ಬಯಲುಸೀಮೆಯ ಬಂಗಾರದ ಬೆಳೆ ಹುಣಸೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ

ತುಮಕೂರು:

ಹುಣಸೆ ಬೆಳೆಗಾರನ ಜೇಬಿಗೆ ಕೊನೆಗೂ ದಕ್ಕದ ಬೆಂಬಲ ಬೆಲೆ

ಮಳೆ, ಗಾಳಿಗೂ ಜಗ್ಗದೆ, ಕುಗ್ಗದೆ ಗಟ್ಟಿಯಾಗಿ ನೆಲದಲ್ಲಿ ಬೇರುಬಿಟ್ಟು ಬಯಲು ಸೀಮೆಯಾದ ತುಮಕೂರು, ಚಿತ್ರದುರ್ಗ, ಕೋಲಾರ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಬಯಲು ಸೀಮೆಯ ಭಾಗದಲ್ಲಿನ ರೈತರ ಬಂಗಾರದ ಬೆಳೆ ಎಂದರೆ ಅದು ಹುಣಸೆಹಣ್ಣಿನ ಬೆಳೆಯಾಗಿದೆ.

ಜಗತ್ತಿನ ಪ್ರತಿಯೊಬ್ಬರೂ ದಿನ ನಿತ್ಯವೂ ಆಹಾರ ಪದಾರ್ಥಗಳಿಗೆ ಸೇರಿಸಲೇಬೇಕಾದ ಹಣ್ಣು ಎಂದರೆ ಅದು ಹುಣಸೆಹಣ್ಣಾಗಿದೆ. ಚಿಕ್ಕ ಚಿಕ್ಕ ಸಸಿಗಳನ್ನು ಕೊಂಡು ತಂದು ಕೊಂಚ ಮಳೆಗಾಲದಲ್ಲಿ ತಮ್ಮ ಜಮೀನುಗಳ ನಡುವೆ, ಇಲ್ಲವೆ ಬಂಜರು ಭೂಮಿಯಲ್ಲಿ ಇಂತಹ ಸಸಿ ನೆಟ್ಟು ಬಿಸಿಲ ಬೇಗೆಯಲ್ಲೂ ರೈತರು ನೀರುಣಿಸಿ ಮಕ್ಕಳಂತೆ ಸಲಹುವ ಬೆಳೆಯೆ ಹುಣಸೆ ಹಣ್ಣಿನ ಬೆಳೆಯಾಗಿದೆ.

ಆರಂಭದಲ್ಲಿ ಒಂದೆರಡು ವರ್ಷಗಳವರೆಗೆ ಸ್ವಂತ ಮಕ್ಕಳಂತೆ ಸಸಿಗಳಿಗೆ ನೀರುಣಿಸಿ ಬೆಳೆಸಿದರೆ ಈ ಮರಗಳು ಬೆಳೆದು ದೊಡ್ಡವಾಗಿ ಇಡೀ ಕುಟುಂಬವನ್ನೇ ನಿರಂತರವಾಗಿ ವರ್ಷಗಟ್ಟಲೆ ಆರ್ಥಿಕವಾಗಿ ಸಲಹುವ ಕೆಲಸವನ್ನು ಮಾಡುತ್ತವೆ. ಬೆಳೆದು ದೊಡ್ಡವಾದ ಮರಗಳು ಮಳೆಂiÀi ಆಶ್ರಯವಿಲ್ಲದಿದ್ದರೂ ಹತ್ತಾರು ವರ್ಷ ಫಲ ಕೊಡಲು ತಯಾರಾಗುತ್ತವೆ.

ನಗರದಲ್ಲಿ ಮರಗಳ ಮಾರಣ ಹೋಮ

ಇಡೀ ರಾಜ್ಯದಲ್ಲಿ ಈ ಹುಣಸೆ ಮರಗಳನ್ನು ಪೋಷಿಸಿ ಬೆಳೆಸುವ ಜಿಲ್ಲೆಗಳು ತುಂಬಾ ಅಪರೂಪ. ಚಿತ್ರದುರ್ಗ, ಕೋಲಾರ, ದಾವಣಗೆರೆ, ದೊಡ್ಡಬಳ್ಳಾಪುರ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಹುಣಸೆ ಮರಗಳನ್ನು ರೈತರು ಅತಿ ಹೆಚ್ಚು ಬೆಳೆದು ಪೋಷಿಸುತ್ತಾರೆ. ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಬಹುತೇಕ ರೈತರು ತಮ್ಮದೇ ಜಮೀನುಗಳಲ್ಲಿ ಹುಣಸೆ ಮರಗಳನ್ನು ಬೆಳೆಸಿ ಈ ಬೆಳೆಯನ್ನು ಹಣದ ಬೆಳೆಯಾಗಿಸಿಕೊಂಡು ಜೀವನ ಸಾಗಿಸುವ ಪರಿಪಾಠ ಇಂದಿಗೂ ಇದೆ.

ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಹುಣಸೆ ಹಣ್ಣನ್ನು ಬೆಳೆಯುವ ಪ್ರಮುಖ ತಾಲ್ಲೂಕುಗಳು ಎಂದರೆ ಅದು ಶಿರಾ, ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ತಾಲ್ಲೂಕುಗಳೇ ಆಗಿರುವುದು ನಿಜಕ್ಕೂ ಈ ಜಿಲ್ಲೆಯ ಹೆಮ್ಮೆಯ ಸಂಗತಿಯೂ ಹೌದು. ಈ ನಾಲ್ಕು ತಾಲ್ಲೂಕುಗಳಲ್ಲಿ ಅಷ್ಟೇ ಅಲ್ಲದೆ ನೆರೆಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲೂ ಈ ಬೆಳೆಯು ರೈತರ ಜೀವನಾಡಿ ಯಾಗಿದೆ. ತಲೆ ತಲೆಮಾರುಗಳಿಂದಲೂ ರೈತರು ಹುಣಸೆ ಮರವನ್ನು ಶ್ರದ್ಧಾಭಕ್ತಿಯಿಂದ ಬೆಳೆಸಿರುವ ನಿದÀರ್ಶನಗಳಿವೆ.

ಈ ತಾಲ್ಲೂಕುಗಳ ಅನೇಕ ಕುಟುಂಬಗಳು ನೂರಾರು ಎಕರೆಗಳಲ್ಲಿ ಹುಣಸೆ ತೋಪುಗಳನ್ನು ಮಾಡಿಕೊಂಡು ಕುಟುಂಬದ ವಂಶಸ್ಥರು ಈ ತೋಪುಗಳನ್ನು ಭಾಗ ಮಾಡಿಕೊಂಡು ಜೀವನಾಧಾರಕ್ಕೂ ಇದೇ ಬೆಳೆಯನ್ನು ಆಸರೆ ಮಾಡಿಕೊಂಡಿರುವುದು ಸತ್ಯವೂ ಹೌದು. ಇಂದಿಗೂ ಅನೇಕ ಕುಟುಂಬಗಳು ಈ ಬೆಳೆಯನ್ನೆ ನೆಚ್ಚಿಕೊಂಡು ಬದುಕುವುದನ್ನೂ ಕಾಣಬಹುದಾಗಿದೆ.

ಮಳೆಗಾಲ ದೂರಗೊಂಡು ಎಲ್ಲಾ ಬೆಳೆಗಳ ಕಾಲ ಹಿಂದಕ್ಕೆ ಸಾಗಿ ಹೋದ ಕೂಡಲೇ ಫೆಬ್ರುವರಿ ತಿಂಗಳ ಅಂತ್ಯ ಹಾಗೂ ಮಾರ್ಚ್ ತಿಂಗಳ ಆರಂಭದಲ್ಲಿ ಎಲ್ಲಾ ಮಾರುಕಟ್ಟೆಗಳಿಗೂ ಹುಣಸೆಹಣ್ಣಿನ ಬೆಳೆ ಮಾರಾಟಕ್ಕೆ ಬಂದೆ ಬಿಡುತ್ತದೆ. ಬಯಲುಸೀಮೆಯ ಗ್ರಾಮಗಳಲ್ಲಂತೂ ಹುಣಸೆಹಣ್ಣನ್ನು ಮರದಿಂದ ಬೀಳಿಸುವ, ಕೂಡಿಡುವ, ಹಣ್ಣನ್ನು ಬಿಚ್ಚಿ ಹಸನುಗೊಳಿಸುವ ನಿರಂತರ ಕಾಯಕ ಎರಡು ತಿಂಗಳವರೆಗೂ ನಡೆಯುತ್ತದೆ.

‘7ನೇ ವೇತನ ಆಯೋಗ’ ಜಾರಿ ನಿರೀಕ್ಷೆಯಲ್ಲಿದ್ದ ‘ರಾಜ್ಯ ಸರ್ಕಾರಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ

ಹಣ್ಣನ್ನು ಬಿಚ್ಚಿ ಹಸನುಗೊಳಿಸಲು ರೈತರು ಕೂಲಿಕಾರರ ಮೊರೆ ಹೋಗುವುದು ಕೂಡ ಸಹಜವಾಗುತ್ತದೆ. ಕೂಲಿಕಾರರೆ ಲಭ್ಯವಾಗದಂತಹ ಸ್ಥಿತಿಯಲ್ಲೂ ದುಬಾರಿ ಕೂಲಿಕೊಟ್ಟು ಹುಣಸೆಹಣ್ಣನ್ನು ಸ್ವಚ್ಛಗೊಳಿಸಿ ಮಾರುಕಟ್ಟೆಗೆ ತರುವ ಕೆಲಸವನ್ನು ರೈತರು ಪ್ರತಿ ವರ್ಷವೂ ಮಾಡುತ್ತಲೆ ಬರುತ್ತಾರೆ.

ಕರ್ನಾಟಕದಲ್ಲಿ ಈ ಹಣ್ಣನ್ನು ಅತಿ ಹೆಚ್ಚಾಗಿ ರೈತರು ಬೆಳೆಯುತ್ತಿರುವುದರಿಂದಾಗಿ ಇಲ್ಲಿನ ರಾಜ್ಯ ಸರ್ಕಾರ ಕೂಡ ರೈತರ ಕಣ್ಣಿಗೆ ಮಂಕುಬೂದಿ ಎರಚುತ್ತಲೇ ಬರುತ್ತಿದೆ. ಉಪ ಚುನಾವಣೆಗಳ ಸಂದರ್ಭದಲ್ಲಿ ಕಾಡುಗೊಲ್ಲ ನಿಗಮ ಸ್ಥಾಪಿಸುವುದಾಗಿ ಭರವಸೆ ನೀಡಿದಂತೆ ಸರ್ಕಾರ ಈ ಹುಣಸೆಹಣ್ಣಿನ ನಿಗಮ ಮಂಡಳಿ ರಚಿಸುವಂತೆಯೂ ಭರವಸೆ ನೀಡಿತ್ತಾದರೂ ಸರ್ಕಾರ ಇದೀಗ ಈ ನಿಗಮ ಮಂಡಳಿಯ ನೆನಪನ್ನೇ ಮರೆತಿದೆ

ಹುಣಸೆ ಮಳೆಯಾಶ್ರಿತ ರೈತರ ಮುಖ್ಯ ಬೆಳೆಯಾಗಿದ್ದು, ಈ ಬೆಳೆಯ ವೈಜ್ಞಾನಿಕ ಸಮಿಕ್ಷೆ ಆಗಬೇಕಿದೆ. ಮೌಲ್ಯವರ್ಧನೆ ಹಾಗೂ ಉಪ ಉತ್ಪನ್ನಗಳ ಕುರಿತು ಸಂಶೋಧನೆ ನಡೆಯಬೇಕಿದೆ.

-ಕೆ.ಟಿ.ತಿಪ್ಪೇಸ್ವಾಮಿ,ಸದಸ್ಯರು, ಪರಿಷತ್ ಮತ್ತು ಕಾರ್ಯಕಾರಿ ಸಮಿತಿ, ರಾಷ್ಟ್ರೀಯ ಯುವಜನ ಅಭಿವೃದ್ಧಿ ನಿಧಿ

 

 ( ಮುಂದುವರಿಯುವುದು… )

  –  ಬರಗೂರು ವಿರೂಪಾಕ್ಷ

 

                                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link