ಕಿಡುಕನಹಳ್ಳಿ ರಸ್ತೆ ಜಲಾವೃತವಾದರೂ ಸ್ಪಂದಿಸುವವರಿಲ್ಲ

ಹುಳಿಯಾರು:

ಪಂಚನಹಳ್ಳಿಗೆ ತೆರಳುವ ರಸ್ತೆಯು ಜಲಾವೃತವಾದರೂ ಇದುವರೆಗೆ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಯೂ ಸ್ಪಂಧಿಸಿಲ್ಲ ಎಂದು ಹಂದನಕೆರೆ ಹೋಬಳಿಯ ಕಿಡುಕನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಕಿಡುಕನಹಳ್ಳಿ ಗ್ರಾಮಕ್ಕೆ ತಾಲ್ಲೂಕು ಕೇಂದ್ರ ಚಿ.ನಾ.ಹಳ್ಳಿ 40 ಕಿ.ಮೀ. ದೂರವಿದೆ. ಹೋಬಳಿ ಕೇಂದ್ರ ಹಂದನಕೆರೆಗೆ 10-15 ಕಿ.ಮೀ. ಅಂತರವಿದೆ. ಪ್ರಮುಖ ವಾಣಿಜ್ಯ ಕೇಂದ್ರವಾದ ಹುಳಿಯಾರು ಸಹ 25 ಕಿ.ಮೀ. ದೂರವಿದೆ. ಹಾಗಾಗಿ ಇಲ್ಲಿನ ನಿವಾಸಿಗಳು ಅಂಗಡಿ, ಆಸ್ಪತ್ರೆ ಸೇರಿದಂತೆ ಅನೇಕ ಸೌಕರ್ಯಗಳಿಗೆ ಕೇವಲ 6 ಕಿ.ಮೀ ದೂರದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯನ್ನು ಅವಲಂಭಿಸಿದ್ದಾರೆ.

ಆದರೆ ಕಿಡುಕನಹಳ್ಳಿಯಿಂದ ಪಂಚನಹಳ್ಳಿಗೆ ಸಂಪರ್ಕ ಕಲ್ಪಿಸುವ ಸದರಿ ರಸ್ತೆಯು ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೆರೆಯ ನೀರು ತುಂಬಿ ಹರಿದು ರಸ್ತೆ ಜಲಾವೃತವಾಗಿದೆ. ಹೀಗೆ ಜಲಾವೃತವಾಗಿ 5-6 ತಿಂಗಳೆ ಕಳೆದಿದ್ದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪರಿಣಾಮ ಈ ರಸ್ತೆಯಲ್ಲಿ ಓಡಾಡಲಾಗದೆ 4-5 ಕೀ.ಮೀ ಸುತ್ತಿ ಬಳಸಿ ಪಂಚನಹಳ್ಳಿಗೆ ಓಡಾಡುವ ಅನಿವಾರ್ಯ ಕರ್ಮ ಸೃಷ್ಠಿಯಾಗಿದೆ. ಇದರಿಂದ ಆರ್ಥಿಕ ನಷ್ಟದ ಜೊತೆ ಸಮಯವೂ ಸಹ ವ್ಯರ್ಥವಾಗುತ್ತಿದೆ. ಈ ರಸ್ತೆಗೆ ಸೇತುವೆ ನಿರ್ಮಿಸುವುದು ಶಾಶ್ವತ ಪರಿಹಾರವಾಗಿದೆ. ಆದರೂ ತುರ್ತಾಗಿ ರಸ್ತೆ ಕೆಳಗೆ ಸಿಸಿ ಪೈಪ್‍ಗಳನ್ನು ಅಳವಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರೆ ಜನರು ನಿರಾತಂಕವಾಗಿ ರಸ್ತೆ ಮೇಲೆ ಓಡಾಡಬಹುದಾಗಿದೆ ಎಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.

    ಪಂಚನಹಳ್ಳಿ ರಸ್ತೆಯಲ್ಲಿ ಓಡಾಡುವಂತೆ ಮಾಡಿ :

ಗ್ರಾಮದ ಜನರಿಗೆ ಅನುಕೂಲ ಮಾಡಬೇಕೆಂದಿದ್ದರೆ ಮೊದಲು ಜಲಾವೃತವಾಗಿರುವ ಪಂಚನಹಳ್ಳಿ ರಸ್ತೆ ಸರಿಪಡಿಸಿ. ನಾವೆಲ್ಲರೂ ಪಡಿತರ ತರಲು, ಆಸ್ಪತ್ರೆಗೆ ಹೋಗಲು ಈ ರಸ್ತೆಯನ್ನೆ ಅವಲಂಭಿಸಿದ್ದೇವೆ. ರಸ್ತೆಯಲ್ಲಿ ನೀರು ನಿಂತು ಓಡಾಡಲು ಆಗದಿರುವುದರಿಂದ 4-5 ಕಿ.ಮೀ ಸುತ್ತಿ ಬಳಸಿ ಓಡಾಡುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ಈ ಸಮಸ್ಯೆ ತಂದಿದ್ದೇವೆ. ಆದರೇ ಪ್ರಯೋಜನವಾಗಿಲ್ಲ.

-ಕೆ.ಎನ್.ರವೀಶ್, ಗ್ರಾಮಸ್ಥರು

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap