ಕೊರೊನಾವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್‌ನ ಲಕ್ಷಣಗಳು ಡೆಲ್ಟಾ ರೂಪಾಂತರಕ್ಕಿಂತ ಬೇಗ ಕಾಣಿಸಿಕೊಳ್ಳುವ ಸೂಚನೆಗಳಿವೆ. ಓಮಿಕ್ರಾನ್‌ನ ಮೊದಲ ರೋಗಲಕ್ಷಣವನ್ನು ಧ್ವನಿ ಮೂಲಕವೂ ಗುರುತಿಸಬಹುದು ಎಂದು ಹೇಳಲಾಗುತ್ತದೆ.
ಓಮಿಕ್ರಾನ್‌ನಿಂದಾಗಿ ನೀವು ಅನಾರೋಗ್ಯಕ್ಕೆ ಒಳಗಾಗುವ ಮೊದಲು, ನೀವು ಅದರ ಲಕ್ಷಣಗಳನ್ನು ಕೇಳಬಹುದು ಮತ್ತು ಅನುಭವಿಸಬಹುದು ಎಂದು ಹೇಳಲಾಗುತ್ತದೆ.
ಓಮಿಕ್ರಾನ್ ಸೋಂಕಿಗೆ ಒಳಗಾದಾಗ ಈ ಲಕ್ಷಣಗಳು ಕಂಡುಬರುತ್ತವೆ:
ದಿ ಸನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಗಂಟಲು ನೋಯುತ್ತಿದ್ದರೆ, ಕಿರುಚಲು ಅಥವಾ ಜೋರಾಗಿ ಹಾಡಲು ಸಾಧ್ಯವಾಗದಿದ್ದರೆ ಅದು ಕಾಳಜಿಯ ವಿಷಯವಾಗಿದೆ. ಹಾಗಾಗಿ ನಿಮ್ಮ ಧ್ವನಿಯಲ್ಲಿ ಏನಾದರೂ ಬದಲಾವಣೆ ಇದೆಯೇ ಎಂಬುದನ್ನು ನೀವು ಗಮನಿಸಬೇಕು ಎನ್ನಲಾಗಿದೆ.
ಓಮಿಕ್ರಾನ್ ರೂಪಾಂತರದ ಈ ಗುಣಲಕ್ಷಣವು ಡೆಲ್ಟಾದಿಂದ ಭಿನ್ನವಾಗಿದೆ:
ತಜ್ಞರ ಪ್ರಕಾರ, ಓಮಿಕ್ರಾನ್‌ನ ಮೊದಲ ರೋಗಲಕ್ಷಣಗಳಲ್ಲಿ ಒಂದು ಸ್ಕ್ರಾಚಿ ಗಂಟಲು. ಇದರಲ್ಲಿ ನಿಮ್ಮ ಗಂಟಲು ಒಳಗಿನಿಂದ ಚುಚ್ಚಿದಂತೆ ಭಾಸವಾಗುತ್ತದೆ. ಡೆಲ್ಟಾ ರೂಪಾಂತರದಿಂದ ಸೋಂಕಿಗೆ ಒಳಗಾದ ಹೆಚ್ಚಿನ ಜನರಲ್ಲಿ ಗಂಟಲು ನೋವಿನ ಸಮಸ್ಯೆ ಸಾಮಾನ್ಯವಾಗಿತ್ತು ಎಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾದ ಡಿಸ್ಕವರಿ ಹೆಲ್ತ್‌ನ ಮುಖ್ಯ ಕಾರ್ಯನಿರ್ವಾಹಕ ರಯಾನ್ ರೋಚ್ ಮಾತನಾಡಿ, ಓಮಿಕ್ರಾನ್ ನಿಂದ ಬಳಲುತ್ತಿರುವ ಜನರು ಮೂಗಿನ ದಟ್ಟಣೆ, ಒಣ ಕೆಮ್ಮು ಮತ್ತು ಬೆನ್ನುನೋವಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಜೆನ್ನಿ ಹ್ಯಾರಿಸ್ ಅವರು ಮತ್ತೊಮ್ಮೆ ನಾವು ಬೂಸ್ಟರ್ ಡೋಸ್ ಅನ್ನು ತೆಗೆದುಕೊಳ್ಳದ ಎಲ್ಲಾ ಬ್ರಿಟಿಷ್ ನಾಗರಿಕರನ್ನು ಆದಷ್ಟು ಬೇಗ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇವೆ. ಏಕೆಂದರೆ ಓಮಿಕ್ರಾನ್ ಅನ್ನು ತಡೆಗಟ್ಟಲು ಇದು ಉತ್ತಮ ಮಾರ್ಗವಾಗಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ