ಸದಲಗ : ಮೊಸಳೆ ದಾಳಿ : ರೈತ ಸಾವು…..!

ಬೆಳಗಾವಿ

   ಚಿಕ್ಕೋಡಿ ತಾಲ್ಲೂಕಿನ ದತ್ತವಾಡ-ಸದಲಗಾ ಬಳಿಯ ದೂಧ್‌ಗಂಗಾ ನದಿ ದಡದಲ್ಲಿ ಶನಿವಾರ ಮೊಸಳೆ ದಾಳಿಗೆ ವೃದ್ಧ ರೈತ ಮೃತಪಟ್ಟಿದ್ದಾರೆ.ಮೃತ ರೈತನನ್ನು ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದ ನಿವಾಸಿ ಮಹಾದೇವ ಪುನ್ನಪ್ಪ ಖುರೆ (72) ಎಂದು ಗುರುತಿಸಲಾಗಿದೆ.

    ಶುಕ್ರವಾರ (ಮೇ 10) ಮಹಾದೇವ ಪುನ್ನಪ್ಪ ಖುರೆ ಅವರು ನದಿ ತೀರದ ಕಾಂತಿ ಪ್ರದೇಶದಲ್ಲಿನ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಕೃಷಿ ಕೆಲಸ ಮುಗಿಸಿ ಸ್ನಾನ ಮಾಡಲು ನದಿಗೆ ತೆರಳಿದ್ದರು. ನದಿಯಲ್ಲಿ ಕೆಲಹೊತ್ತು ಈಜಿ ಮರಳಿ ನದಿಯ ದಡಕ್ಕೆ ಬರುತ್ತಿದ್ದಾಗ ಮೊಸಳೆ ಅವರ ಕಾಲು ಹಿಡಿದು ನೀರಿನೊಳಗೆ ಎಳೆದೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ರೈತ ಮಹಾದೇವ ಅವರ ಎಡತೊಡೆಯ ಮೇಲೆ ಗಾಯದ ಗುರುತು ಇತ್ತು. ಶನಿವಾರ ರಮೇಶ ಪ್ರಧಾನ ಎಂಬುವವರ ಜಮೀನಿನ ಬಳಿಯ ನದಿ ದಂಡೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರ ಶವವನ್ನು ಸಾಮಾಜಿಕ ಕಾರ್ಯಕರ್ತ ಸುಕುಮಾರ್ ಉಗಾರೆ ಮತ್ತು ಇತರ ಗ್ರಾಮಸ್ಥರು ನದಿ ದಡದಿಂದ ಹೊರತೆಗೆದಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. 

     ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ದೂಧ್‌ಗಂಗಾ ನದಿಯಲ್ಲಿ ಮೊಸಳೆಗಳ ಸಂಖ್ಯೆ ವಿಪರೀತ ಏರಿಕೆ ಕಂಡಿದೆ. ಈ ಘಟನೆಯಿಂದಾಗಿ ರೈತರಲ್ಲಿ ಆತಂಕ ಹೆಚ್ಚಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap