ಗಡಿನಾಡಿನಲ್ಲಿ ಜೆಡಿಎಸ್ ಪಕ್ಷ ಸದೃಢ

ಪಾವಗಡ:


ಅಂದು ದೇಶಕ್ಕೆ ಅಂಬೇಡ್ಕರ್ ಸಂವಿಧಾನವನ್ನು ನೀಡಿದರೆ ಪ್ರಧಾನಿ ಎಚ್.ಡಿ. ದೇವೇಗೌಡರು ಸರ್ವರಿಗೂ ಮೀಸಲಾತಿಯನ್ನು ನೀಡಿದ್ದಾರೆಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ ತಿಳಿಸಿದರು.

ಅವರು ಪಟ್ಟಣದ ಎಸ್‍ಎಸ್‍ಕೆ ಸಮುದಾಯ ಭವನದಲ್ಲಿ ಜಿಲ್ಲಾ ಜೆಡಿಎಸ್ ಸಮಿತಿ ವತಿಯಿಂದ ವಿಧಾನ ಪರಿಷತ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಗಡಿನಾಡಿನಲ್ಲಿ ಪ್ರಾದೇಶಿಕ ಜೆಡಿಎಸ್ ಪಕ್ಷ ಸದೃಢವಾಗಿದ್ದು, ಜಿಲ್ಲೆಯಲ್ಲಿ ಪುರಸಭೆ, ಗ್ರಾಪಂ, ತಾಪಂ, ಜಿಪಂ ಸದಸ್ಯರು ಸೇರಿದಂತೆ 5300 ಮತಗಳಿವೆ. ಅದರಲ್ಲಿ ಜೆಡಿಎಸ್ ಪಕ್ಷದ್ದೆ 2200 ಮತಗಳಿವೆ. ಆದರೆ 3000ಕ್ಕೂ ಹೆಚ್ಚು ಮತಗಳು ಜೆಡಿಎಸ್ ಪಾಲಾಗಿ, ಅನಿಲ್‍ಕುಮಾರ್‍ರವರು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತಾರೆ ಎಂದರು.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಕರ್ನಾಟಕ್ಕೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನಿವಾರ್ಯ ಎಂದು ಜನತೆ ತೀರ್ಮಾನಿಸಿದ್ದು, ಉಪಚುನಾವಣೆ ಗಳು ಲೆಕ್ಕಕ್ಕಿಲ್ಲ. ವಿಧಾನ ಪರಿಷತ್ ಚುನಾವಣೆಯೆ ಮುಂದಿನ ತಾಪಂ, ಜಿಪಂ ಚುನಾವಣೆಗೆ ದಿಕ್ಸ್ಸೂಚಿಯಾಗಿದ್ದು, ತಿಮ್ಮರಾಯಪ್ಪ ಶಾಸಕರಾಗುವುದೂ ಕೂಡ ಅಷ್ಟೆ ಖಚಿತ ಎಂದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಅನಿಲ್‍ಕುಮಾರ್ ತಂದೆಯವರು ಜೆಡಿಎಸ್ ಸಿದ್ದಾಂತದಲ್ಲಿ ಬೆಳೆದವರು. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಕಲ್ಪತರು ಜಿಲ್ಲೆಯಲ್ಲಿ ಜೆಡಿಎಸ್ ವಿಧಾನ ಪರಿಷತ್ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಲ್ಲಿ ಪಕ್ಷದ ಗ್ರಾಪಂ, ಜಿಪಂ, ತಾಪಂ ಸದಸ್ಯರು ಗೆಲ್ಲಿಸಲಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ಕೂಡ ಹೆಚ್ಚು ಶ್ರಮಿಸಬೇಕೆಂದರು.
ರಾಜ್ಯದಲ್ಲಿ ಸರಕಾರ ಸತ್ತೆ ಹೋಗಿದೆ, ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ತಾಲ್ಲೂಕುವಾರು ಕೂಡ ಶಾಸಕರಿಗೆ ಅನುದಾನ ನೀಡದ ಹಿನ್ನೆಲೆಯಲ್ಲಿ ಸರಕಾರ ಹಳಿ ತಪ್ಪಿರುವುದನ್ನು ನಾವು ಕಾಣಬಹುದು. ಇದನ್ನು ಸರಿದಾರಿಗೆ ತರಬೇಕಾದರೆ ಜೆಡಿಎಸ್ ಬೆಂಬಲಿಸಿದಾಗ ಮಾತ್ರ ಸಾಧ್ಯವೆಂದರು.

ವಿಧಾನ ಪರಿಷತ್ ಅಭ್ಯರ್ಥಿ ಅನಿಲ್‍ಕುಮಾರ್ ಮಾತನಾಡಿ, ನಾಗಲಮಡಿಕೆಯ ಅಂತ್ಯ ಸುಬ್ರಹ್ಮಣ್ಯ ಸ್ವಾಮಿಯ ಮೇಲೆ ಆಣೆ ನನ್ನ ಉಸಿರಿರುವ ತನಕ ಪ್ರಾದೇಶಿಕ ಪಕ್ಷ ಜೆಡಿಎಸ್ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುವೆ ಎಂದ ಅವರು, ಜೆಡಿಎಸ್ ಪಕ್ಷ ಮುಖಂಡರನ್ನು ತಯಾರು ಮಾಡುವ ಫ್ಯಾಕ್ಟರಿ ಇದ್ದಂತೆ. ಪ್ರತಿಯೊಬ್ಬರು ಜೆಡಿಎಸ್‍ನಲ್ಲಿ ಸದೃಢÀವಾಗಿ ಸ್ಥಿರತೆಯನ್ನು ಕಾಪಾಡಿ ಕೊಂಡು ನಾಯಕರಾಗಿ ಬೆಳೆದು, ನಂತರ ಪಕ್ಷಕ್ಕೆ ಕೈಕೊಡುವ ಕೆಲಸ ಮಾಡುತ್ತಿದ್ದು, ನನ್ನ ಜೀವನದ ಕೊನೆಯ ತನಕ ಜೆಡಿಎಸ್ ನನ್ನ ಉಸಿರಾಗಿರುತ್ತದೆ. ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ನನಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ಆಯ್ಕೆ ಮಾಡುವ ನಂಬಿಕೆ ನನಗೆ ನಿಮ್ಮ ಮೇಲಿದೆ. ಆಯ್ಕೆ ಮಾಡಿದರೆ ಗಡಿನಾಡಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ರಾಜ್ಯ ಜೆಡಿಎಸ್ ಉಪಾಧ್ಯಕ್ಷ ತಿಮ್ಮಾರೆಡ್ಡಿ, ತಾ.ಅಧ್ಯಕ್ಷ ಬಲರಾಮ ರೆಡ್ಡಿ, ಪುರಸಭಾ ಸದಸ್ಯರುಗಳಾದ ಗೊರ್ತಿನಾಗರಾಜು, ಸುಜಾತ ಶಾಂತಕುಮಾರ್, ವಕ್ತಾರ ಅಕ್ಕಲಪ್ಪ ನಾಯ್ಡ್, ಪುರಸಭಾ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಯೂನಿಸ್, ಮುಖಂಡರಾದ ಕಾವಲಗೆರೆ ಮಣಿ, ರಾಮಾಂಜಿ, ಪುರಸಭಾ ಮಾಜಿ ಸದಸ್ಯರುಗಳಾದ ಮನುಮಹೇಶ್, ಗೋವಿಂದಪ್ಪ, ಮಹಿಳಾ ಮುಖಂಡರಾದ ಅಂಬಿಕಾ ರಮೇಶ್, ಸಾಯಿ ಸುಮನ, ಅನ್ನಪೂರ್ಣಮ್ಮ ಉಪಸ್ಥಿತರಿದ್ದರು.

ವಿಧಾನ ಪರಿಷತ್‍ನ ಜೆಡಿಎಸ್ ಪಕ್ಷದ ಅಭ್ಯರ್ಥಿ ಮತ ಯಾಚನೆ ಮಾಡಿ ಮಾತನಾಡುತ್ತಿರುವುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link