ಮುಂಬೈ:
ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ನಿನ್ನೆ ಭಾನುವಾರ ಪುಣೆ ಮೂಲದ 28 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಮೂವರು ಶೂಟರ್‌ಗಳ ಪೈಕಿ ಈತ ತನ್ನ ಸಹೋದರನೊಂದಿಗೆ ಸೇರಿಕೊಂಡು ಕೃತ್ಯವೆಸಗಿದ್ದಾನೆ ಎಂದು ಹೇಳಲಾಗಿದೆ.
ಬಂಧಿತ ಯುವಕ ಪ್ರವೀಣ್ ಲೋಂಕರ್ ಎಂಬಾತನಾಗಿದ್ದು, ಈತ ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಸಹ ಸಂಚುಕೋರ ಎನ್ನಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರುವ ಈತನ ಸೋದರ ಶುಭಂ ಲೋಂಕರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಇದು ಮೂರನೇ ಬಂಧನವಾಗಿದೆ. ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಯ ಪ್ರಕಾರ, ಪ್ರವೀಣ್ ಮತ್ತು ಶುಭಂ ಇಬ್ಬರು ಆಪಾದಿತ ಶೂಟರ್‌ಗಳಾದ ಉತ್ತರ ಪ್ರದೇಶ ನಿವಾಸಿ ಶಿವಕುಮಾರ್ ಗೌತಮ್ ಜೊತೆ ಸೇರಿಕೊಂಡು ಕುಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತದೆ.
ಗೌತಮ್ ಪರಾರಿಯಾಗಿದ್ದು, ಪೊಲೀಸರು ಉತ್ತರ ಪ್ರದೇಶ ನಿವಾಸಿ ಮತ್ತು ಮತ್ತೊಬ್ಬ ಶೂಟರ್ ಗುರ್ಮೈಲ್ ಬಲ್ಜಿತ್ ಸಿಂಗ್ (23) ನನ್ನು ಬಂಧಿಸಿದ್ದಾರೆ. ಪೊಲೀಸರು ಶುಭಂ ಲೋಂಕರ್‌ಗಾಗಿ ಪುಣೆಗೆ ಹೋಗಿ ಹುಡುಕಾಟ ನಡೆಸಿದ್ದು ಇನ್ನೂ ಪತ್ತೆಯಾಗಿಲ್ಲ. ನಂತರ ಪೊಲೀಸರು ಅಪರಾಧದಲ್ಲಿ ಭಾಗಿಯಾಗಿದ್ದ ಶಂಕೆ ಮೇಲೆ ಆತನ ಸಹೋದರ ಪ್ರವೀಣ್ ನನ್ನು ಬಂಧಿಸಿದ್ದಾರೆ.
ಇಂದು ಮುಂಜಾನೆ, ಮುಂಬೈ ಪೊಲೀಸ್ ಬಂಧಿತ ಆರೋಪಿಗಳಿಂದ ಎರಡು ಪಿಸ್ತೂಲ್‌ಗಳು ಮತ್ತು 28 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ.