ಮಧುಗಿರಿ:
ಕಳೆದ ಐದು ದಿನ ಗಳ ಹಿಂದೆ ನಾಪತ್ತೆಯಾಗಿದ್ದ ಪೊಲೀಸ್ ಪೇದೆ ಮಂಗಳವಾರ ಪತ್ತೆಯಾಗಿದ್ದಾರೆ .ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಕಳೆದ ಎರಡುವರೆ ವರ್ಷಗಳಿಂದ ಪೊಲೀಸ್ ಪೇದೆ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಡಿ.7 ರ ಸಂಜೆ ಮಧುಗಿರಿ-ಪಾವಗಡ ಕೆ ಶಿಪ್ ರಾಜ್ಯ ಹೆದ್ದಾರಿ ಮಿಡಿಗೇಶಿ ಹೋಬಳಿ ಬಿದರೆ ಕೆರೆ ಬಳಿ ವೀರೇಶ್ ( 27) ರವರ ದ್ವಿಚಕ್ರ ವಾಹನ ಹಾಗೂ ಬಟ್ಟೆ, ಮೊಬೈಲ್ ಕೆರೆಯ ಸಮೀಪ ಬಿಟ್ಟು ಹೋಗಿದ್ದರು.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದ ನಿವಾಸಿಯಾಗಿರುವ ವೀರೇಶ್ ನೆರೆಯ ಸೀಮಾಂಧ್ರದ ಅನಂತರಪುರ ನಗರದಲ್ಲಿ ಪತ್ತೆಯಾಗಿದ್ದಾರೆ.
ಇಷ್ಟೂ ದಿನಗಳು ಅನಂತರಪುರ ನಗರದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಜೊತೆಯಲ್ಲಿ ವಾಸವಿದ್ದರೆಂದು ತಿಳಿದು ಬಂದಿದ್ದು ಅನಾರೋಗ್ಯದಿಂದ ಬಳಲುತ್ತಿದ್ದು , ಮನನೊಂದು ಹೋಗಿದ್ದರೆಂದು ಹೇಳಲಾಗುತ್ತಿದೆ.
ಮಿಡಿಗೇಶಿ ಪೊಲೀಸ್ ಠಾಣೆಯ ಪಿ ಎಸ್ ಐ ಮಹಮದ್ ಪೈಗಂಬರ್ ಅಮ್ಮಣಗಿ ಹಾಗೂ ಪೇದೆಗಳಾದ ಪ್ರಕಾಶ್ , ಗೋಪಾಲ ಕೃಷ್ಣ ರವರುಗಳು ಇಂದು ಮಿಡಿಗೇಶಿ ಠಾಣೆಗೆ ಪೇದೆಯನ್ನು ಕರೆ ತಂದಿದ್ದು ಆರೋಗ್ಯ ತಪಾಸಣೆ ಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದು ಕೊಂಡು ಹೋಗಲಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
