ಬೀದರ್:
ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮುಂದುವರಿಯುತ್ತಿದ್ದು, ದೊಡ್ಡ ದೊಡ್ಡವರ ಕೈವಾಡವಿರುವುದು ಬೆಳಕಿಗೆ ಬರುತ್ತಿದೆ. ಈ ನಡುವೆ ರಾಜ್ಯದ ಎಲ್ಲಾ ಇಲಾಖೆಯಲ್ಲೂ ಅಕ್ರಮ ಇರುವುದು ನನಗಷ್ಟೇ ಅಲ್ಲ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಜೆಡಿಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ: ಹೆಚ್‌ಡಿಕೆ ಭರವಸೆ
ಬೀದರ್ನಲ್ಲಿ ಮಾತನಾಡಿರುವ ಅವರು ಸಹಕಾರ ಕ್ಷೇತ್ರ, ಜಿಲ್ಲಾ ಹಾಲು ಉತ್ಪಾದಕರ ಸಂಘದಲ್ಲಿ 25ರಿಂದ 50 ಲಕ್ಷ ದವರೆಗೆ ಲಂಚ ಪಡೆಯಲಾಗುತ್ತಿದೆ.ಎಲ್ಲಿ ಅಕ್ರಮವಿಲ್ಲ ಹೇಳಿ, ಎಲ್ಲಾ ಇಲಾಖೆಯಲ್ಲೂ ದೊಡ್ಡ ದೊಡ್ಡ ಕರ್ಮಕಾಂಡಗಳು ನಡೆಯುತ್ತಿವೆ ಎಂದರು.ಕೆಪಿಎಸ್ಸಿ ಶುದ್ಧ ಮಾಡುತ್ತೇವೆ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರ ಶ್ಯಾಮಭಟ್ಟರನ್ನ ನೇಮಿಸಿದ್ದರು. ಅವರು ಒಂದು 1 ಕೋಟಿ ರೂ.ಹಣ ತೆಗೆದುಕೊಂಡಿದ್ದಾರೆ. ಆದರೆ ಕೆಲಸವೂ ಸಿಗದೇ ದುಡ್ಡು ಕಳೆದುಕೊಂಡವರು ಇವತ್ತಿಗೂ ಅಲೆದಾಡುತ್ತಿದ್ದಾರೆ.
ಪಿ.ಎಸ್.ಐ.ನೇಮಕಾತಿ ಅಕ್ರಮ ಆಡಿಯೋ ತನಿಖೆ , ತಪ್ಪಿತಸ್ಥರ ವಿರುದ್ಧ ಕ್ರಮಮುಖ್ಯ : ಮಂತ್ರಿ ಬಸವರಾಜ ಬೊಮ್ಮಾಯಿ
ನಾಡಿನ ಬಡ ಮಕ್ಕಳು ಕೆಲಸ ಸಿಗದೇ ದುಡ್ಡು ಕಳೆದುಕೊಂಡಿದ್ದಾರೆ,ಇದನ್ನ ಸರಿಪಡಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಸಿದ್ದರಿಲ್ಲ ಇವತ್ತು ಎಸ್‌ಐ ಒಂದು ಹೊರಗಡೆ ಬಂದಿದೆ, ಪ್ರತಿಯೊಂದು ಕ್ಷೇತ್ರದಲ್ಲಿ ಈ ರೀತಿ ಅಕ್ರಮ ನಡೆಯುತ್ತಿದೆ ಎಂದರು.ಮನೆ ಮಠ ಮಾರಿ ೨೫, ೩೦ ಲಕ್ಷ ಕೊಟ್ಟು ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದರಲ್ಲಿ ದೊಡ್ಡವರು ಯಾರು ಸಿಕ್ಕಿಹಾಕಿಕೊಳ್ಳುವುದಿಲ್ಲ. ಇದರಲ್ಲಿ ದೊಡ್ಡ ರಾಜಕಾರಣಿಗಳು ಇದ್ದಾರೆ ಎಂದು ಹೇಳಲೂ ಆಗುವುದಿಲ್ಲ. ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.
ಕ್ರೆಡಿಟ್-ಡೆಬಿಟ್ ಕಾರ್ಡ್ ಕ್ಲೋಸ್ ಇನ್ನು ಸರಳ; ಜುಲೈ 1ರಿಂದ ಹೊಸ ನಿಯಮ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ