ರಾಜ್ಯದ ಮೊಟ್ಟ ಮೊದಲ ‘ವೈಫೈ ಗ್ರಾಮ’ ಯಾವುದು ಗೊತ್ತಾ.? ಇಲ್ಲಿದೆ ಮಾಹಿತಿ

ಮೈಸೂರು:

 ಈಗಾಗಲೇ ರೈಲ್ವೆ ನಿಲ್ದಾಣಗಳಲ್ಲಿ, ಕೆಲ ಬಸ್ ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇಂಟರ್ನೆಟ್ ಕ್ರಾಂತಿಯ ಬಳಿಕ, ಈಗ ರಾಜ್ಯದ ಒಂದು ಗ್ರಾಮ, ಮೊಟ್ಟ ಮೊದಲ ವೈಫೈ ಗ್ರಾಮವೆಂಬ ಕೀರ್ತಿಯನ್ನು ಗಳಿಸಿದೆ.

ಬಿಎಸ್‌ಎನ್‌ಎಲ್ ವತಿಯಿಂದ  ಸಾರ್ವಜನಿಕ ವೈಫೈ ಸೌಲಭ್ಯವನ್ನು ಪಡೆಯುವ ಮೂಲಕ, ಮೈಸೂರಿನ ರಮ್ಮನಹಳ್ಳಿ, ಈಗ ರಾಜ್ಯದ ಮೊಟ್ಟ ಮೊದಲ ವೈಫೈ ಗ್ರಾಮ  ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಮ್ಮನಹಳ್ಳಿ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಮೈಸೂರು ಆಫ್ಟಿಕಲ್ ಫೈಬರ್ ಸಂಪರ್ಕದ ಮೂಲಕ, 8 ಕಡೆ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲದೇ ಗ್ರಾಮದ 32 ಕಡೆಗಳಲ್ಲಿ ವೈಫೈ ಹಾಟ್ ಸ್ಪಾಟ್ ನಿರ್ಮಿಸಲಾಗಿದೆ.

ರಮ್ಮನಹಳ್ಳಿ ಗ್ರಾಮದ ಜನರು ಜಸ್ಟ್ 69 ಹಣ ಪಾವತಿಸಿ, 30 ಜಿಬಿ ಡಾಟಾವನ್ನು 30 ದಿನಗಳವರೆಗೆ ಖರೀದಿಸುತ್ತಿದ್ದಾರೆ. ಈ ಡಾಟಾವನ್ನು ಮೊಬೈಲ್, ಲ್ಯಾಪ್ ಟಾಪ್ ಗಳಿಗೆ ಬಳಸಿಕೊಂಡು, ತಮ್ಮ ಕೆಲಸವನ್ನು, ಮನರಂಜನೆ ಸೇರಿದಂತೆ ವಿವಿಧ ಬಳಕೆಗಾಗಿ ವೈಫೈ ಸೌಲಭ್ಯ ಪಡೆಯುತ್ತಿದ್ದಾರೆ.

ಅಂದಹಾಗೇ ರಮ್ಮನಹಳ್ಳಿ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಆಫ್ಟಿಕಲ್ ಫೈಬರ್ ಮೂಲಕ ಕಲ್ಪಿಸಿರುವಂತ ವೈಫೈ ಸೌಲಭ್ಯದಿಂದ 50 ಎಂಬಿಪಿಎಸ್ ವೇಗದಲ್ಲಿ ಇಂಟರ್ ನೆಟ್ ಸೌಲಭ್ಯ ದೊರೆಯುತ್ತಿದೆ.

9 ರೂಪಾಯಿಗೆ 1 ದಿನಕ್ಕೆ 1 ಜಿಬಿ ಡೇಟಾ ಸೌಲಭ್ಯ ಕೂಡ ಇದೆ. ಇದಲ್ಲದೇ ಐದು ಬಗೆಯ ವೋಚರ್ ಖರೀದಿಸಿ, ಇಂಟರ್ ನೆಟ್ ವೈಫೈ ಸಂಪರ್ಕವನ್ನು ಈ ಗ್ರಾಮದ ಜನರು ಪಡೆಯುತ್ತಿದ್ದಾರೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap