ಮಹಾಭಾರತದ ಭೀಮ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ಇನ್ನಿಲ್ಲ

ಪಂಜಾಬ್ ಮೂಲದವರಾದ ಇವರು 6’6 ಎತ್ತರ ಮತ್ತು ಕ್ರೀಡಾಪಟು ಕೂಡಾ ಆಗಿದ್ದರು. ನಟನಾ ವೃತ್ತಿಗೆ ಕಾಲಿಡುವ ಮೊದಲು ಪ್ರವೀಣ್ ಹ್ಯಾಮರ್ ಮತ್ತು ಡಿಸ್ಕಸ್ ಥ್ರೋ ಅಥ್ಲೀಟ್ ಆಗಿದ್ದರು.

ಬಿಆರ್ ಚೋಪ್ರಾ ಅವರ ಪೌರಾಣಿಕ ಧಾರವಾಹಿಯಾದ ಮಹಾಭಾರತದಲ್ಲಿ ಭೀಮನ ಪಾತ್ರವನ್ನು ನಿರ್ವಹಿಸುವ ಮೂಲಕ ಜನಪ್ರಿಯರಾಗಿದ್ದ ನಟ ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

 ಪ್ರವೀಣ್ ಅವರು ತಮ್ಮ ಬೃಹತ್ ಮೈಕಟ್ಟುಗೆ ಹೆಸರುವಾಸಿಯಾಗಿದ್ದರು. ಮತ್ತು ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ ಹೆಂಚ್‌ಮ್ಯಾನ್, ಗೂಂಡಾ ಮತ್ತು ಅಂಗರಕ್ಷಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಪಂಜಾಬ್ ಮೂಲದವರಾದ ಇವರು 6’6 ಎತ್ತರ ಮತ್ತು ಕ್ರೀಡಾಪಟು ಕೂಡಾ ಆಗಿದ್ದರು. ನಟನಾ ವೃತ್ತಿಗೆ ಕಾಲಿಡುವ ಮೊದಲು ಪ್ರವೀಣ್ ಹ್ಯಾಮರ್ ಮತ್ತು ಡಿಸ್ಕಸ್ ಥ್ರೋ ಅಥ್ಲೀಟ್ ಆಗಿದ್ದರು.

ಅವರು ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಪದಕ ವಿಜೇತರಾಗಿದ್ದಾರೆ (2 ಚಿನ್ನ, 1 ಬೆಳ್ಳಿ ಮತ್ತು 1 ಕಂಚು) ಮತ್ತು ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ (1968 ಮೆಕ್ಸಿಕೋ ಗೇಮ್ಸ್ ಮತ್ತು 1972 ಮ್ಯೂನಿಚ್ ಗೇಮ್ಸ್) ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ಅರ್ಜುನ ಪ್ರಶಸ್ತಿ ಪುರಸ್ಕೃತರೂ ಹೌದು. ಕ್ರೀಡೆಯಿಂದಾಗಿ ಪ್ರವೀಣ್‌ಗೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಡೆಪ್ಯುಟಿ ಕಮಾಂಡೆಂಟ್ ಹುದ್ದೆ ಗಿಟ್ಟಿಸಿಕೊಂಡವರು.

ರವಿಕಾಂತ್ ನಾಗೈಚ್ ನಿರ್ದೇಶನದಲ್ಲಿ ಅವರ ಮೊದಲ ಪಾತ್ರವು ಸಂಭಾಷಣೆಯನ್ನು ಹೊಂದಿರಲಿಲ್ಲ. ನಂತರ, ಪ್ರವೀಣ್ 1981 ರಲ್ಲಿ ರಕ್ಷಾ ಎಂಬ ಮತ್ತೊಂದು ಚಲನಚಿತ್ರವನ್ನು ಮಾಡಿದರು. ಬಾಲಿವುಡ್‌ನಲ್ಲಿ, ಅಮಿತಾಭ್ ಬಚ್ಚನ್‌ರ ಶಾಹೆನ್‌ಶಾದಲ್ಲಿ ಮುಖ್ತಾರ್ ಸಿಂಗ್ ಪಾತ್ರದಲ್ಲಿ ಅವರ ಅತ್ಯಂತ ಸ್ಮರಣೀಯ ಅಭಿನಯವನ್ನು ನೀಡಿದ್ದಾರೆ.

ಕರಿಷ್ಮಾ ಕುದ್ರತ್ ಕಾ, ಯುಧ್, ಜಬರ್ದಸ್ತ್, ಸಿಂಘಸನ್, ಖುದ್ಗರ್ಜ್, ಲೋಹಾ, ಮೊಹಬ್ಬತ್ ಕೆ ದುಷ್ಮನ್, ಇಲಾಕಾ ಇದಷ್ಟೇ ಅಲ್ಲದೇ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 80ರ ದಶಕದ ಉತ್ತರಾರ್ಧದಲ್ಲಿ ಅವರು ಬಿ.ಆರ್ ಚೋಪ್ರಾ ಅವರ ಮಹಾಭಾರತದಲ್ಲಿ ಭೀಮ್ ಪಾತ್ರದಲ್ಲಿ ನಟಿಸಲು ಸಹಿ ಹಾಕಿದರು. ಅದು ಅವರನ್ನು ವೀಕ್ಷಕರ ದೃಷ್ಟಿಯಲ್ಲಿ ಅಮರಗೊಳಿಸಿದೆ.

ಇತರ ಪಾತ್ರವರ್ಗದ ಸದಸ್ಯರಂತೆ, ಪ್ರವೀಣ್ ಜನಪ್ರಿಯ ಪೌರಾಣಿಕ ಪ್ರದರ್ಶನದಲ್ಲಿ ಅವರು ನಿರ್ವಹಿಸಿದ ಪಾತ್ರಕ್ಕೆ ಮನ್ನಣೆ ದೊರೆತಿತು. ಇನ್ನೂ 2013 ರಲ್ಲಿ, ಪ್ರವೀಣ್ ರಾಜಕೀಯದಲ್ಲಿ ವೃತ್ತಿಜೀವನಕ್ಕಾಗಿ ಪ್ರಯತ್ನಿಸಿದರು ಮತ್ತು ದೆಹಲಿಯ ವಜೀರ್‌ಪುರ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.

ಈ ಸೋಲಿನ ನಂತರ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 2021 ರಲ್ಲಿ, ಪ್ರವೀಣ್ ಪಂಜಾಬ್ ಸರ್ಕಾರದಿಂದ ಪಿಂಚಣಿ ಪಡೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link