ಬಾಗೇಪಲ್ಲಿ : ರಸಗೊಬ್ಬರಕ್ಕಾಗಿ ರೈತರ ಪರದಾಟ : ರಸ್ತೆಯುದ್ದಕ್ಕೂ ಸಾಲು

ಬಾಗೇಪಲ್ಲಿ: 

   ಬಿತ್ತನೆ ವೇಳೆಗೆ ಸಮರ್ಪಕವಾಗಿ ಬಾರದ ಮಳೆಯಿಂದಾಗಿ ನಾನಾ ಪೀಕಲಾಟಗಳಿಂದ ಬೆಳೆಯ ನಿರ್ವಹಣೆಗೆ ಮುಂದಾಗಿರುವ ರೈತರಿಗೆ ಸಮರ್ಪಕವಾಗಿ ಯುರಿಯಾ ರಸಗೊಬ್ಬರ ಸರಬರಾಜು ಮಾಡದ ಸರಕಾರಗಳು ರೈತರನ್ನು ಕಡೆಗಣಿಸಿವೆ ಎಂದು ಕೆಪಿಆರ್ ಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

   ಪಟ್ಟಣದ ಟಿಎಪಿಸಿಎಂಸಿ ರಸಗೊಬ್ಬರಗಳ ಮಾರಾಟ ಕೇಂದ್ರದ ಹಾಗೂ ತಾಲೂಕಿನ ಗೂಳೂರಿನಲ್ಲಿ ಸೊಸೈಟಿಯ ಮುಂದೆ ಸೋಮವಾರ ಮುಂಜಾನೆ ಸುಮಾರು 4.30ಗಂಟೆಯಿಂದಲೇ ಯುರಿಯಾ ರಸಗೊಬ್ಬರಕ್ಕಾಗಿ ನೂರಾರು ರೈತರು ಸಾಲುಗಟ್ಟಿ ಪರದಾಡಿದರು. ಎಷ್ಟೇ ಪರದಾಟ ನಡೆಸಿದರೇ ಹಲವಾರು ರೈತರು ರಸಗೊಬ್ಬರ ದೊರೆಯದ ವಾಪಸ್ಸು ಹೋದರು. ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಚನ್ನರಾಯಪ್ಪರವರು, ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳಿಗಾಗಲಿ,ಶಾಸಕರಿಗೆ ಕಿಂಚಿತ್ತು ರೈತಪರ ಕಾಳಜಿ ಇಲ್ಲ. ರೈತರ ನೋವು ನಲಿವುಗಳ ಬೇಕಾಗಿಲ್ಲ. ಹಾಗಾಗಿ ಸಮರ್ಪಕ ರಸಗೊಬ್ಬರ ಪೂರೈಸುತ್ತಿಲ್ಲ, ಹಾಗಾಗಿ ಕಂಗಾಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

   ರೈತರು ಬೆಳಗ್ಗೆಯಿಂದಲೇ ರಸಗೊಬ್ಬರಕ್ಕಾಗಿ ಅಂಗಡಿ ಮುಂದೆ ನಿಂತರೂ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ. ಕೆಲವರು ರಸಗೊಬ್ಬರಗಳನ್ನು ಸ್ಟಾಕ್‌ ಇಟ್ಟು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸು ತ್ತಿದ್ದು, ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ. ಆದರೆ ಈಗಿರುವ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರಕಾರ ಲಂಚಗುಳಿತನ, ದುರಾಡಳಿತ, ಆಡಳಿತ ವೈಫಲ್ಯತೆಯಿಂದ ಜನರ ಆಕ್ರೋಶಕ್ಕೆ ತುತ್ತಾಗಿದೆ. ಸಮರ್ಪಕವಾಗಿ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಪೂರೈಸುವಲ್ಲಿ ವಿಫಲವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗೊಬ್ಬರ ದಾಸ್ತಾನು ಮಾಡದೆ ನಿರ್ಲಕ್ಷ ವಹಿಸಿದೆ.

   ನಾವು ರೈತ ಪರ ಎನ್ನುವ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಹಾಗೂ ಕೇಂದ್ರ ಬಿಜೆಪಿಯವರು ರಾಜಕೀಯ ಲಾಭ ಗಳಿಸಲು ಮಾತ್ರ ರೈತರ ಮಾತು ಬರುತ್ತದೆ. ಉಳಿದಂತೆ ರೈತನ ಸಂಕಷ್ಟಗಳಿಗೆ ಕೊನೆ ಇಲ್ಲದಂತಾಗಿದೆ. ಹಾಗಾಗಿ ಸರಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವೆ ಅಧಿಕಾರ ಬಿಟ್ಟು ತೊಲಗಲಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

   ಇದೇ ವೇಳೆ ಕೆಪಿಆರ್ ಎಸ್ ತಾಲೂಕು ಸಂಚಾಲಕ ಡಿ.ಟಿ ಮುನಿಸ್ವಾಮಿಯವರು ಮಾತನಾಡಿ, ಸಾವಿರ ಮೂಟೆ ಅವಶ್ಯಕತೆ ಇರುವ ಕಡೆ ಮುನ್ನೂರು, ನನ್ನೂರು ಮೂಟೆ ಯುರಿಯಾ ಸರಬರಾಜು ಮಾಡಿದರೆ, ಇಕಟ್ಟಿನ ಪರಿಸ್ಥಿತಿ ನಿರ್ಮಾಣವಾಗುವವರೆಗೂ ಅಧಿಕಾರಿ ಯಂತ್ರಾಂಗ ಏನು ಮಾಡು ತ್ತಿರುತ್ತದೆ ಎಂದರು.

Recent Articles

spot_img

Related Stories

Share via
Copy link