ವಾಷಿಂಗ್ಟನ್:
ಭಾರತ, ಚೀನಾ, ಜಪಾನ್ ಮತ್ತು ರಷ್ಯಾ ದೇಶಗಳು ವಲಸಿಗರನ್ನು ಸ್ವೀಕರಿಸಿಲ್ಲ. ಹೀಗಾಗಿ ಈ ದೇಶಗಳು ನಿರೀಕ್ಷಿತ ಆರ್ಥಿಕ ಪ್ರಗತಿ ಕಾಣುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಅಮೆರಿಕದ ಆರ್ಥಿಕ ಬೆಳವಣಿಗೆಗೆ ವಲಸಿಗರು ಕೂಡ ಒಂದು ಕಾರಣ.ನಾವು ವಲಸಿಗರನ್ನು ಸ್ವಾಗತಿಸುತ್ತೇವೆ. ಇದಕ್ಕಾಗಿ ನಮ್ಮ ಆರ್ಥಿಕ ಪ್ರಗತಿ ಏರಿಕೆ ಹಾದಿಯಲ್ಲಿದೆ’ ಎಂದರು.
“ಆರ್ಥಿಕ ಬೆಳವಣಿಗೆ ವಿಷಯದಲ್ಲಿ ಚೀನಾ, ಜಪಾನ್, ರಷ್ಯಾ ಮತ್ತು ಭಾರತ ಏಕೆ ತೊಂದರೆ ಅನುಭವಿಸುತ್ತಿದೆ? ಕಾರಣ ಈ ದೇಶಗಳಿಗೆ ವಲಸಿಗರು ಬೇಕಿಲ್ಲ. ಇದು ಈ ದೇಶಗಳ ಆರ್ಥಿಕ ಪ್ರಗತಿ ಮೇಲೆ ದುಷ್ಪರಿಣಾಮ ಬೀರಿದೆ. ವಲಸಿಗರು ದೇಶವನ್ನು ಬಲಿಷ್ಠಗೊಳಿಸುತ್ತಾರೆ’ ಎಂದು ಜೋ ಬೈಡೆನ್ ಅಭಿಪ್ರಾಯಪಟ್ಟಿದ್ದಾರೆ.