ನಾಯಕನಹಟ್ಟಿ :
ನಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಹಿಡೇರಿಸುತ್ತಿಲ್ಲ ಎಂದು ಸರ್ಕಾರಿ ಪೌರಸೇವ ನೌಕರರ ಜಿಲ್ಲಾಧ್ಯಕ್ಷರಾದ ಲವ ಆರೋಪಿಸಿದ್ದಾರೆ.
ಪಟ್ಟಣ ಪಂಚಾಯಿತಿ ಕಛೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಹಿಡೇರಿಸುವಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಅನರ್ದಿಷ್ಟ ಧರಣಿ ಸತ್ಯಗ್ರಹ ಎರಡನೇ ದಿನದ ಮುಷ್ಕರ ಆರಂಭಿಸಿದ್ದಾರೆ.
ನಂತರ ಮಾತನಾಡಿದ ಅವರು ನಾಯಕನಹಟ್ಟಿ ಪಂಚಾಯಿತಿ ಸರ್ಕಾರಿ ನೌಕರರಿಗೆ, ಸಿಬ್ಬಂದಿಗಳಿಗೆ ಬೆಂಬಲ ಸೂಚಿಸಿದರು. ಕಂಪ್ಯೂಟರ್ ಅಪರೇಟರ್‌ಗಳಿಗೆ, ಪೌರಕಾರ್ಮಿಕರಿಗೆ, ಹೊರಗುತ್ತಿಗೆ ನೌಕರರನ್ನು ಪರ್ಮನೆಂಟ್ ಮಾಡಬೇಕು. ನಮ್ಮ ಬೇಡಿಕೆಗಳು ಹಿಡೇರದೆ ಹೋದರೆ ಮುಷ್ಕರ ಮಾಡುತ್ತೇವೆ. 27ನೇ ತಾರೀಖಿನಿಂದ ಮುಷ್ಕರ ಮಾಡುತ್ತಿದ್ದೇವೆ ನಮ್ಮ ಬಗ್ಗೆ ರಾಜ್ಯ ಸರ್ಕಾರ ಸ್ವಲ್ಪವು ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು. ರಾಜ್ಯ ಸರ್ಕಾರ ಸುಮಾರು 20-25 ವರ್ಷಗಳಿಂದ ಒಬ್ಬರನ್ನು ಪರ್ಮನೆಂಟ್ ಮಾಡುತ್ತಿಲ್ಲ ಎಂದು ಆರೋಪ ಮಾಡಿದರು. ಕೆಜಿಡಿ, ವಿಮಾ ಸೌಲಭ್ಯ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳು ನಮಗೆ ಕೊಡಬೇಕು, ಪೌರಕಾರ್ಮಿಕರನ್ನು ಖಾಯಂ ನೌಕರರಾಗಿ ಘೋಷಿಸಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಕರವಸೂಲಿಗಾರ ಸಂದೀಪ್ ಮಾತನಾಡಿ ನಮ್ಮ ಮನೆ, ನಮ್ಮ ಪಟ್ಟಣ ಸ್ವಚ್ಚವಾಗಿ ಇರಬೇಕಾದರೆ ಪೌರಕಾರ್ಮಿಕರ ಪಾತ್ರ ಬಹಳ ದೊಡ್ಡದಿರುತ್ತದೆ. ಅವರಿಗೆ ಯಾವ ಸೌಲಭ್ಯಗಳು ಸಿಗುತ್ತಿಲ್ಲ. ಸರ್ಕಾರಿ ನೌಕರರಿಗೂ ಸಹ ಯಾವ ಸೌಲಭ್ಯಗಳು ಸಿಗುತ್ತಿಲ್ಲ. ಪೌರಕಾರ್ಮಿಕರು ಮತ್ತು ಹೊರಗುತ್ತಿಗೆದಾರರನ್ನು ಯಾರನ್ನು ಪರ್ಮನೆಂಟ್ ಮಾಡುತ್ತಿಲ್ಲ. ದಿನಕೂಲಿ ಪೌರಕಾರ್ಮಿಕರ ಸೇವೆ ಮಾಡಿದಂತಹ ಖಾಯಂಗೊಳಿಸಬೇಕು ಮಳೆ, ಚಳಿ, ಗಾಳಿ, ಬಿಸಿಲು ಯಾವುದನ್ನು ಲೆಕ್ಕಿಸದೆ ಹಾಗೂ. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಎನ್‌ಪಿಎಸ್ ಬೇಡ ಓಪಿಎಸ್ ಜಾರಿಗೊಳಿಸಬೇಕು. ಸರ್ಕಾರಕ್ಕೆ 45 ದಿನಗಳು ಗಡುವು ನೀಡಿದ್ದೇವು ಆದರೆ ಸರ್ಕಾರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರನ್ನು ನಿರ್ಲಕ್ಷö್ಯ ವಹಿಸಿದೆ ಆದ್ದರಿಂದ ನಮ್ಮ ಬೇಡಿಕೆಗಳು ಹಿಡೇರುವವರೆಗೆ ಮುಷ್ಕರ ಸತ್ಯಗ್ರಹ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಾಯಕನಹಟ್ಟಿ ಪೌರಕಾರ್ಮಿಕರ ಸಂಘದ ನೂತನ ಅಧ್ಯಕ್ಷ ಎಸ್.ಎಂ.ಮAಜುನಾಥ್ ಮಾತನಾಡಿ ರಾಜ್ಯದಲ್ಲಿರುವ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಮತ್ತು ನೀರು ಸರಬರಾಜು ಸೇರಿದಂತೆ ವಾಹನ ಚಾಲಕರಿಗೂ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳು ದೊರೆಯುವಂತಾಗಬೇಕು. ಕೋರೊನ ಸಮಯದಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದೆ ಸೇವೆ ಮಾಡಿದ್ದೇವು. ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಹಿಡೇರಿಸದೆ ಹೋದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಟಿ.ತಿಪ್ಪೇಸ್ವಾಮಿ, ಕೆ.ವಿ.ತಿಪ್ಪೇಶಿ, ಆರ್.ಸಂದೀಪ್, ನಾಗರತ್ನಮ್ಮ, ದಯಾನಂದ ಸ್ವಾಮಿ, ಮಂಗಳ ಗೌರಮ್ಮ, ಮಧು, ಅಭಿಷೇಕ್, ಟಿ.ಸುರೇಶ್, ತಿಪ್ಪಮ್ಮ, ತಿಪ್ಪೇಸ್ವಾಮಿ, ಏನ್.ಲತಾ, ಶಿವರುದ್ರಪ್ಪ, ಏ.ಕೆ.ತಿಪ್ಪೇಸ್ವಾಮಿ, ಹರಳಯ್ಯ, ಓಬಯ್ಯ, ಬೋರಯ್ಯ, ಎಸ್.ತಿಪ್ಪೇಸ್ವಾಮಿ, ಎಸ್.ಎಂ.ಮAಜುನಾಥ್, ಬಿ.ತಿಪ್ಪೇಸ್ವಾಮಿ, ಹನುಮಂತಪ್ಪ, ಮುನಿಯಪ್ಪ, ಬಿ.ರುದ್ರಪ್ಪ, ಕಾಶಿನಾಥ್, ಮೈಲಾರಪ್ಪ, ಹೆಚ್.ಹಾಲಪ್ಪ, ರತ್ನಮ್ಮ, ರುದ್ರಣ್ಣ, ಗುಡದಯ್ಯ, ಜಿ.ಪಿ.ರತ್ನಮ್ಮ, ಇಂಜಿನಿಯರ್ ಶ್ರೀನಿವಾಸ್ ಇನ್ನು ಮುಂತಾದವರು ಹಾಜರಿದ್ದರು.
