ಬಾಗಲಕೋಟೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹುನಗುಂದ ಮತ್ತು ಇಳಕಲ್ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕಳೆದ ಮೂರು ತಿಂಗಳಿನಿಂದ ರೇಷನ್ ಸರಬರಾಜು ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಅಂಗನವಾಡಿ ಮಕ್ಕಳು ನಿತ್ಯ ಅರ್ಧಂಬರ್ಧ ಊಟ ಮಾಡುತ್ತಿವೆ. ಅಂಗನವಾಡಿಗಳಿಂದ ತಮಗೆ ಬರಬೇಕಿದ್ದ ಸಮರ್ಪಕ ಪೌಷ್ಟಿಕ ಆಹಾರ ಬಾರದೆ ಗರ್ಭಿಣಿಯರು ನೊಂದಿದ್ದಾರೆ.
ಜುಲೈ, ಅಗಷ್ಟ್, ಸೆಪ್ಟೆಂಬರ್ ತಿಂಗಳ ರೇಷನ್ ಅಂಗನವಾಡಿ ಕೇಂದ್ರಗಳಿಗೆ ತಲುಪಿಲ್ಲ. ರೇಷನ್ ಸರಬರಾಜು ಆಗದೆ ಇರುವುದನ್ನು ಹುನಗುಂದ ಸಿಡಿಪಿಒ ಒಪ್ಪಿಕೊಂಡಿದ್ದಾರೆ. ಮೂರು ತಿಂಗಳ ಎಮ್ಎಸ್ಪಿಟಿಸಿ ನಲ್ಲೇ ಕೊಳೆಯುತ್ತಿದೆ.
ಎಮ್ಎಸ್ಪಿಟಿಸಿನಿಂದ ಎಲ್ಲ ಅಂಗನವಾಡಿಗೆ ರೇಷನ್ ಸಾಗಿಸಬೇಕು. ಆದರೆ ಯಾವ ಕಾರಣಕ್ಕೆ ಹಂಚಿಕೆಯಾಗಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಮಾತ್ರ ಉತ್ತರ ಇಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನ್ಯೂನ್ಯತೆ ನಡುವೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವತಿಯಿಂದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ನಡೆದಿದೆ.
