ಹೆಣ್ಣು ಮಕ್ಕಳನ್ನು ಈ ಊರಿನಲ್ಲಿ ವಸ್ತುವಿನಂತೆ ಹರಾಜು ಹಾಕುತ್ತಾರೆ : ಯಾಕೆ ಗೊತ್ತಾ…?

ರಾಜ್‌ ಗಢ :

ಮಧ್ಯಪ್ರದೇಶದಲ್ಲಿ ಪದ್ಧತಿ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಹರಾಜಿನಲ್ಲಿ ಮಾರಾಟ ಮಾಡುವ ಸಂಪ್ರದಾಯ ಇನ್ನೂ ಕೂಡ ಚಾಲ್ತಿಯಲ್ಲಿದೆ. ಯುವತಿಯರನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ, ಜೀ ನ್ಯೂಸ್​ ಈ ಕುರಿತು ವರದಿ ಮಾಡಿದೆ. ಮಧ್ಯಪ್ರದೇಶದ ರಾಜ್​ಗಢ್​ನಲ್ಲಿ ಹೆಣ್ಣುಮಕ್ಕಳನ್ನು ಅವರ ಕುಟುಂಬದವರೇ ಹರಾಜು ಹಾಕುತ್ತಾರೆ ಎನ್ನುವ ವಿಚಾರ ಆತಂಕವನ್ನುಂಟು ಮಾಡುತ್ತದೆ.

  ಪೊಲೀಸ್​ ಅಧಿಕಾರಿಗಳು ಸೇರಿದಂತೆ ಹಲವರಿಗೆ ಈ ವಿಚಾರ ತಿಳಿದಿದ್ದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಜಗಡಾ ನಾಥರಾ ಎನ್ನುವ ಸಂಪ್ರದಾಯದಂತೆ ಮಕ್ಕಳನ್ನು ಹರಾಜು ಹಾಕಲಾಗುತ್ತದೆ.ಮಗಳಿಗೆ ಬಿಡ್ಡಿಂಗ್ ನಡೆದು ಅತಿ ಹೆಚ್ಚು ಬಿಡ್ ಮಾಡಿದವರಿಗೆ ಮಗಳನ್ನು ಒಪ್ಪಿಸಲಾಗುತ್ತದೆ.ಈ ಗ್ರಾಮದಲ್ಲಿ ಮದುವೆಯಾದ ಅಥವಾ ಮದುವೆಯಾಗಲಿರುವ ಎಷ್ಟೋ ಹೆಣ್ಣು ಮಕ್ಕಳಿದ್ದಾರೆ. 

  ಈ ಪದ್ಧತಿಯಲ್ಲಿ ಮೊದಲು ಮಹಿಳೆ ಬಾಲ್ಯವಿವಾಹಕ್ಕೆ ಒಳಗಾಗುತ್ತಾಳೆ. ನಂತರ ಬಾಲಕಿಯನ್ನು ದೈಹಿಕವಾಗಿ ನಿಂದಿಸಿ ಹಲವು ಮಂದಿ ಬಿಟ್ಟು ಹೋಗಿದ್ದಾರೆ, ಆದರೆ ಈ ಹೊರತಾಗಿಯೂ ಪತ್ನಿ ಆತನಿಗೆ ವಿಚ್ಛೇದನ ನೀಡುವುದಿಲ್ಲ.ವಿಚ್ಛೇದನಕ್ಕಾಗಿ, ಹುಡುಗಿಯ ತಂದೆ ಆಕೆಯ ಅತ್ತೆಗೆ ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಹಣಕ್ಕಾಗಿ, ಹುಡುಗಿಯ ತಂದೆ ಮಗಳನ್ನು ಹರಾಜು ಹಾಕುತ್ತಾನೆ.

   ರಾಜ್‌ಗಢದಲ್ಲಿ ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗನ ಪತ್ನಿಯನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿ ಸಿಕ್ಕಿಬಿದ್ದಿದ್ದ. ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಮಧ್ಯಪ್ರದೇಶ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

Recent Articles

spot_img

Related Stories

Share via
Copy link
Powered by Social Snap