ರಾಜಣ್ಣನವರ 75 ಹುಟ್ಟುಹಬ್ಬ: ಹೋಬಳಿ ಕೇಂದ್ರದಲ್ಲಿ ಪ್ರತಿಧ್ವನಿಸಿದ ಕೆಏನ್ಆರ್ ಅವರ ಮೇಲಿನ ಅಭಿಮಾನ

ಮಧುಗಿರಿ:

ಸಹಕಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಕೆ ಎನ್ ರಾಜಣ್ಣ ನವರ 75 ನೇ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

   ಪಟ್ಟಣ ಹಾಗೂ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಅಭಿಮಾನಿಗಳು ಪ್ಲೆಕ್ಸ್ ಹಾಕುವುದರ ಜತೆಯಲ್ಲಿ ಸಿಹಿ ವಿತರಿಸಿ ವಿಜೃಂಜಣೆಯಿಂದ ಸಚಿವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

   ಸಣ್ಣ ನೀರಾವರಿ ಇಲಾಖೆ,250.00 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 200.00 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ200.00 ವಿವಿಧ ಇಲಾಖೆಗಳಡಿ ಫಲಾನುಭವಿಗಳಿಗೆ ವಿತರಿಸುವ ಸವಲತ್ತುಗಳ ವಿವರ.

    ರಾಘವೇಂದ್ರ ಕಾಲೋನಿಯಿಂದ ಛತ್ರಭಾವಿಗೆ ಹೋಗಲು ಹಳ್ಳಕ್ಕೆ ನಿರ್ಮಿಸಿರುವ250 ಸೇತುವೆ ಉದ್ಘಾಟನೆ
200ರೂ ಮೊತ್ತದ ದೇವರಾಜು ಅರಸು ಭವನ ಶಂಕುಸ್ಥಾಪನೆ
200 ರೂ ಮೊತ್ತದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಶಂಕು ಸ್ಥಾಪನೆ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 50 ಫಲಾನುಭವಿಗಳಿಗೆ 300ಕೋಟಿ ರೂ ಮೊತ್ತದ ಪಂಪು ಮೋಟರ್ ವಿತರಣೆ ಆದಿ ಜಾಂಬವ ಅಭಿವೃದ್ದಿ ನಿಗಮದ ವತಿಯಿಂದ 10 ಫಲಾನುಭವಿಗಳಿಗೆ 47.50 ರೂ ಮೊತ್ತದಲ್ಲಿ
ಪಂಪು ಪೋಟರ್ ವಿತರಣೆ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪ.ಪಂಗಡ ಅಭಿವೃದ್ಧಿ ನಿಗಮದ ವತಿಯಿಂದ 30 ಫಲಾನುಭವಿಗಳಿಗೆ 142.50 ರೂ ಮೊತ್ತದಲ್ಲಿ
ಪಂಪು ಪೋಟರ್ ವಿತರಣೆ
ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 6 ಫಲಾನುಭವಿಗಳಿಗೆ 28.50 ರೂಗಳ ಮೊತ್ತದ
ಪಂಪು ಪೋಟರ್ ವಿತರಣೆ,ತಾಲ್ಲೂಕು ಪಂಚಾಯಿತಿ ಮಧುಗಿರಿಯ ವತಿಯಿಂದ 1419 ಫಲಾನುಭವಿಗಳಿಗೆ 1986 ರೂ ಮೊತ್ತದಲ್ಲಿ
ವಸತಿ ಯೋಜನೆಯಡಿ ಕಾರ್ಯಾದೇಶ ವಿತರಣೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 7 ಫಲಾನುಭವಿಗಳಿಗೆ 7.50 ರೂ ಮೊತ್ತದ ತ್ರಿಚಕ್ರ ವಾಹನಗಳ ವಿತರಣೆ ಹಾಗೂ ಕೃಷಿ ಇಲಾಖೆಯ ವತಿಯಿಂದ 2 ಫಲಾನುಭವಿಗಳಿಗೆ 42.00 ರೂಗಳ ಮೊತ್ತದ
ಬೆಳೆ ಕಟಾವು ಯಂತ್ರ ವಿತರಣೆ ಮತ್ತು ರೇಷ್ಮೆ ಇಲಾಖೆಯ ವತಿಯಿಂದ 4 ಜನ ಫಲಾನುಭವಿಗಳಿಗೆ 3.0 ರೂ ಮೊತ್ತದಲ್ಲಿ ಪ್ಲಾಸ್ಟಿಕ್ ಚಂದ್ರಿಕೆ ವಿತರಣೆಯಾಗಲಿದೆ ಒಟ್ಟು
1528 ಆರ್ಹ ಫಲಾನುಭವಿಗಳಿಗೆ
3207.00 ಕೋಟಿ ರೂಗಳ ಮೊತ್ತದ ಸರ್ಕಾರ ವತಿಯಿಂದ ಸೌಲಭ್ಯವನ್ನು ವಿತರಿಸಲಿದ್ದಾರೆ.

   ಇನ್ನೂ ಪಟ್ಟಣದ ಸಿದ್ದಾಪುರ ಗೇಟ್ ಬಳಿಯ ವಿಜಯ್ ಕುಮಾರ್, ಸಿದ್ದಾಪುರ ವೀರಣ್ಣ ಹಾಗೂ ಕೆ ಎನ್ ಆರ್ ಮತ್ತು ಆರ್ ಆರ್ ಅಭಿಮಾನಿಗಳ ವತಿಯಿಂದ 1000 ಜನರಿಗೆ ಓಳಿಗೆ ಊಟ, ಹೈಸ್ಕೂಲ್ ವೃತ್ತದಲ್ಲಿ ಸೀಮೆ ಎಣ್ಣೆ ರಾಜಣ್ಣನವರಿಂದ ರಾಜೀವ್ ಗಾಂಧಿ ಕ್ರೀಡಾಂಗಣಾಕ್ಕೆ ಆಗಮಿಸಿದ ಫಲಾನುಭವಿಗಳಿಗೆ ಪಾನಕ ಮಜ್ಜಿಗೆ ವಿತರಣೆ ಕೇಬಲ್ ಸುಬ್ಬು ರವರಿಂದ ಬೃಹತ್ ಗಾತ್ರದ 75 ಕೆ.ಜಿ ತೂಕದ ಕೇಕ್ ವಿತರಣೆಯ ಜತೆಯಲ್ಲಿ ಚಂಡಿ ವಾದ್ಯ, ಹುಲಿವೇಷದ ಮನರಂಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.