂದು ಮಣಿಪುರ ಪೊಲೀಸರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

   ಸಾರ್ವಜನಿಕರು ಭದ್ರತಾ ಪಡೆಗಳೊಂದಿಗೆ ಸಹಕರಿಸಬೇಕು ಮತ್ತು ಅಕ್ರಮ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆ ಅಥವಾ ಕೇಂದ್ರ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ಕೋರಿದ್ದಾರೆ.

Recent Articles

spot_img

Related Stories

Share via
Copy link