ತುಮಕೂರು ನಗರದಲ್ಲಿ ಆರೋಗ್ಯ – ಶಿಕ್ಷಣಕ್ಕೆ ವಿಶೇಷ ಒತ್ತು: ಶಾಸಕ

ತುಮಕೂರು

    ನಗರದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ, ಸ್ಟೇಡಿಯಂ ಸೇರಿ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ ತಿಂಗಳು ಮಾರ್ಚ್ 5 ರಂದು ಲೋಕಾರ್ಪಣೆಗೊಳಿಸುತ್ತಿದ್ದು, ನಮ್ಮ ಸರ್ಕಾರದಲ್ಲಿ ತುಮಕೂರು ನಗರಕ್ಕೆ ಸಂಬಂಧಿಸಿದಂತೆ ಆರೋಗ್ಯ ಶಿಕ್ಷಣಕ್ಕೆ ವಿಶೇಷ ಒತ್ತು ಕೊಡಲಾಗಿದೆ ಎಂದು ನಗರ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 5 ವರ್ಷಗಳ ಹಿಂದಿನ ತುಮಕೂರು ನಗರಕ್ಕೂ ಇಂದಿನ ತುಮಕೂರಿಗೂ ಅಜಗಜಾಂತರ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಸ್ಮಾರ್ಟ್ಸಿಟಿ, ಸರ್ಕಾರದ ವಿಶೇಷ ಅನುದಾನಡಿ ರಸ್ತೆ, ಶಿಕ್ಷಣ ಆರೋಗ್ಯ, ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ಮಾಡಲಾಗಿದೆ.

    ಪ್ರಮುಖವಾಗಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಟ್ರೋಮಾಕೇರ್ ಸೆಂಟರ್, ತಾಯಿಮಗು ಆಸ್ಪತ್ರೆ, ಕ್ಯಾನ್ಸರ್‌ಚಿಕಿತ್ಸಾಕೇಂದ್ರ ಸ್ಥಾಪಿಸಿದ್ದು, ಈ ಬಾರಿಯ ಬಜೆಟ್‌ನಲ್ಲಿ 100 ಬೆಡ್‌ಗಳ ಕ್ರಿಟಿಕಲ್ ಕೇರ್ ಸೆಂಟರ್ ಅನ್ನು ಸಿಎಂ ಮಂಜೂರು ಮಾಡಿದ್ದಾರೆ. ಜೊತೆಗೆ ನಗರಕ್ಕೆ 7 ನಮ್ಮ ಕ್ಲಿನಿಕ್‌ಗಳನ್ನು ಆರೋಗ್ಯ ಸಚಿವರು ನೀಡಿದ್ದು, ಪಕ್ಷಾತೀತವಾಗಿ ಬಡಜನರು ಹೆಚ್ಚಿರುವ ಕಡೆ ಈ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ ಎಂದರು.

90 ಕೋಟಿ ವಿಶೇಷ ಅನುದಾನ:

     ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಿಳಾ ಕಾಲೇಜಿಗೆ ಹೊಸಕಟ್ಟಡ. ಎಂಪ್ರೆಸ್ ಕಾಲೇಜಿಗೆ ಹೊಸ ಕೊಠಡಿ, ಸುಸಜ್ಜಿತ ಸಭಾಂಗಣ, ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆ ಕಟ್ಟಡ, ಶಾಲಾ ಆವರಣಗಳಲ್ಲೇ 20 ಹೊಸ ಅಂಗನವಾಡಿ ನಿರ್ಮಾಣ ಮಾಡಿದ್ದು, ಡಿಜಿಟಲ್ ಗ್ರಂಥಾಲಯವನ್ನು ಮಾದರಿಯಾಗಿ ನಿರ್ಮಿಸಲಾಗಿದೆ. ಬಸ್‌ ಸ್ಟ್ಯಾಂಡ್ ಕಾಮಗಾರಿ ಪ್ರಗತಿಯಲ್ಲಿದ್ದು, ಸ್ಮಾರ್ಟ್ಸಿಟಿ ಅನುದಾನದ ಹೊರತಾಗಿ ಯಡಿಯೂರಪ್ಪ ಹಾಗೂ ಬಸವರಾಜಬೊಮ್ಮಾಯಿ ಅವರ ಅಧಿಕಾರವಧಿಯಲ್ಲಿ 90 ಕೋಟಿ ವಿಶೇಷ ಅನುದಾನ ತಂದು ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಅಮಾನಿಕೆರೆ, ಮರಳೂರು ಕೆರೆಯಲ್ಲಿ ಕುಡಿಯುವ ನೀರಿನ ಮೀಸಲು ಜಲಸಂಗ್ರಹಗಾರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    54 ಕೋಟಿಗೂ ಅಧಿಕ ವೆಚ್ಚದಲ್ಲಿ ಸುಸಜ್ಜಿತ ಸ್ಟೇಡಿಯಂ ನಿರ್ಮಿಸಿದ್ದು, ಹೈಸ್ಕೂಲ್ ಮೈದಾನದಲ್ಲಿ ಮಿನಿ ಸ್ಫೋರ್ಟ್ಟ್ ಅರೇನಾವನ್ನು ನಿರ್ಮಿಸಿ ಕ್ರೀಡೆಗೆ ಹೆಚ್ಚಿನದಾಗಿ ಪ್ರೋತ್ಸಾಹಿಸಲಾಗಿದೆ. ಕ್ರೀಡಾಪಟುಗಳ ವಸತಿ ವ್ಯವಸ್ಥೆಗೂ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗಿನ ವಾಯುವಿಹಾರಿಗಳಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ಕ್ರೀಡಾಂಗಣದಲ್ಲಿ ಖಾಸಗೀಕರಣ ಮಾಡಲಾಗುತ್ತಿದೆಯೆಂಬ ಆರೋಪದಲ್ಲಿ ಹುರುಳಿಲ್ಲ. ಕ್ರೀಡೆಯಲ್ಲಿ ರಾಜಕೀಯ ಬೆರೆಸಲು ನನಗೆ ಇಷ್ಟವಿಲ್ಲ.

‌    ಕ್ರೀಡಾಕ್ಲಬ್‌ಗಳಿಗೂ ಸ್ಟೇಡಿಯಂನಲ್ಲಿ ಅವಕಾಶಸಿಗಲಿದೆ. ಈ ಬಗ್ಗೆ ಗೊಂದಲ, ಆತಂಕಬೇಡ. ನಿರ್ವಹಣೆ ದೃಷ್ಟಿಯಿಂದ ಕ್ರೀಡಾಂಗಣದ ಕೆಲವು ಭಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ನೀಡಲಾಗುತ್ತದೆ. ಇದು ನನ್ನ ನಿರ್ಧಾರವಲ್ಲ. ಕ್ರೀಡಾ ಇಲಾಖೆ ತೆಗೆದುಕೊಂಡ ನಿರ್ಧಾರ ಎಂದು ಸಮಾಜಾಯಿಷಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap