ಭಕ್ತರು, ಮಠಾಧೀಶರ ಸಮ್ಮುಖದಲ್ಲಿ ಶಿವಾತ್ಮನಂದ ಶ್ರೀಗಳ ಅಂತ್ಯಕ್ರಿಯೆ

ಚಿಕ್ಕಬಳ್ಳಾಪುರ:


ಇಹಲೋಕ ತ್ಯಜಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಸಿದ್ದನಗವಿ ಜ್ಞಾನಾನಂದಾಶ್ರಮದ ಶ್ರೀ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ(59) ಅವರ ಅಂತಿಮ ಸಮಾಧಿ ಕ್ರಿಯೆ ಗುರುವಾರ ಸಂಜೆ ಆಶ್ರಮದ ಆವರಣದಲ್ಲಿ ನೆರವೇರಿತು.

ಅರೆಮಾದನಹಳ್ಳಿಯ ಶ್ರೀ ಶಿವಸುಜ್ಞಾನ ಮೂರ್ತಿ ಸ್ವಾಮೀಜಿ, ನಿಟ್ಟರಹಳ್ಳಿಸ್ವಾಮೀಜಿ, ವಡ್ನಾಳ್‍ಸ್ವಾಮೀಜಿ, ಸುಬ್ರಾಯಾಚಾರ್ಯ ಸ್ವಾಮೀಜಿ, ಸ್ವಾಮಿನಿ ಪ್ರಮಾನಂದ, ಸುಬ್ರಾಯಶರ್ಮ, ಡಾ.ಜಿ.ಜ್ಞಾನಾನಂದ ಸೇರಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸನ್ಯಾಸ ಪರಂಪರೆಯ ವಿಧಿ-ವಿಧಾನದ ಅನುಸಾರ ನೆರವೇರಿತು.

ಬೆಂಗಳೂರಿನಿಂದ ಮಧ್ಯಾಹ್ನ ಶ್ರೀಗಳ ಪಾರ್ಥೀವ ಶರೀರವನ್ನು ಆಶ್ರಮಕ್ಕೆ ಕರೆತರಲಾಯಿತು. ಈ ವೇಳೆ ಭಕ್ತರಲ್ಲಿ ಮಡುಗಟ್ಟಿದ ದುಃಖದ ಕಟ್ಟೆಯೊಡೆಯಿತು. ಆಶ್ರಮದ ಶಿಷ್ಯಂದಿರು ಅಶ್ರುತರ್ಪಣ ಸಲ್ಲಿಸಿದರು. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ತಮಿಳುನಾಡು, ಆಂಧ್ರ,ಮಹಾರಾಷ್ಟ್ರದಿಂದಲೂ ಭಕ್ತರು ದರ್ಶನಕ್ಕೆ ಆಗಮಿಸಿದರು. ವಿಶ್ವಕರ್ಮ ಸಮಾಜದ ರಾಜ್ಯ, ಜಿಲ್ಲಾ ಮುಖಂಡರುಗಳು ಆಗಮಿಸಿ ಶ್ರೀಗಳ ಅಂತಿಮದರ್ಶನ ಪಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link