ನಾಗರಗಾಳಿ ಅರಣ್ಯ ಇಲಾಖೆ ಮಿಂಚಿನ ಕಾರ್ಯಾಚರಣೆ ಹಂದಿ ಬೇಟೆಗಾರರ ಬಂಧನ

ಖಾನಾಪುರ:

    ತಾಲೂಕಿನ ನಾಗರಗಾಳಿ ಅರಣ್ಯ ವಿಭಾಗದ ಸುವತ್ವಾಡಿಯಲ್ಲಿ ಹಂದಿ ಬೇಟೆಗೆಂದು ಬಾಂಬ್ ಇಟ್ಟಿರುವ ಬಗ್ಗೆ ನಾಗರಗಾಳಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶೋಧ ದಳಕ್ಕೆ ಮಾಹಿತಿ ಲಭಿಸಿದ್ದು, ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆಯ ಶೋಧ ತಂಡದ ಮುಖ್ಯಾಧಿಕಾರಿ ಕವಿತಾ ಇರನಟ್ಟಿ ತಿಳಿಸಿದ್ದಾರೆ.

   ನಾಗರಗಾಳಿ ವಿಭಾಗದ ಸುವತ್ವಾಡಿ ಅರಣ್ಯದಲ್ಲಿ ಹಂದಿಗಳನ್ನು ಬೇಟೆಯಾಡಲು ಬಾಂಬ್ ಇಟ್ಟಿರುವ ನಾಗರಗಾಳಿ
ಖಾನಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಮಗದುಂ ಅವರ ತಂಡಕ್ಕೆ ಮಾಹಿತಿ ಸಿಕ್ಕಿದ್ದು ಶಿವಾನಂದ ಮಗದುಂ ನೇತೃತ್ವದಲ್ಲಿ ನಾಗರಗಾಳಿ ಅರಣ್ಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಸುವತ್ವಾಡಿ ಅರಣ್ಯದಲ್ಲಿ ಶೋಧ ಕಾರ್ಯ ನಡೆಸಲಾಯಿತು.

   ಈ ವೇಳೆ ಅಮೋಲ್ ಪಿ ವಯಾ (ವಯಸ್ಸು 19) ಶಿವಮೊಗ್ಗ, ಹಕ್ಕಿ ಪಿಕ್ಕಿ ಜನಾಂಗದ ಯುವಕನನ್ನು ಬಂಧಿಸಲಾಗಿದ್ದು, ಆತನಿಂದ 67 ಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.ಕೂಲಂಕುಷವಾಗಿ ತನಿಖೆ ನಡೆಸಿದಾಗ ಸುವತ್ವಾಡಿಯ ಅನಿಲ್ ಮಾರುತಿ ಪಾಟೀಲ್ ಎಂಬಾತ ಭಾಗಿಯಾಗಿರುವುದು ಪತ್ತೆಯಾಗಿದೆ. ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಬಳಿಕ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.

   ಈ ಬಗ್ಗೆ ಅರಣ್ಯ ಇಲಾಖೆಯ ಶೋಧ ದಳದ ಅಧಿಕಾರಿ ಕವಿತಾ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಕೆಲ ಆದಿವಾಸಿಗಳು ತಾಲೂಕಿನಲ್ಲಿ ಖಾನಾಪುರ ಅರಣ್ಯದಲ್ಲಿ ಬಾಂಬ್ ಇಡುವ, ಹಂದಿ ಬೇಟೆಯಾಡುವ ಕೆಲಸ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಇದೆ. ಈ ಹಿಂದೆಯೂ ಶಿವಮೊಗ್ಗದಲ್ಲಿ ಕೆಲವರನ್ನು ಬಂಧಿಸಿ ಅವರಿಂದ ಅಪಾರ ಪ್ರಮಾಣದ ಬಾಂಬ್ ವಶಪಡಿಸಿಕೊಂಡ ಘಟನೆಗಳೂ ನಡೆದಿದ್ದವು. ಮಾಚಿಗಢ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಇದೇ ಬಾಂಬ್ ಸ್ಫೋಟಗೊಂಡು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಆದರೆ, ಶಿವಮೊಗ್ಗದ ಹಕ್ಕಿ ಪಕ್ಕದ ಬುಡಕಟ್ಟು ಜನಾಂಗದವರು ಬಾಂಬ್ ಇಟ್ಟು ಹಂದಿಗಳನ್ನು ಬೇಟೆಯಾಡುತ್ತಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಾಗರಗಾಳಿ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap