ಆಂಧ್ರಪ್ರದೇಶ : ಹೊಸ ಸರ್ಕಾರದಿಂದ ಖಾತೆ ಹಂಚಿಕೆ

ವಿಜಯವಾಡ:

     ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಜು.12 ರಂದು ಅಧಿಕಾರ ವಹಿಸಿಕೊಂಡ ಬಳಿಕ ಚಂದ್ರಬಾಬು ನಾಯ್ಡು ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಉದ್ಯಮಗಳು, ಸಾಮಾನ್ಯ ಆಡಳಿತ ಇಲಾಖೆಗಳನ್ನು ಚಂದ್ರಬಾಬು ನಾಯ್ಡು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

    ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಆಂಧ್ರಪ್ರದೇಶದ ಡಿಸಿಎಂ ಮಾಡಲಾಗಿದ್ದು, ಅವರಿಗೆ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಜಲ ಪೂರೈಕೆ, ಪರಿಸರ, ಅರಣ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳನ್ನು ನೀಡಲಾಗಿದೆ. 

   ಇನ್ನು ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ, ಐಟಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್, ರಿಯಲ್-ಟೈಮ್ ಗವರ್ನೆನ್ಸ್ ಪೋರ್ಟ್ಫೋಲಿಯೊಗಳನ್ನು ನೀಡಲಾಗಿದೆ.

   ಹಿರಿಯ ನಾಯಕ ಕೆ ಅಚ್ಚಂನಾಯ್ಡು ಅವರಿಗೆ ಕೃಷಿ ಮತ್ತು ಸಂಬಂಧಿತ ವಿಷಯಗಳ ಇಲಾಖೆಗಳನ್ನು ನೀಡಲಾಗಿದೆ ಆದರೆ ನಾಯ್ಡು ಅವರ ಸಂಪುಟದಲ್ಲಿ ಕಿರಿಯ ಸಚಿವರಾದ ವಂಗಲಪುಡಿ ಅನಿತಾ ಅವರನ್ನು ಗೃಹ ಸಚಿವರನ್ನಾಗಿ ಮಾಡಲಾಗಿದೆ. ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದಲ್ಲಿಯೂ ಮಹಿಳೆಯರು ಗೃಹ ಖಾತೆಯನ್ನು ಹೊಂದಿದ್ದರು.

    ಪ್ರಮುಖ ಖಾತೆಯಾದ ಹಣಕಾಸು ಖಾತೆಯನ್ನು ಹಿರಿಯ ನಾಯಕ ಪಯ್ಯಾವುಲ ಕೇಶವ್ ಅವರಿಗೆ ನೀಡಲಾಗಿದ್ದು, ಬಿಜೆಪಿಯ ವೈ ಸತ್ಯ ಕುಮಾರ್ ಅವರಿಗೆ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲಾಗಿದೆ.

   ಮೊದಲ ಬಾರಿಗೆ ಶಾಸಕ ಟಿ.ಜಿ.ಭರತ್ ಅವರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಖಾತೆ ಮತ್ತು ಹಿರಿಯ ನಾಯಕ ಆನಂ ರಾಮನಾರಾಯಣ ರೆಡ್ಡಿ ಅವರಿಗೆ ದತ್ತಿ ಸಚಿವಾಲಯದ ಉಸ್ತುವಾರಿ ವಹಿಸಲಾಗಿದೆ. ಅಚ್ಚಂನಾಯ್ಡು ಅವರು ಸಂಪುಟಕ್ಕೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ BC ನಾಯಕ ಪಲ್ಲಾ ಶ್ರೀನಿವಾಸ ರಾವ್ ಅವರನ್ನು ಪಕ್ಷದ ಎಪಿ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಯಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap