ವಿಶ್ವದ ಮಹಾನ್ ಪ್ರವಾದಿ, ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ 2022 ಕ್ಕೆ ಅನೇಕ ದೊಡ್ಡ ಘಟನೆಗಳನ್ನು ನಡೆಯಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ಜಗತ್ತು ಯಾವಾಗ ಮತ್ತು ಹೇಗೆ ಕೊನೆಗೊಳ್ಳುತ್ತದೆ ಎಂಬುದರ ಕುರಿತು 6,338 ಭವಿಷ್ಯವಾಣಿಗಳನ್ನು ನುಡಿದಿದ್ದಾರೆ.
ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಗಳು ಹಿಟ್ಲರನ ಆಳ್ವಿಕೆ, ಜಾನ್ ಎಫ್ ಕೆನಡಿ ಹತ್ಯೆ, ಎರಡನೇ ಮಹಾಯುದ್ಧ, 9/11 ರ ಭಯೋತ್ಪಾದಕ ದಾಳಿಗಳು, ಫ್ರೆಂಚ್ ಕ್ರಾಂತಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯಂತಹ ಘಟನೆಗಳನ್ನು ವಿವರಿಸಿವೆ. ಅವರ ಭವಿಷ್ಯವಾಣಿಗಳು ಶೇಕಡಾ 70 ಕ್ಕಿಂತ ಹೆಚ್ಚು ನಿಜವಾಗಿದೆ. ನಾಸ್ಟ್ರಾಡಾಮಸ್ ಜುಲೈ 2, 1566 ರಂದು ನಿಧನರಾದರು.
ನಾಸ್ಟ್ರಾಡಾಮಸ್ ಭವಿಷ್ಯವಾಣಿ
ಆದರೆ ಅವರ ಭವಿಷ್ಯವಾಣಿಗಳು ಇನ್ನೂ ಜನರ ಮನಸ್ಸಿನಲ್ಲಿ ಜೀವಂತವಾಗಿವೆ. 2022 ರ ಬಗ್ಗೆ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿ ಏನು ಹೇಳಿದೆ ಎಂದು ಇಲ್ಲಿ ನೋಡೋಣ.
ಯುರೋಪ್ ರಾಷ್ಟ್ರಗಳಿಗೆ ಯುದ್ಧದ ಪರಿಸ್ಥಿತಿ ಎದುರಾಗಲಿದೆ ಎಂದು ನಾಸ್ಟ್ರಾಡಾಮಸ್ ಹಿಂದೆಯೇ ತಮ್ಮ ಭವಿಷ್ಯವಾಣಿಯಲ್ಲಿ ಹೇಳಿರುವ ವಿಚಾರ ರಷ್ಯಾ ಉಕ್ರೇನ್ ಯುದ್ಧದ ಈ ಸಂರ್ಭದಲ್ಲಿ ಬೆಳಕಿಗೆ ಬಂದಿದೆ. 1555ರಲ್ಲಿ ನಾಸ್ಟ್ರಾಡಾಮಸ್ ಲೆಸ್ ಪ್ರೊಫೆಟೀಸ್ ಎನ್ನುವ ಪುಸ್ತಕ ಬರೆದಿದ್ದಾನೆ.
ಅದರಲ್ಲಿ 2022 ರಲ್ಲಿ ಯುರೋಪಿನಲ್ಲಿ ಯುದ್ಧ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಎಂದು ಭವಿಷ್ಯವಾಣಿಯಲ್ಲಿ ನಂಬಿಕೆ ಇಟ್ಟವರು ಹೇಳುತ್ತಿದ್ದಾರೆ. ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಗಳು 2022 ರಲ್ಲಿ ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಯುತ ವ್ಯಕ್ತಿಯ ಸಾವನ್ನು ಹೇಳಿದೆ. 100 ನೇ ಪುಟದ 14 ನೇ ಚತುರ್ಭುಜದಲ್ಲಿ ‘ಶಕ್ತಿಯುತ ವ್ಯಕ್ತಿಯ ಹಠಾತ್ ಮರಣವು ಬದಲಾವಣೆಯನ್ನು ತರುತ್ತದೆ ಮತ್ತು ದೇಶದಲ್ಲಿ ಹೊಸ ಮುಖಗಳ ಪರಿಚಯಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.
ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯನ್ನು ನಂಬುವವರು ಅವನ ಚತುರ್ಭುಜಗಳನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಈ ವ್ಯಾಖ್ಯಾನಗಳು ಕೆಲವೊಮ್ಮೆ ನಿಖರವಾಗಿರುತ್ತವೆ ಮತ್ತು ಕೆಲವೊಮ್ಮೆ ತಪ್ಪಾಗಿಯೂ ಆಗಿದ್ದಿದೆ.
3797ರ ಹೊತ್ತಿಗೆ ಭೂಮಿಯ ನಾಶ !
ನಾಸ್ಟ್ರಾಡಾಮಸ್ ಪ್ರಕಾರ ಭೂಮಿಯ ನಾಶ 3797ರ ಹೊತ್ತಿಗೆ ಸಂಭವಿಸಬಹುದು. ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದಲ್ಲಿ ಜ್ವಾಲಾಮುಖಿ ಸ್ಫೋಟ ಮತ್ತು ಮುಂಬರುವ ವರ್ಷಗಳಲ್ಲಿ ಬೃಹತ್ ಸೌರ ಜ್ವಾಲೆ ಸಂಭವಿಸುವ ಬಗ್ಗೆ ಎಚ್ಚರಿಸಿದ್ದಾರೆ.
ವಿನಾಶಕಾರಿ ಭೂಕಂಪ ನಾಸ್ಟ್ರಾಡಾಮಸ್‌ನ 100ನೇ ಪುಟದ III ರ ಮೂರನೇ ಚತುರ್ಭುಜವು ಈ ವರ್ಷ ಜಪಾನ್‌ನಲ್ಲಿ ವಿನಾಶಕಾರಿ ಭೂಕಂಪದ ಬಗ್ಗೆ ಹೇಳಿದೆ. ಭೂಕಂಪವು ದಿನದ ಮಧ್ಯದಲ್ಲಿ ಸಂಭವಿಸಿದರೆ, ಅದು ಭೀಕರ ಹಾನಿ ಮತ್ತು ಸಾವಿಗೆ ಕಾರಣವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಯುರೋಪ್ ನಲ್ಲಿ ಯುದ್ಧ
ಕೆಲವು ವ್ಯಾಖ್ಯಾನಗಳ ಪ್ರಕಾರ, ಮುಂಬರುವ ವರ್ಷಕ್ಕೆ ನಾಸ್ಟ್ರಾಡಾಮಸ್ನ ಭವಿಷ್ಯವಾಣಿಯು ಪ್ಯಾರಿಸ್ ಗೆ ನೇರವಾಗಿ ಸಂಬಂಧಿಸಿದೆ. ಭವಿಷ್ಯವಾಣಿಯ ವ್ಯಾಖ್ಯಾನದ ಪ್ರಕಾರ, ಯುರೋಪ್ ನಲ್ಲಿ ಯುದ್ಧದ ವಾತಾವರಣ ಇರುತ್ತದೆ.
ಈ ವರ್ಷ ಫ್ರೆಂಚ್ ರಾಜಧಾನಿ ಈಗಾಗಲೇ ಕೋವಿಡ್ ನಿರ್ಬಂಧಗಳಿಂದಾಗಿ ಸಾಕಷ್ಟು ಗಲಭೆಗೆ ಕಾರಣವಾಗಿದೆ. 2015ರಲ್ಲೂ ಐಸಿಸ್ ಉಗ್ರರ ದಾಳಿಗೆ 130 ಮಂದಿ ಬಲಿಯಾಗಿದ್ದರು. ಎರಡನೇ ಮಹಾಯುದ್ಧದ ನಂತರ ಫ್ರಾನ್ಸ್‌ನಲ್ಲಿ ನಡೆದ ಅತಿ ದೊಡ್ಡ ದಾಳಿ ಇದಾಗಿದೆ.
ವಲಸಿಗರ ಬಿಕ್ಕಟ್ಟು
ನಾಸ್ಟ್ರಾಡಾಮಸ್ ಬರೆಯುತ್ತಾರೆ, ‘ರಕ್ತ ಮತ್ತು ಹಸಿವಿನ ದೊಡ್ಡ ವಿಪತ್ತು ಎದುರಾಗಲಿದೆ. ಕಡಲತೀರ, ಹಸಿವು ಮತ್ತು ಸೆರೆವಾಸ ಅನುಭವಿಸಲಿದೆ ಎಂದು ಏಳು ಬಾರಿ ಬರೆದಿದ್ದಾರೆ. ಇದರರ್ಥ ಜಗತ್ತಿನಲ್ಲಿ ಯುದ್ಧಗಳು ಮತ್ತು ಸಶಸ್ತ್ರ ಸಂಘರ್ಷಗಳು ಮಾನವನ ಹಸಿವನ್ನು ಹೆಚ್ಚಿಸುತ್ತವೆ. ಇದು ವಲಸಿಗರ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ.
ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯಲ್ಲಿ ನಂಬಿಕೆ ಇಟ್ಟವರ ಪ್ರಕಾರ, ಸಾಮಾನ್ಯಕ್ಕಿಂತ ಏಳು ಪಟ್ಟು ಹೆಚ್ಚು ವಲಸಿಗರು, ಯುರೋಪ್ ತೀರವನ್ನು ತಲುಪಲಿದ್ದಾರೆ. ವಲಸೆ ಬಿಕ್ಕಟ್ಟು ಈಗಾಗಲೇ ಯುಕೆ ಮತ್ತು ಯುರೋಪ್‌ನಲ್ಲಿ ಪ್ರಮುಖ ರಾಜಕೀಯ ಸಮಸ್ಯೆಯಾಗಿದೆ ಎಂದಿದ್ದಾರೆ.
ಯುರೋಪಿಯನ್ ಒಕ್ಕೂಟದ ಕುಸಿತ
2016 ರಲ್ಲಿ ಬ್ರಿಟನ್ ಬ್ರೆಕ್ಸಿಟ್‌ಗೆ ಮತ ಚಲಾಯಿಸಿದಾಗಿನಿಂದ ಬಿಕ್ಕಟ್ಟಿನಲ್ಲಿರುವ ಯುರೋಪಿಯನ್ ಒಕ್ಕೂಟದ ಕುಸಿತದ ಬಗ್ಗೆಯೂ ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ ಎಂದು ಕೆಲವರು ನಂಬುತ್ತಾರೆ.
ನಾಸ್ಟ್ರಾಡಾಮಸ್ ಪ್ರಕಾರ, ಬ್ರೆಕ್ಸಿಟ್ ಕೇವಲ ಪ್ರಾರಂಭವಾಗಿದೆ. ಇಡೀ ಯುರೋಪಿಯನ್ ಯೂನಿಯನ್ 2022 ರಲ್ಲಿ ಕುಸಿಯ ಆರಂಭಿಸುತ್ತದೆ ಎಂದಿದ್ದಾರೆ. 2022 ರ ಕೃತಕ ಬುದ್ಧಿಮತ್ತೆಯ ರೋಬೋಟ್ ಗಳ ಅಭಿವೃದ್ಧಿ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯವಾಣಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ