ಮೊಬೈಲ್ ಶೋರೂಂಗೆ ಕನ್ನ

ತುಮಕೂರು:

ಲಕ್ಷಾಂತರ ರೂ. ಮೌಲ್ಯದ ಮೊಬೈಲ್ಗಳು ಕಳವು

 ಶೆಟರ್ ಮೀಟಿ ಮೊಬೈಲ್ ಶೋರೂಂಗೆ ನುಗ್ಗಿದ ಕಳ್ಳರು ಬೆಲೆಬಾಳುವ ಮೊಬೈಲ್‍ಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ನಗರದ ಶಿವಕುಮಾರಸ್ವಾಮೀಜಿ ವೃತ್ತದ ಬಳಿಯಿರುವ ಒನ್ ಪ್ಲಸ್ ಮೊಬೈಲ್ ಶೋರೂಂನಲ್ಲಿ ಈ ಘಟನೆ ನಡೆದಿದ್ದು, ಕಳೆದ ರಾತ್ರಿ ಶೋರೂಂನ ಶೆಟರ್ ಮೀಟಿ ಅದರಲ್ಲಿದ್ದ ಲಕ್ಷಾಂತರ ರೂ.ಗಳ 80ಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್‍ಗಳನ್ನು ಕದಿದ್ದಾರೆ. ಶೋ ರೂಂ ನಲ್ಲಿದ್ದ ಸಿಸಿ ಕ್ಯಾಮೆರಾ ಹಾಗೂ ಹೊರಗಿರುವ ಸಿಸಿ ಕ್ಯಾಮೆರಾಗಳಲ್ಲಿ ಪತ್ತೆ ಹಚ್ಚಬಹುದೆಂಬ ಶಂಕೆಯಿಂದ ಸಿಸಿ ಕ್ಯಾಮೆರಾ ಹಾರ್ಡ್ ಡಿಸ್ಕ್‍ನ್ನೂ ಸಹ ಕದ್ದೊಯ್ದಿದ್ದಾರೆ.

ಕಳ್ಳತನ ನಡೆದಿರುವುದು ಬೆಳಗ್ಗೆ ಗಮನಕ್ಕೆ ಬಂದಿದ್ದು ಶೋ ರೂಂ ಮಾಲೀಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.ಸೋಮವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಮೊಬೈಲ್ ಕಳವು ಪ್ರಕರಣಗಳು ಹೆಚ್ಚುತ್ತಿದ್ದು ಹಾಡ ಹಗಲೇ ದಾರಿ ಹೋಕರಿಂದ ಮೊಬೈಲ್ ಕಿತ್ತುಕೊಂಡು ಹೋಗುತ್ತಿರುವ ಘ ಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಕಳೆದ 5 ದಿನಗಳ ಸಮಯದಲ್ಲಿ ಎಂ.ಜಿ. ರಸ್ತೆಯಿಂದ ಎಚೆ ಎಂ ಎಸ್ ಕಾಂಪ್ಲೆಕ್ಸ ಕಡೆಗೆ ಹೋಗುವ ಮಾರ್ಗದ ಸಪ್ತಗಿರಿ ಡಿಟಿಪಿ ಸೆಂಟರ್ ಗೆ ಆಗಮಿಸಿದ ಮೊಬೈಲ್ ಆಪ್ ಸೇಲ್ಸ ಪ್ರಮೋಷನ್ ಹೆಸರಿನ ವ್ಯಕ್ತಿ ಅಪ್ ಇನ್ ಸ್ಟಾಲ್ ಮಾಡುವುದಾಗಿ ಹೇಳಿ ಮೊಬೈಲ್ ಕದ್ದಿದ್ದಾನೆ.

ನಂತರ ಕೇವಲ ಒಂದು ಘಂಟೆ ಅವಧಿಯಲ್ಲಿ 92,000 ರೂ.ಗಳನ್ನು ಸದರಿ ಮೊಬೈಲ್ ಮೂಲಕವೇ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣ ಕದ್ದಿದ್ದಾನೆ. ಮಾಲೀಕ ಮೋಹನ್ ಈ ಬಗ್ಗೆ ತುಮಕೂರು ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ. ಇಂತಹ ಹಲವು ಪ್ರಕರಣಗಳು ನಗರದ ಅಲ್ಲಲ್ಲಿ ವರದಿಯಾಗುತ್ತಿವೆ.

Recent Articles

spot_img

Related Stories

Share via
Copy link
Powered by Social Snap