ಗುಬ್ಬಿ:
ಸುಮಾರು 10 ರಿಂದ 15 ವರ್ಷಗಳಿಂದ ಗುಬ್ಬಿಯ ಬಿ ಹೆಚ್ ರಸ್ತೆಯಲ್ಲಿ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡುವ ಉಮೇಶ್ ತಿಪಟೂರಿನ ಹಳೆಪಾಳ್ಯದವರು ಇವರ ಕುಲ ಕಸುಬು ಗಣೇಶ ಮೂರ್ತಿ ತಯಾರಿಕೆ ಇವರ ಪ್ರಕಾರ ಈ ವರ್ಷ ಸುಮಾರು 500 ಗಣೇಶ ಮೂರ್ತಿಗಳನ್ನು ತಯಾರಿಸಿದ್ದರಂತೆ ಇದರ ಪೈಕಿ ಈಗಾಗಲೇ ಸಾಕಷ್ಟು ವ್ಯಾಪಾರ ವಾಗಿವೆ ಎಂದು ಸಂತಸದಿಂದ ಹೇಳಿದರು
ಮೂರ್ನಾಲ್ಕು ತಿಂಗಳಿಂದ ಮಣ್ಣು ತಂದು ಹದಮಾಡಿ ಅದಕ್ಕೊಂದು ರೂಪ ಕೊಟ್ಟು ಜನ ಒಪ್ಪುವ ರೀತಿಯಲ್ಲಿ ಬಣ್ಣಗಳನ್ನು ಹಾಕಿ ಮಾರುಕಟ್ಟೆಗೆ ಬಂದರೆ ಅಲ್ಲಿ ಬೇಡಿಕೆಯೇ ಇಲ್ಲದಿದ್ದರೆ ಇವರ ಪಾಡೇನು ಜೊತೆಗೆ ನಗರಗಳಲ್ಲಿ ಬಣ್ಣದ ಗಣಪತಿ ಇಡುವ ಹಾಗಿಲ್ಲ ಇವೆಲ್ಲಾ ಕಟ್ಟು ಪಾಡುಗಳ ನಡುವೆ ಇವರ ವ್ಯಾಪಾರ ವೃದ್ಧಿಸಿರುವುದು ಸಂತಸದ ಸಂಗತಿ,
