ನವದೆಹಲಿ:
ಏಷ್ಯನ್ ಗೇಮ್ಸ್ನಲ್ಲಿ ಭಾರತದ ದಾಖಲೆಯ 634 ಕ್ರೀಡಾಪಟುಗಳ ತಂಡ ಭಾಗವಹಿಸಲಿದೆ. ಈ ಜಂಬೋ ತಂಡದ ಸ್ಪರ್ಧೆಗೆ ಕ್ರೀಡಾ ಸಚಿವಾಲಯ ಶುಕ್ರವಾರ ಹಸಿರು ನಿಶಾನೆ ತೋರಿದೆ. ಕಳೆದ 2018ರ ಜಕಾರ್ತ ಏಷ್ಯಾಡ್ನಲ್ಲಿ 572 ಕ್ರೀಡಾಪಟುಗಳು ಭಾಗವಹಿಸಿದ್ದು ಭಾರತದ ಹಿಂದಿನ ದಾಖಲೆ ಎನಿಸಿತ್ತು.
ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಏಷ್ಯಾಡ್ಗೆ ಒಟ್ಟು 850 ಕ್ರೀಡಾಪಟುಗಳ ಹೆಸರು ಶಿಾರಸು ಮಾಡಿತ್ತು. ಈ ಪೈಕಿ 278 ಕ್ರೀಡಾಪಟುಗಳನ್ನು ಕೈಬಿಡಲಾಗಿದೆ. ಏಷ್ಯಾಡ್ ಚೀನಾದ ಹಾಂಗ್ರೆೌನಲ್ಲಿ ಸೆಪ್ಟೆಂಬರ್ 23ರಿಂದ ನಡೆಯಲಿದೆ.
ಭಾರತದ ಕ್ರೀಡಾಪಟುಗಳು ಒಟ್ಟು 38 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದು, ಈ ಪೈಕಿ ಅಥ್ಲೆಟಿಕ್ಸ್ನಲ್ಲಿ ಗರಿಷ್ಠ 65 ಕ್ರೀಡಾಪಟುಗಳು (34 ಪುರುಷ, 31 ಮಹಿಳೆಯರು) ಭಾಗವಹಿಸಲಿದ್ದಾರೆ. ಪುರುಷ&ಮಹಿಳಾ ುಟ್ಬಾಲ್ ತಂಡದಿಂದ ಒಟ್ಟು 44 ಆಟಗಾರರು ಭಾಗವಹಿಸಲಿದ್ದಾರೆ.
ಹಾಕಿಯಲ್ಲಿ ಪುರುಷ&ಮಹಿಳಾ ವಿಭಾಗದಿಂದ ಒಟ್ಟು 36 ಆಟಗಾರರು ತೆರಳಲಿದ್ದಾರೆ. ಪುರುಷ&ಮಹಿಳಾ ಕ್ರಿಕೆಟ್ನಲ್ಲಿ ಒಟ್ಟು 30 ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಶೂಟಿಂಗ್ ತಂಡದಲ್ಲೂ 30 ಕ್ರೀಡಾಪಟುಗಳಿದ್ದಾರೆ. ಪುರುಷರ ವೇಟ್ಲಿಫ್ಟಿಂಗ್, ಜಿಮ್ನಾಸ್ಟಿಕ್ಸ್, ಹ್ಯಾಂಡ್ಬಾಲ್ ಮತ್ತು ರಗ್ಬಿಯಲ್ಲಿ ಯಾರಿಗೂ ಸ್ಪರ್ಧೆ ಅವಕಾಶ ಕಲ್ಪಿಸಿಲ್ಲ. ವೇಟ್ಲಿಫ್ಟಿಂಗ್ನಲ್ಲಿ ಮಹಿಳೆಯರು ಮಾತ್ರ ಸ್ಪರ್ಧಿಸಲಿದ್ದಾರೆ.
ಆಯ್ಕೆ ಟ್ರಯಲ್ಸ್ ವಿನಾಯಿತಿಯೊಂದಿಗೆ ಏಷ್ಯಾಡ್ಗೆ ಆಯ್ಕೆಯಾಗಿದ್ದ ಕುಸ್ತಿಪಟು ಭಜರಂಗ್ ಪೂನಿಯಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಆದರೆ ಅವರು ಕೂಟದಿಂದ ಹಿಂದೆ ಸರಿಯುವ ಸಾಧ್ಯತೆ ಇನ್ನೂ ಇದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ