ಚಂಡೀಗಢ:
2018 ರ ಜಿರಾಕ್‌ಪುರ ಅತ್ಯಾಚಾರ ಪ್ರಕರಣದಲ್ಲಿ ಸ್ವಘೋಷಿತ ಕ್ರಿಶ್ಚಿಯನ್ ಪಾದ್ರಿ ಬಜೀಂದರ್ ಸಿಂಗ್‌ಗೆ 2018 ರ ಜಿರಾಕ್‌ಪುರ ಅತ್ಯಾಚಾರ ಪ್ರಕರಣದಲ್ಲಿ ಸ್ವಘೋಷಿತ ಕ್ರಿಶ್ಚಿಯನ್ ಪಾದ್ರಿ ಬಜೀಂದರ್ ಸಿಂಗ್ ದೋಷಿ ಎಂದು ಮಾ. 28 ರಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದೀಗ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ.ಸಂತ್ರಸ್ತೆಯಿಂದ ದೂರು ಸ್ವೀಕರಿಸಿದ ನಂತರ, ಬಜೀಂದರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 76, 420, 354, 294, 323, 506, 148, ಮತ್ತು 149 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಜಿಂದರ್ ಸಿಂಗ್ ಯೇಶು ಯೇಸು ಪ್ರವಾದಿ’ ಎಂದೇ ಜನಪ್ರಿಯನಾಗಿದ್ದ.
ಈ ಕುರಿತು ಮಾತನಾಡಿರುವ ಸಂತ್ರಸ್ತೆ ಪರ ವಕೀಲ ಒಬ್ಬ ಆಧ್ಯಾತ್ಮಿಕ ನಾಯಕ ಈ ರೀತಿ ನಡೆದುಕೊಂಡಿರುವುದು ಅಕ್ಷಮ್ಯ ಅಪರಾಧ. ಜನರು ಅವರ ಮೇಲೆ ನಂಭೀಖೇ ಇಟ್ಟು ಅಲ್ಲಗೆ ಬರುತ್ತಾರೆ. ಆದರೆ ಇವರು ಇಂತಹ ಹೇಯ ಕೃತ್ಯವನ್ನೆಸಗುತ್ತಾರೆ ಎಂದು ಹೇಳಿದ್ದಾರೆ. ನಮಗೆ ತೀರ್ಪು ಖುಷಿಯನ್ನು ತಂದಿದೆ. ಜನರು ಅಪರಾಧ ಮಾಡುವ ಮೊದಲು ಕಾನೂನನ್ನು ನೆನಪಿಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 28 ರಂದು, 22 ವರ್ಷದ ಮಹಿಳೆಯ ದೂರಿನ ಆಧಾರದ ಮೇಲೆ ಸ್ವಯಂ ಘೋಷಿತ ಪಾದ್ರಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು. ತನ್ನ ದೂರಿನಲ್ಲಿ, ಮಹಿಳೆ ತನ್ನ ಹೆತ್ತವರೊಂದಿಗೆ ಅಕ್ಟೋಬರ್ 2017 ರಲ್ಲಿ ಯೇಶು ಯೇಸು ಪ್ರವಾದಿ ಚರ್ಚ್‌ಗೆ ತೆರಳಿದ್ದಳು. ನಂತರ ಪಾದ್ರಿ ಆಕೆಯ ನಂಬರ್ ತೆಗೆದುಕೊಂಡು ಆಕೆಗೆ ದಿನನಿತ್ಯ ಸಂದೇಶ ಕಳುಹಿಸುತ್ತಿದ್ದ. ಸಿಂಗ್‌ಗೆ ಹೆದರಿ ತನ್ನ ಪೋಷಕರಿಗೆ ಅದರ ಬಗ್ಗೆ ಹೇಳಲಿಲ್ಲ ಎಂದು ಆಕೆ ಆರೋಪಿಸಿದ್ದಾಳೆ. 2022 ರಿಂದ, ಪಾದ್ರಿ ಭಾನುವಾರಗಳಂದು ಚರ್ಚ್‌ನ ಕ್ಯಾಬಿನ್‌ನಲ್ಲಿ ಅವಳನ್ನು ಒಂಟಿಯಾಗಿ ಇರಿಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಪಾದ್ರಿ ಅವಳನ್ನು ತಬ್ಬಿಕೊಂಡು ಅನುಚಿತವಾಗಿ ಸ್ಪರ್ಶಿಸುತ್ತಿದ್ದನು. ತನ್ನ ವಿರುದ್ಧ ದೂರು ದಾಖಲಿಸಿದರೆ ತನ್ನನ್ನು ಮತ್ತು ತನ್ನ ಕುಟುಂಬ ಸದಸ್ಯರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಳು. ಮೊಹಾಲಿಯ ನಿವಾಸದಲ್ಲಿ ಪಾದ್ರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ಅಪರಾಧದ ವೀಡಿಯೊವನ್ನು ಸಹ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಳು.
