ಕೊರಟಗೆರೆ:-
ಹುಟ್ಟುಹಬ್ಬ ಆಚರಿಸಿಕೊಂಡ ಸ್ನೇಹಿತರು ರಾತ್ರಿ ವೇಳೆ ಒಂದೆಡೆ ಮಲಗಿದ ಸಂದರ್ಭದಲ್ಲಿ ಹೋಟೆಲ್ ಮಾಲೀಕನೇ ಸ್ನೇಹಿತನ 25 ಗ್ರಾಂ ಕೊರಳಿನ ಚೈನ್ ಕದ್ದ ಪ್ರಕರಣ ಭೇದಿಸಿದ ಕೊರಟಗೆರೆ ಪಿಎಸ್ಐ ತೀರ್ಥೇಶ್ ಮತ್ತು ಪೋಲೀಸ್ ತಂಡ ಘಟನೆ ನಡೆದ ಒಂದೇ ದಿನದಲ್ಲಿ ಆರೋಪಿಯನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೊರಟಗೆರೆ ಪಟ್ಟಣದ ಹರ್ಶನ್ ಮೀನು ಹುಳಿ ಹೋಟೆಲ್ ನಲ್ಲಿ ಭರತ್ ಕುಮಾರ್ ಹಾಗೂ ಹೇಮಂತ್ ಕುಮಾರ್ ಸೇರಿದಂತೆ 4-5 ಜನ ಸ್ನೇಹಿತರು ಸ್ನೇಹಿತನ ಹುಟ್ಟುಹಬ್ಬ ಆಚರಿಸಿ ಒಂದೆಡೆ ವಿಶ್ರಾಂತಿ ಪಡೆದ ಸ್ನೇಹಿತರಲ್ಲಿ ಭರತ್ ಕುಮಾರ್ ಎಂಬುವವರ 25 ಗ್ರಾಂ ಚಿನ್ನದ ಸರವನ್ನ ಆತನ ಸ್ನೇಹಿತ ಹೇಮಂತ್ ಕುಮಾರ್ ಜಾಣತನದಿಂದ ಕಳ್ಳತನದ ಕೈಚಳಕ ತೋರಿಸಿ ಸ್ನೇಹಿತರ ಜೊತೆಯಲ್ಲಿ ಇದ್ದು ಯಾಮರಿಸುತ್ತಿದ್ದ ಆರೋಪಿಯನ್ನ ವಶಕ್ಕೆ ಪಡೆಯಲ್ಲಾಗಿದೆ.
ಕೊರಟಗೆರೆ ಪಟ್ಟಣದಲ್ಲಿ ಅರ್ಶನ್ ಮೀನು ಹುಳಿ ಹೋಟೆಲ್ ಮಾಲಿಕ ಹೇಮಂತ್ ಕುಮಾರ್ ಹಾಗೂ ಭರತ್ ಕುಮಾರ್ ಸ್ನೇಹಿತನ ಹುಟ್ಟುಹಬ್ಬ ಆಚರಿಸಿ ರಾತ್ರಿ ಒಂದೇ ಕಡೆ ತಂಗಿದ ಸಂದರ್ಭದಲ್ಲಿ ಭರತ್ ಕುಮಾರ್ ಎಂಬ ಜೋಬಿನಿಂದ ರಾತ್ರಿ ವೇಳೆ 25 ಗ್ರಾಂ ಚಿನ್ನದ ಸರವನ್ನ ಹೇಮಂತ್ ಕುಮಾರ್ ಕಳ್ಳತನದ ಕೈಚಳಕ ತೋರಿಸಿ ಸ್ನೇಹಿತರಿಗೆ ಜೋಗದಿಂದ ಕದ್ದು ಬೇರೆಡೆ ಅಡಗಿಸಿಟ್ಟು ಸ್ನೇಹಿತರನ್ನ ಯಾಮರಿಸಿದ ಪ್ರಕರಣ ಪೋಲಿಸ್ ಮೆಟ್ಟಿಲೇರಿದ ಒಂದೇ ದಿನದಲ್ಲಿ ಕೊರಟಗೆರೆ ಪಿಎಸ್ಐ ತೀರ್ಥೇಶ್ ನೇತೃತ್ವದಲ್ಲಿ ಆರೋಪಿಯನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂದನಕ್ಕೆ ಕಳಿಸಿದ್ದಾರೆ.
ದೂರು ದಾರ ಭರತ್ ಕುಮಾರ್ ಶಿರಾ ತಾಲೂಕಿನ ಗೌಡ ಕೆರೆ ಹೋಬಳಿ ಬಂಧನ ಕುಂಟೆ ಗೊಲ್ಲರಟ್ಟಿ ಗ್ರಾಮದವನಾಗಿದ್ದು ಈತ ಸ್ನೇಹಿತರ ಹುಟ್ಟುಹಬ್ಬಕ್ಕೆ ಕೊರಟಗೆರೆಗೆ ಬಂದವನು 25 ಗ್ರಾಂ ಚಿನ್ನದ ಚೈನ್ ಕಳವಾಗಿದೆ ನಾವು ಸ್ನೇಹಿತರು ಹುಟ್ಟು ಹಬ್ಬ ಆಚರಿಸಿಕೊಂಡು ನಾಲ್ಕೈದು ಜನ ಒಟ್ಟಿಗೆ ತಂಗಿದ ಸಂದರ್ಭದಲ್ಲಿ ಈ ಘಟನೆ ಜರುಗಿದೆ ಎಂದು ದೂರು ನೀಡಿದ ಹಿನ್ನೆಲೆ ಕೊರಟಗೆರೆ ಪೊಲೀಸ್ ಕಾರ್ಯಾಚರಣೆಗಿಳಿದು ಹಠ ಬಿಡದೆ ತಪ್ಪೊಪ್ಪಿಕೊಳ್ಳದ ಸ್ನೇಹಿತರನ್ನ ಠಾಣೆಗೆ ಕರೆಸಿದರು ತಪ್ಪೊಪ್ಪಿಕೊಳ್ಳದೆ ಯಾಮರಿಸಿದ್ದ ಆರೋಪಿಯನ್ನ ಘಟನೆ ನಡೆದ ಎರಡೇ ದಿನದಲ್ಲಿ ಆರೋಪಿಯನ್ನ ಎಡೆಮುರಿ ಕಟ್ಟುವಲ್ಲಿ ಕೊರಟಗೆರೆ ಪೊಲೀಸ್ ನವರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಮಾರ್ಗದರ್ಶನದಲ್ಲಿ ಪಿಎಸ್ಐ ತೀರ್ಥೇಶ್ ಹಾಗೂ ಅವರ ತಂಡ ದೊಡ್ಡಲಿಂಗಯ್ಯ, ಮೋಹನ್, ಸಂಜು ರೆಡ್ಡಿ, ರವಿಕುಮಾರ್ ಪೊಲೀಸ್ ತಂಡ ಆರೋಪಿಯನ್ನ ಸೆರಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ಹೇಮಂತ್ ಕುಮಾರ್ ಎಂಬುವನನ್ನ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎನ್ನಲಾಗಿದೆ.








