ರೈತರಿಗೆ ಯುಗಾದಿ ಬೋನಸ್ ನೀಡಿದ ಹಾಲು ಒಕ್ಕೂಟ….!

ಚಿಕ್ಕಬಳ್ಳಾಪುರ

   ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ   ಇಭ್ಭಾಗವಾಗಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾಗಿದೆ. ಮೂರು ತಿಂಗಳಲ್ಲೇ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಭರಫೂರ ಲಾಭ ಮಾಡಿದೆ. ಲಾಭದಲ್ಲಿ ಚಿಕ್ಕಬಳ್ಳಾಪುರ   ಜಿಲ್ಲೆಯ ಹಾಲು ಉತ್ಪಾದಕರಿಗೂ ಪಾಲು ನೀಡಲು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮುಂದಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಪ್ರತಿದಿನ ಸರಿ ಸುಮಾರು 4 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಸಾವಿರಾರು ಜನ ಹೈನುಗಾರರು ಹಾಲು ಉತ್ಪಾದನೆಯಿಂದ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಯುಗಾದಿ ಹಬ್ಬದ ಉಡುಗೊರೆ ಎಂಬಂತೆ ಜಿಲ್ಲೆಯ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್​ಗೆ 1 ರೂಪಾಯಿ ಬೋನಸ್ ನೀಡಿ, ಪ್ರತಿ ಲೀಟರ್​ಗೆ 32.40 ರೂ. ನೀಡಲು ಘೋಷಣೆ ಮಾಡಿದೆ.

   ಬೇಸಿಗೆಯಲ್ಲಿ ಸಾಮಾನ್ಯವಾಗಿ ಹಾಲಿನ ಉತ್ಪಾದನೆಯಲ್ಲಿ ಕುಂಠಿತ ಆಗಲಿದೆ. ಹೀಗಾಗಿ ಹೈನುಗಾರರಿಗೆ ಎದುರಾಗುವ ಅರ್ಥಿಕ ಸಂಕಷ್ಟಕ್ಕೆ ಸಾಥ್ ಕೊಡುವ ಸಲುವಾಗಿ ಮಾರ್ಚ್ 15 ರಿಂದ ಮೇ 15 ರವರೆಗೂ ನಿರಂತರವಾಗಿ 2 ತಿಂಗಳು ಅಂದರೆ, 60 ದಿನಗಳ ಕಾಲ ರೈತರು ಉತ್ಪಾದಿಸುವ ಹಾಲಿಗೆ ಪ್ರತಿ ಲೀಟರ್​ಗೆ 1 ರೂಪಾಯಿ ಹೆಚ್ಚುವರಿಯಾಗಿ ಕೊಡಲು ಚಿಮುಲ್ ತೀರ್ಮಾನಿಸಿದೆ.

   60 ದಿನಗಳ ಕಾಲ 1 ರೂಪಾಯಿ ಹೆಚ್ಚುವರಿಯಿಂದ ಸರಿಸುಮಾರು ಎರಡೂವರೆ ಕೋಟಿ ರೂಪಾಯಿ ಹೈನುಗಾರರ ಕೈ ಸೇರಲಿದೆ. ಚಿಮುಲ್ ಒಕ್ಕೂಟದ ಈ ನಡೆ ಹೈನುಗಾರರಿಗೆ ಸಂತಸಕ್ಕೆ ಕಾರಣವಾಗಿದೆ.

Recent Articles

spot_img

Related Stories

Share via
Copy link