ಬೆಂಗಳೂರು:
ಆಗಸ್ಟ್.31ರ ಮಧ್ಯರಾತ್ರಿಯಿಂದ ವಾಹನ ಸವಾರರಿಗೆ ಟೋಲ್ ದರ ಹೆಚ್ಚಳದ ಶಾಕ್ ಸಿಗಲಿದೆ. ಹೀಗಾಗಿ ಇಂದು ಪ್ರಯಾಣಿಸುವಂತ ವಾಹನ ಸವಾರರಿಗೆ ಟೋಲ್ ದರ ಏರಿಕೆಯ ಬಿಸಿ ಮುಟ್ಟಲಿದೆ.ಈ ಮೂಲಕ ಪ್ರಯಾಣಿಕರಿಗೆ,
ಹೌದು ನಿನ್ನೆ ಮಧ್ಯರಾತ್ರಿಯಿಂದ ನೆಲಮಂಗಲ-ಹಾಸನ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ, ವಾಹನ ಸವಾರರಿಗೆ ದುಬಾರಿ ಟೋಲ್ ದರದ ಬರೆ ಬಿದ್ದಿದೆ. ಸೆಪ್ಟೆಂಬರ್ 1ರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.
ಹೊಸ ಟೋಲ್ ದರ
- ಕಾರುಗಳಿಗೆ ರೂ.50 ರಿಂದ 55 ರೂ.ಗೆ ಹೆಚ್ಚಳ ಮಾಡಲಾಗಿದೆ.
- ಲಘು ಮೋಟಾರು ವಾಹನಗಳ ಶುಲ್ಕವನ್ನು 90 ರಿಂದ 100ರೂ.ಗೆ ಹೆಚ್ಚಿಸಲಾಗಿದೆ.
- ಬಸ್, ಟ್ರಕ್ ಗಳ ಟೋಲ್ ಶುಲ್ಕ ರೂ.185 ರಿಂದ 200ರಕ್ಕೆ ಏರಿಕೆ ಮಾಡಲಾಗಿದೆ.
- ಮಲ್ಟಿ ಆಕ್ಸಲ್ ವೆಹಿಕಲ್, ಬೃಹತ್ ನಿರ್ಮಾಣ ಯಂತ್ರೋಪಕರಣ ಅಥವಾ ಅರ್ಥ್ ಮೂವಿಂಗ್ ಸಾಧನಗಳಿಗೆ ವಿಧಿಸಲಾಗುತ್ತಿದ್ದಂತ ಶುಲ್ಕವನ್ನು ರೂ.320 ರಿಂದ 485ಕ್ಕೆ ಹೆಚ್ಚಿಸಲಾಗಿದೆ.
ಇನ್ನೂ ಕಾರು, ವ್ಯಾನ್, ಜೀಪ್, ಎಲ್‌ಎಂವಿ ವಾಹನಗಳಿಗೆ ತಿಂಗಳಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ದರ ರೂ.1720 ಮಾಡಿದ್ದರೇ, ಲಘು ವಾಣಿಜ್ಯ ವಾಹನ ಅಂದರೇ ಎಲ್‌ಎಂವಿಗಳಿಗೆ ರೂ.3005 ಟೋಲ್ ಶುಲ್ಕ ನಿಗಧಿ ಪಡಿಸಲಾಗಿದೆ. ಟ್ರಕ್, ಬಸ್ ಗಳಿಗೆ ರೂ.6010, ಮಲ್ಟಿ ಆಕ್ಸಲ್ ವೆಹಿಕಲ್ ಗಳಿಗೆ ತಿಂಗಳಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ದರ ರೂ.9665 ನಿಗದಿ ಪಡಿಸಿದೆ.
ರಾಜ್ಯಾಧ್ಯಂತ ವಿವಿಧ ಟೋಲ್ ಗಳಲ್ಲಿ ಟೋಲ್ ದರ ಬಹುತೇಕ ಇದೇ ದರದಲ್ಲಿ ಇರಲಿದೆ. ಈ ದರಗಳು ಕಳೆದ ಕೆಲ ತಿಂಗಳ ಹಿಂದೆಯೇ ಹೆದ್ದಾರಿ ಪ್ರಾಧಿಕಾರದಿಂದ ಮಾಡಿದಂತ ಆದೇಶವಾಗಿದೆ. ಅಂತಹ ಆದೇಶವು ಇಂದಿನಿಂದ ಜಾರಿಗೊಂಡಿದೆ. ಹೀಗಾಗಿ ಇಂದಿನಿಂದ ಟೋಲ್ ದರ ಹೆಚ್ಚಳದ ಬಿಸಿ ವಾಹನ ಸವಾರರಿಗೆ, ಪ್ರಯಾಣಿಕರಿಗೆ ಮುಟ್ಟಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ