ಭೂ ಕಬಳಿಕೆ ಪ್ರಕರಣಗಳಿಗೆ ಸಿಗದ ತಾರ್ಕಿಕ ಅಂತ್ಯ, ಸರ್ಕಾರ ನೀಡಿದ್ದ ಭರವಸೆಗಳೆ ಮುಕ್ತಾಯ

ಬೆಂಗಳೂರು:

                                                ವಿಶೇಷ ವರದಿ 

ಬೆಂಗಳೂರು ನಗರ ಜಿಲ್ಲೆ, ರಾಮನಗರ, ಹೊಸಕೋಟೆ ಮತ್ತು ಹೊರಭಾಗಗಳಲ್ಲಿ ಸಾವಿರಾರು ಕೋಟಿ ರು. ಬೆಲೆ ಬಾಳುವ ಕಂದಾಯ ಭೂಮಿ ಕಬಳಿಕೆ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯು ಇನ್ನೂ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು 21 ವರ್ಷಗಳ ಹಿಂದೆ ಸರ್ಕಾರವು ನೀಡಿದ್ದ ಭರವಸೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಆದರೂ ವಿಧಾನಮಂಡಲದ ಸರ್ಕಾರಿ ಭರವಸೆಗಳ ಸಮಿತಿಯು ಈ ಎಲ್ಲಾ ಭರವಸೆಗಳನ್ನು ಮುಕ್ತಾಯಗೊಳಿಸಿದೆ.

ಕಂದಾಯ ಭೂಮಿ ಕಬಳಿಕೆ ಪ್ರಕರಣಗಳ ಸಂಬಂಧ ವಿ. ಸೋಮಣ್ಣ, ಆರಗ ಜ್ಞಾನೇಂದ್ರ, ಎಂಟಿಬಿ ನಾಗರಾಜ್ ಮತ್ತು ಆರ್.ರೋಶನ್ ಬೇಗ್ ಅವರು 21 ವರ್ಷಗಳ ಹಿಂದೆ (1998, 2002, 2003 ಮತ್ತು 2005ರಲ್ಲಿ ) ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು.

ಮುಸ್ಲಿಮರು ಆರ್ಥಿಕ ಬಹಿಷ್ಕಾರ ಹಾಕಿದರೆ ಹಿಂದೂಗಳಿಗೇ ತೊಂದರೆ; ಉಡುಪಿ ಮುಸ್ಲಿಂ ಮುಖಂಡರು

ಈ ಕುರಿತು ಸರ್ಕಾರಿ ಭರವಸೆಗಳ ಸಮಿತಿಯು ಅಂದಿನಿಂದಲೂ ಕಾಯ್ದಿರಿಸುತ್ತಿತ್ತು. ಆದರೀಗ ಈ ಎಲ್ಲಾ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ನೀಡಿರುವ ಲಿಖಿತ ಮತ್ತು ಮೌಖಿಕ ಹೇಳಿಕೆಯನ್ನು ಆಧರಿಸಿ ಉಡುಪಿ ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆಯಲ್ಲಿರುವ ಸರ್ಕಾರಿ ಭರವಸೆಗಳ ಸಮಿತಿಯು ಈ ಎಲ್ಲಾ ಭರವಸೆಗಳನ್ನೂ ಮುಕ್ತಾಯಗೊಳಿಸಿದೆ. ಈ ಕುರಿತು 2022ರ ಮಾರ್ಚ್ 21ರಂದು ನಡೆದ ಅಧಿವೇಶನದಲ್ಲಿ ಸರ್ಕಾರಿ ಭರವಸೆಗಳ ಸಮಿತಿಯ ಹನ್ನೆರಡನೇ ವರದಿಯನ್ನು ಮಂಡಿಸಿದೆ. ಈ ವರದಿಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.

ಆದರೆ ವಾಸ್ತವದಲ್ಲಿ ಕಂದಾಯ ಭೂಮಿ ಕಬಳಿಕೆ ಪ್ರಕರಣಗಳ ಕುರಿತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನೇನೂ ಕೈಗೊಂಡಿಲ್ಲ. ಅಲ್ಲದೆ ಕಬಳಿಕೆ ಅಗಿರುವ ಭೂಮಿಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರದ ವಶಕ್ಕೆ ಪಡೆದಿಲ್ಲ. ಆದರೂ ಅಧಿಕಾರಿಗಳು ನೀಡಿದ್ದ ಲಿಖಿತ ವಿವರಣೆಯನ್ನೇ ಆಧಾರವಾಗಿಟ್ಟುಕೊಂಡು ಎಲ್ಲಾ ಭರವಸೆಗಳನ್ನೂ ಮುಕ್ತಾಯಗೊಳಿಸಿರುವುದು ಅಚ್ಚರಿ ಮೂಡಿಸಿದೆ.

ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ “ಕ್ಯುಆರ್‌ ಕೋಡ್‌’!

ಬೆಂಗಳೂರು ನಗರದ ಸುತ್ತಮುತ್ತ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಜಮೀನನ್ನು ಅನಧಿಕೃತವಾಗಿ ಕಬಳಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಇದ್ದ 1,22,918 ಎಕರೆ ಸರ್ಕಾರಿ ಜಮೀನಿನ ಪೈಕಿ 33, 877 ಎಕರೆ ಜಮೀನು ಒತ್ತುವರಿಯಾಗಿತ್ತು. ಈ ಕುರಿತು ಎ ಟಿ ರಾಮಸ್ವಾಮಿ ಅಧ್ಯಕ್ಷತೆಯ ಜಂಟಿ ಸದನ ಸಮಿತಿ ವರದಿ ನೀಡಿತ್ತು.

ವರದಿ ನೀಡಿದ ನಂತರ ಒತ್ತುವರಿ ತೆರವುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದ ಸರ್ಕಾರವು 2021ರ ಜೂನ್ ಅಂತ್ಯಕ್ಕೆ 16, 193.25 ಎಕರೆ ಜಮೀನನ್ನಷ್ಟೇ ಒತ್ತುವರಿಯಿಂದ ತೆರವುಗೊಳಿಸಿದೆ. ಇನ್ನೂ 17, 684 ಎಕರೆಯನ್ನು ಒತ್ತುವರಿಯಿಂದ ತೆರವುಗೊಳಿಸಲು ಬಾಕಿ ಇದೆ ಎಂಬುದು ಭರವಸೆ ಸಮಿತಿಯು ನೀಡಿರುವ 12ನೇ ವರದಿಯಿಂದ ತಿಳಿದು ಬಂದಿದೆ.

ಸರ್ಕಾರಿ ಜಮೀನುಗಳ ತೆರವಿಗಾಗಿ ರಾಜ್ಯ ಸರ್ಕಾರವು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ರಚಿಸಿದೆ. ಭೂ ಒತ್ತುವರಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಲನ್ನು ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆಯೇ ವಿನಃ ಭೂ ಕಬಳಿಕೆ ಅವಧಿಯಲ್ಲಿ ಕರ್ತವ್ಯಲೋಪವೆಸಗಿದ್ದ ಐಎಎಸ್, ಕೆಎಎಸ್ ಸೇರಿದಂತೆ ಇನ್ನಿತರೆ ವೃಂದದ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಹೀಗಾಗಿ ಭರವಸೆ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೂ ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆಯ ಸರ್ಕಾರಿ ಭರವಸೆಗಳ ಸಮಿತಿಯು ಹಿಂದಿನ ಭರವಸೆಗಳನ್ನು ಮುಕ್ತಾಯಗೊಳಿಸಿದೆ.

ಮದುವೆ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗಲ್ಲ; ಹೈಕೋರ್ಟ್ ಮಹತ್ವದ ಆದೇಶ

ಶೇ. 50ರಷ್ಟು  ಭೂ ಒತ್ತುವರಿ ತೆರವು 

‘ಖಾಸಗಿ ಬಡಾವಣೆ ಮಾಡಲು ಭೂ ಒತ್ತುವರಿಯಾಗಿರುವುದು ಅಥವಾ ಅನಧಿಕೃತ ಮಳಿಗೆ ತೆರೆಯಲಾಗಿದ್ದರೆ ಅಂತಹವುಗಳನ್ನು ನಿರ್ದಾಕ್ಷ್ಯಿಣ್ಯವಾಗಿ ತೆರವು ಮಾಡಲಾಗುವುದು. ಶೇ. 50ರಷ್ಟು ಅಕ್ರಮ ಭೂ ಒತ್ತುವರಿ ತೆರವು ಮಾಡಲಾಗಿದೆಯೆಂದು ಇಲಾಖಾಧಿಕಾರಿಗಳು ಸಮಿತಿಗೆ ಲಿಖಿತ ಮತ್ತು ಮೌಖಿಕವಾಗಿ ತಿಳಿಸಿದ್ದನ್ನು ಸಮಿತಿಯು ಚರ್ಚಿಸಿದೆ. ಬಾಕಿ ಇರುವ ಅಕ್ರಮ ಭೂ ಒತ್ತುವರಿಯನ್ನು ಕಾಲಮಿತಿಯೊಳಗೆ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿ ಈ ಎಲ್ಲಾ ಭರವಸೆಗಳನ್ನು 2021ರ ಸೆ.9ರ 2ರಂದು ಮುಕ್ತಾಯಗೊಳಿಸಿತು,’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೂಲ ದಾಖಲೆಗಳಿಲ್ಲದೆಯೇ ಜೆರಾಕ್ಸ್ ಪ್ರತಿ ಆಧಾರದ ಮೇಲೆ ಹಕ್ಕು ದಾಖಲೆ ಮಾಡಿದ್ದ ಪ್ರಕರಣಗಳನ್ನು ಹೊರಗೆಳೆದಿದ್ದ ಆರ್ ಅಶೋಕ್, ನಕಲಿ ದಾಖಲೆಗಳ ಆಧರಿಸಿಯೇ ಜಾಲ ಹೋಬಳಿಯ 15 ಎಕರೆ ಜಮೀನು ಪರಭಾರೆ ಆಗಿದ್ದನ್ನು ಬಯಲು ಮಾಡಿದ್ದರು.

ರಾಮನಗರ ತಾಲ್ಲೂಕು ಬಿಡದಿ ಹೋಬಳಿಯಲ್ಲಿ ಖಾಸಗಿ ಸಂಸ್ಥೆಗಳು ಸರ್ಕಾರಕ್ಕೆ ಮೋಸ ಮಾಡಿ 28 ಎಕರೆ 34 ಗುಂಟೆ ವಿಸ್ತೀರ್ಣದ ಜಮೀನು ವಶಪಡಿಸಿಕೊಂಡಿದ್ದ ಪ್ರಕರಣಗಳ ಬಗ್ಗೆ ಮತ್ತೊಬ್ಬ ಹಾಲಿ ಸಚಿವ ಜಗದೀಶ್ ಶೆಟ್ಟರ್ ಅವರು 2003ರ ಆಗಸ್ಟ್ 4ರಂದು ಚುಕ್ಕೆ ರಹಿತ ಪ್ರಶ್ನೆ(ಸಂಖ್ಯೆ5227)ಯನ್ನು ಸದನದಲ್ಲಿ ಮಂಡಿಸಿದ್ದರು.

ನಟ ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ, ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು 2014ರ ಜನವರಿ 1ರಂದು ಆದೇಶಿಸಿತ್ತು. ಆದರೆ ಅಧಿಕಾರಿಗಳು ಭೌತಿಕವಾಗಿ ವಶಕ್ಕೆ ಪಡೆಯದೆಯೇ ದಾಖಲೆಗಳಲ್ಲಿ ಮಾತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಮೂದಿಸಿದ್ದರು.

ಅದೇ ರೀತಿ ವಿ ಸೋಮಣ್ಣ, ಆರ್ ಅಶೋಕ್ ಮತ್ತು ಆರಗ ಜ್ಞಾನೇಂದ್ರ ಜಂಟಿಯಾಗಿ ಬೆಂಗಳೂರು ನಗರದ ಸುತ್ತಮುತ್ತ ಭೂ ಕಬಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ 2005ರ ಜುಲೈ 4ರಂದು ಚುಕ್ಕೆ ರಹಿತ ಪ್ರಶ್ನೆಯನ್ನು ( ಸಂಖ್ಯೆ 4001-4003-4223-4313) ಸದನದಲ್ಲಿ ಮಂಡಿಸಿದ್ದರು. ಬೆಂಗಳೂರು ನಗರ ಸುತ್ತಮುತ್ತ ನಡೆದಿರುವ ಭೂ ಕಬಳಿಕೆಯಲ್ಲಿ ಶಾಮೀಲಾದ ಸುಮಾರು 79 ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸದನದಲ್ಲಿ ಆರೋಪಿಸಿದ್ದರು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link