ಕುಣಿಗಲ್‌ : ಲಂಚ ಸ್ವೀಕಾರ : ಅಧಿಕಾರಿ ಸೇವೆಯಿಂದ ವಜಾ

ತುಮಕೂರು:

        ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಉಪನೋಂದಣಾಧಿಕಾರಿ ಕಚೇರಿಯ ಹಿಂದಿನ ಪ್ರಭಾರ ಉಪನೋಂದಣಾಧಿಕಾರಿ ಹಾಗೂ ಹಾಲಿ ಪ್ರಥಮ ದರ್ಜೆ ಸಹಾಯಕಿ ಯಶೋಧ ಅವರನ್ನು ರಾಜ್ಯ ಸರ್ಕಾರ ಕೆಲಸದಿಂದಲೇ ವಜಾಗೊಳಿಸಿದೆ.

    ಯಶೋಧ ಅವರು ತಮ್ಮ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮಂಜುನಾಥ್ ಎಂಬುವರು ದೂರು ನೀಡಿದ್ದರು. ತನಿಖೆಯಲ್ಲಿ ಲಂಚ ಪಡೆದದ್ದು ಸಾಬೀತಾದ ಹಿನ್ನೆಲೆಯಲ್ಲಿ ಯಶೋಧ ಅವರನ್ನು ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಲಾಗಿದೆ.ನೋಂದಣಿಗಳ‌ ಮಹಾಪರಿವಿಕಕ್ಷರು ಹಾಗೂ ಮುದ್ರಾಂಕ ಇಲಾಖೆ ಆಯುಕ್ತರಾದ ಡಾ. ಮಮತಾ ಬಿ.ಆರ್  ಅವರು ಈ ಆದೇಶ‌ ಹೊರಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link