ಬೆಂಗಳೂರು:
ಸರ್ಕಾರದ ಕಾಶಿ ಯಾತ್ರೆ ಯೋಜನೆಯಡಿ ಜುಲೈನಿಂದ ಕರ್ನಾಟಕದ ಯಾತ್ರಾರ್ಥಿಗಳನ್ನು ಕಾಶಿ ದರ್ಶನಕ್ಕೆ ಕಳುಹಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗುರುವಾರ ಹೇಳಿದರು.
ಟಿಕೆಟ್ ಕಾಯ್ದಿರಿಸಿದ್ಜ ಪ್ರತಿ ಯಾತ್ರಿಕರಿಗೆ ಇಲಾಖೆಯು 15,000 ರೂ. ಹಿಂದಿರುಗಿಸಿದೆ. ಯಾತ್ರೆಗೆ ಒಟ್ಟು ರೂ.20,000 ವೆಚ್ಚವಾಗಲಿದ್ದು, ಸರ್ಕಾರ ಪ್ರತಿ ಯಾತ್ರಾರ್ಥಿಗೆ ರೂ.5,000 ನೀಡುತ್ತಿದೆ. ಪ್ರವಾಸ ಕೈಗೊಳ್ಳುವ ಇಚ್ಛೆಯುಳ್ಳ ಯಾತ್ರಾರ್ಥಿಗಳು IRCTC ವೆಬ್’ಸೈಟ್’ಗೆ ಭೇಟಿ ನೀಡಿ ರೂ.15,000 ಪಾವತಿಸಿ ಟಿಕೆಟ್ ಬುಕ್ ಮಾಡಬಹುದು. ಮೆಜೆಸ್ಟಿಕ್ ನಿಂದ ರೈಲು ಹೊರಡಲಿದೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಮುಳಬಾಗಿಲು ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಎಸ್.ವಿಶ್ವನಾಥ ದೀಕ್ಷಿತ್ ಅವರು ಕಾಂಗ್ರೆಸ್ ಸರ್ಕಾರವನ್ನು ಕೊಂಡಾಡಿದ್ದಾರೆ. ಸಾಮರ್ಥ್ಯವಿಲ್ಲದ ಸಾಕಷ್ಟು ಬಡವರಿದ್ದಾರೆ. ಯೋಜನೆ ಮೂಲಕ ಅವರು ಕಾಶಿ ಯಾತ್ರೆ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.