ಮೇಲ್ಮನೆ ಮೇಲಾಟಕ್ಕೆ ಇಂದು ಭವಿಷ್ಯ

ಬೆಂಗಳೂರು:

ವಿಧಾನಪರಿಷತ್ ಚುನಾವಣೆ ಅಂತಿಮ ಹಂತ ತಲುಪಿದ್ದು ರಾಜ್ಯದ 20 ಜಿಲ್ಲೆಗಳಲ್ಲಿನ 25 ಕ್ಷೇತ್ರಗಳ 90 ವಿಧಾನಪರಿಷತ್ ಅಭ್ಯರ್ಥಿಗಳ ಭವಿಷ್ಯವನ್ನು 98846 ಮತದಾರರು ಬರೆಯಲಿದ್ದಾರೆ.

ರಾಜ್ಯದ 20 ಜಿಲ್ಲೆಗಳಲ್ಲಿ ಸಂಪೂರ್ಣ ತಯಾರಿ ನಡೆದಿದ್ದು ಅಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಕಲ ಸಿದ್ಧತೆಗಳನ್ನ ನಡೆಸಿದ್ದಾರೆ. ಒಟ್ಟು ಚುನಾವಣೆಗೆ 7073 ಪಿಆರ್ ಓಗಳನ್ನು ಹಾಗೂ 6648 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಕಮಾಡಲಾಗಿದೆ.

25 ಕ್ಷೇತ್ರಗಳಿಂದ ಒಟ್ಟು 90 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 20 ಅಭ್ಯರ್ಥಿಗಳು ಕಣದಲ್ಲಿದ್ದರೆ. ಜೆಡಿಎಸ್ 6, ಅಮ್ ಆದ್ಮಿ 3, ರೈತ ಭಾರತ್ ಪಾರ್ಟಿ 1, ಕರ್ನಾಟಕ ರಾಷ್ಟ್ರ ಸಮಿತಿ 1, ಕನ್ನಡ ಚಳುವಳಿ ವಾಟಾಳ್ ಪಕ್ಷ 1, ಜನಾತಾ ಪಾರ್ಟಿ 2, ಜನಹಿತ ಪಕ್ಷ 1, ಜೆಡಿಯು 1, ಎಸ್ ಡಿಪಿಐ 1 ಹಾಗೂ ಪಕ್ಷೇತರರು 33 ಸೇರಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದು ಈ ಪೈಕಿ 89 ಪುರುಷರು ಕಣದಲ್ಲಿದ್ದರೆ ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡ ಏಕೈಕ ಮಹಿಳಾ ಅಭ್ಯರ್ಥಿಯನಿಸಿದ್ದಾರೆ.

ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ 6073 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನಕ್ಕೆ ಇವಿಎಂ ಯಂತ್ರ ಬಳಸುತ್ತಿಲ್ಲ. ಬ್ಯಾಲೆಟ್ ಕಾಗದದ ಮೂಲಕ ಮತದಾನ ನಡೆಯಲಿದೆ. ಇದಕ್ಕಾಗಿ ವಿಶೇಷ ಪೆನ್ ಒದಗಿಸಲಾಗಿದೆ. ಅದರಿಂದ ಬ್ಯಾಲೆಟ್ ಕಾಗದದ ಮೇಲೆ ಗುರುತು ಹಾಕಿ, ಮತ ಚಲಾಯಿಸಬೇಕಿದೆ. ಮತದಾರರು ಮತಗಟ್ಟೆಯೊಳಗೆ ಮೊಬೈಲ್ ಮತ್ತು ಪೆನ್ ತರುವುದನ್ನು ನಿಧಿಸಲಾಗಿದೆ.


ಬೆಂಗಳೂರು ನಗರ 86 ಮತಗಟ್ಟೆಗಳು

ಬೆಂಗಳೂರು ನಗರ ಕ್ಷೇತ್ರದ 86 ಮತಗಟ್ಟೆಗಳ ಪೈಕಿ 38 ಸೂಕ್ಷ್ಮ, 3 ಅತಿಸೂಕ್ಷ್ಮ ಮತ್ತು 45 ಸಾಮಾನ್ಯ ಮತಗಟ್ಟೆಗಳಿವೆ. ಭದ್ರತೆಗಾಗಿ ಒಟ್ಟು 313 ಪೆÇಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದೆ. ಹಾಗೆಯೇ, ಪ್ರತಿಯೊಂದು ಮತಗಟ್ಟೆಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಜತೆಗೆ ವಿಡಿಯೊ ಗ್ರಾಫರ್‍ವೊಬ್ಬರು ಇಡೀ ದಿನ ವಿಡಿಯೊ ಚಿತ್ರೀಕರಣ ಮಾಡಲಿದ್ದಾರೆ ಎಂದು ಹೇಳಿದರು.
ಬೆಂಗಳೂರು ನಗರ ಕ್ಷೇತ್ರದಲ್ಲಿ 83 ಗ್ರಾಮ ಪಂಚಾಯಿತಿ ಮತ್ತು ಆನೇಕಲ್, ಅತ್ತಿಬೆಲೆ, ಬೊಮ್ಮಸಂದ್ರ ಪುರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರೂ ಸೇರಿ ಒಟ್ಟು 2073 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಇದರಲ್ಲಿ955 ಪುರುಷರು, 1077 ಮಹಿಳೆಯರು, ಇತರೆ ಒಬ್ಬರು ಇದ್ದಾರೆ. ಆಯಾ ಗ್ರಾಮ ಪಂಚಾಯಿತಿ, ಪುರಸಭೆಯಲ್ಲೇ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಗಿದೆ.

ಬೆಂಗಳೂರು ಗ್ರಾಮಾಂತರ

ಬೆಂಗಳೂರು ನಗರ ಕ್ಷೇತ್ರದ 86 ಮತಗಟ್ಟೆಗಳ ಪೈಕಿ 38 ಸೂಕ್ಷ್ಮ, 3 ಅತಿಸೂಕ್ಷ್ಮ ಮತ್ತು 45 ಸಾಮಾನ್ಯ ಮತಗಟ್ಟೆಗಳಿವೆ. ಭದ್ರತೆಗಾಗಿ ಒಟ್ಟು 313 ಪೆÇಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap