ಚಿತ್ರದುರ್ಗ:

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ, ಜನತಂತ್ರ ವ್ಯವಸ್ಥೆ ಉಳಿದಿದೆಯೋ ಅಥವಾ ಇಲ್ಲವೋ ಎಂಬುದನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತಿಯೊಬ್ಬರೂ ಪ್ರಶ್ನೆ ಮಾಡಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರ ಡಿಸಿ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉತ್ತರ ಪ್ರದೇಶದ ಲಕ್ಕಿಂಪುರಖೇರಿಯಲ್ಲಿ ನಡೆದರೈತರ ಹತ್ಯೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ವಾದ್ರಾರನ್ನು ಬಂಧಿಸುಸಿರುವುದನ್ನು ಖಂಡಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
70ರ ದಶಕದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ದೇಶದಲ್ಲಿ ಎದುರಾದ ರಾಜಕೀಯ ಬಿಕ್ಕಟ್ಟಿನ ಸಲುವಾಗಿ ಇಡೀ ಜಗತ್ತಿಗೆ ಗೊತ್ತಾಗುವ ರೀತಿಯಲ್ಲಿ ಹಾಗೂ ದೇಶದ ಏಕತೆ, ಸಮಗ್ರತೆ ಕಾಪಾಡುವ ಸಲುವಾಗಿ ತುತು ಪರಿಸ್ಥಿತಿ ಘೋಷಣೆ ಮಾಡಿದ್ದರು. ದೇಶದ ಸಾಮರಸ್ಯಕ್ಕೆ ,ಶಾಂತಿಗೆ ಭಂಗತುರುವ, ಸಮಾಜದಲ್ಲಿ ಒಡಕನ್ನು ಉಂಟು ಮಾಡುವ, ಪ್ರಚೋಧನೆ ಮಾಡುವ ಹಿಂಸಾತ್ಮಕ ಚಳವಳಿಗಳನ್ನ ನಿಯಂತ್ರಿಸುವ ಸಲುವಾಗಿ ಆಗಿನ ತುರ್ತುಪರಿಸ್ಥಿತಿಯನ್ನ ಆರೋಗ್ಯಕರವಾಗಿ ಬಳಸಿಕೊಳ್ಳಲಾಗಿತ್ತು.ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ದೇಶದೆಲ್ಲೆq ಕೃತಕವಾದ ಅಶಾಂತಿ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ದಲಿತರು,ಅಲ್ಪಸಂಖ್ಯಾತರು,ರೈತರು, ಜನಪರ ಹೋರಾಟಗಾರರ ಹತ್ಯೆಗಳನ್ನು ನಡೆಸಲಾಗುತ್ತಿದೆ. ಜನವಿರೋಧಿ, ರೈತವಿರೋಧಿ ಕಾಯ್ದೆಗಳನ್ನು ಜಾರಿಗೆತಂದುಇಡೀದೇಶದಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಲಾಗಿದೆ. ಮೋದಿಯವರುತನ್ನಕಾರ್ಪೋರೇಟ್ ಶಾಹಿ ಗೆಳೆಯರ ಸಂಪತ್ತನ್ನ ಹೆಚ್ಚು ಮಾಡಲುಇಡೀದೇಶವನ್ನೇ ಮಾರಾಟಕ್ಕಿಟ್ಟಿದ್ದಾರೆ.
ಸರ್ಕಾರದಇಂತಹಜನವಿರೋಧಿ ನಡೆಯನ್ನು ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಜರುಗುತ್ತಿವೆಎಂದರು.
ದೆಹಲಿ ಸುತ್ತ ಲಕ್ಷಾಂತರರೈತರುಕೇಂದ್ರ ಸರ್ಕಾರದ ಕೃಷಿ ವಿರೋಧಿ ಕಾಯಿದೆಗಳನ್ನು ವಿರೋಧಿಸಿ ಕಳೆದ 10 ತಿಂಗಳಿನಿಂದ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ.ಈ ಕಾರಣಕ್ಕೆ ಮೋದಿ ಸರ್ಕಾರದ ಮಾನಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಇಂತಹ ವಿಷಮ ಸಂಧರ್ಭದಲ್ಲಿ ಉತ್ತರಪ್ರದೇಶದ ಲಖೀಂಪುರದಲ್ಲಿ ರೈತರು ಶಾಂತಯುತವಾಗಿ ನಡೆಸುತ್ತಿದ್ದ ಪ್ರತಿಭಟನಾ ರ್ಯಾಲಿಯ ಮೇಲೆ ವಾಹನ ಚಲಾಯಿಸಿ 8 ಜನರೈತರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಖಂಡಿಸಿ ರೈತರಿಗೆ ಸಾಂತ್ವನ ಹೇಳಲು ಹೊರಟಿದ್ದಕಾಂಗ್ರೆಸ್ ಪಕ್ಷದ ನಾಯಕಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಗಾಂಧಿಕುಟುಂಬದಕುಡಿ ಪ್ರಿಯಾಂಕಗಾಂಧಿ ವಾದ್ರಾರನ್ನಬಂಧಿಸಿರುವ ಉತ್ತರ ಪ್ರದೇಶ ಸರ್ಕಾರತನ್ನ ಫ್ಯಾಸಿಸ್ಟ್ ಮುಖವನ್ನಜಗತ್ತಿಗೆ ಮತ್ತೆ ಮತ್ತೆತೋರಿಸುತ್ತಿದೆ.ದೇಶದಲ್ಲಿ ಶಾಂತಿಯುತವಾಗಿ ಚಳವಳಿ ಮಾಡುವವರನ್ನು ಬಂಧಿಸುವಂತಹ ಕೆಲಸ ಮಾಡಲಾಗುತ್ತಿರುವು ಪ್ರಜಾತಂತ್ರದ ಕಗ್ಗೊಲೆ ನಡೆಸುತ್ತಿರುವುದಕ್ಕೆ ಸಾಕ್ಷಿಯಾಗಿದೆಯೆಂದುಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ವಿರುದ್ಧಯಾರೂ ಮಾತನಾಡುವವರಅಂತವರ ವಿರುದ್ಧಇಡಿ, ಸಿಬಿಐ, ಐಟಿ ದಾಳಿ ಮಾಡಿಸಿ ಪ್ರತಿಕ್ಷೇತ್ರದಲ್ಲಿಯೂಕೂಡಕೈಹಾಡಿಸುವ ಕೆಲಸ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ,ಅನ್ನ ನೀಡುವರೈತರುದೇಶದತಂದೆತಾಯಿಗೆ ಸಮಾನ, ಅಂತವರನ್ನುಕರೆದು ಮಾತನಾಡುವ ಸೌಜನ್ಯದೇಶದ ಪ್ರಧಾನಿಗಳಿಗಿಲ್ಲ. ರೈತರನ್ನು ಬಂಧಿಸುವ ಗೋಲಿಬಾರ್ ಮಾಡುವ ಮತ್ತುರೈತರ ಮೇಲೆ ವಾಹನ ಚಲಾಯಿಸಿ ಅವರ ಪ್ರಾಣತೆಗೆಯುವ ಕೆಲಸವನ್ನುಅಲ್ಲಿನ ಮುಖ್ಯಮಂತ್ರಿಯೋಗಿಆದಿತ್ಯನಾಥ್ಕಾರಣರಾಗಿದ್ದಾರೆಯೆಂದುಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿಯವರುಅಗತ್ಯವಿದ್ದರೇ ಸಕಾರಣಗಳನ್ನು ಮುಂದು ಮಾಡಿಘೋಷಿತತುರ್ತು ಪರಿಸ್ಥಿತಿ ಹೇರಲಿ ಅದನ್ನು ಬಿಟ್ಟುಅಘೋಷಿತತುರ್ತು ಪರಿಸ್ಥಿತಿ ಘೋಷಣೆ ಮಾಡಿಜನರ ಬದುಕಿನಜೊತೆಚೆಲ್ಲಾಟವಾಡುವುದನ್ನತಕ್ಷಣ ನಿಲ್ಲಿಸಬೇಕು, ಇಲ್ಲವಾದರೇಜನರೇತಕ್ಕ ಪಾಠ ಕಲಿಸಲಿದ್ದಾರೆಂದರು.
ಪರಿಸ್ಥಿತಿಯ ಗಂಭೀರತೆಯನ್ನಅರಿತು ಪ್ರಧಾನಿ ನರೇಂಧ್ರ ಮೋದಿಯವರುಕೂಡಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿವಾದ್ರಾರವರನ್ನು ಬಿಡುಗಡೆಗೊಳಿಸಬೇಕು.ಗೌರವಯುತವಾಗಿ ನಡೆದುಕೊಂಡುಅವರು ಮಾಡುವ ಚಳುವಳಿಗೆ ಸಹಕಾರಕೊಟ್ಟುಜನರ ಭಾವನೆಗೆ ಅರ್ಥಮಾಡಿಕೊಳ್ಳುವುದನ್ನ ಕಲಿಯಬೇಕೆಂದು ಆಗ್ರಹಿಸಿದರು.
ದೇಶದಲ್ಲಿ ವಿನಾ ಕಾರಣ ನಡೆಯುವದೌರ್ಜನ್ಯದ ವಿರುದ್ಧ ಬೃಹತ್ ಪ್ರಮಾಣದಲ್ಲಿಕಾಂಗ್ರೆಸ್ ಪ್ರತಿಭಟಿಸಲು ಕೊರೋನಾಕಾರಣವಾಗಿದೆ. ಕೊರೋನಾ ಇಲ್ಲದಿದ್ದರೆ ಕಾಂಗ್ರೆಸ್ಸಿಗರ ಶಕ್ತಿ ಏನೆಂಬುದನ್ನು ತೋರಿಸಲಾಗುತ್ತಿತ್ತು.
ಕಾಂಗ್ರೆಸಿಗರಿಗೆ ಹಿಂಸಾತ್ಮಕ ಚಳವಳಿಯಲ್ಲಿ ನಂಬಿಕೆಯಿಲ್ಲ, ಮಹಾತ್ಮಗಾಂಧಿಯವರು ಪ್ರತಿಪಾದಿಸಿದ ಅಹಿಂಸಾತ್ಮಕ ಚಳವಳಿಯಲ್ಲಿ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ರೈತರ ಮೇಲಿನ ಕರಾಳ ಕಾಯಿದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ಅಧ್ಯಕ್ಷ ಎಂ.ಕೆ.ಂತಾಜ್ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಂಪತ್ಕುಮಾರ್, ಲಿಡ್ಕರ್ ಮಾಜಿಅಧ್ಯಕ್ಷ ಓ.ಶಂಕರ್, ಗೀತಾನಂದಿನಿಗೌಡ, ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಅಶೋಕ್ ನಾಯ್ಡು, ಧನಂಜಯ್, ತಿಪ್ಪೇಸ್ವಾಮಿ, ಕಿರಣ್ಯಾದವ್, ಅನಿಲ್ ಕೋಟಿ, ಸಾಧಿಕ್, ಪ್ರಕಾಶ್ರಾಮನಾಯ್ಕ, ನಜ್ಮಾತಾಜ್, ಸೌಭಾಗ್ಯ, ಮುನೀರಾ ಮುಖಂದರ್ ,ಜಯಣ್ಣ ಮತ್ತಿತರರಿದ್ದರು.
ಕಾರ್ಯಕರ್ತರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕರೆ
ವಿರೋಧಿಗಳ ಟೀಕೆಗೆ ಉತ್ತರಿಸುವ ಸಾಮಥ್ರ್ಯ ಬೆಳೆಸಿಕೊಳ್ಳಿ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಗೆ ಮನೆಗೆ ತಿಳಿಸಿ ವಿರೋಧಿಗಳ ಟೀಕೆಗಳಿಗೆ ತಕ್ಕ ಉತ್ತರ ನೀಡುವ ಸಾಮಥ್ರ್ಯ ಬೆಳೆಸಿಕೊಳ್ಳುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಾರ್ಯಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ಕರೆ ನೀಡಿದರು.
ಚಳ್ಳಕೆರೆ ಟೋಲ್ಗೇಟ್ನಲ್ಲಿರುವ ಎಸ್.ಎಸ್.ಕೆ.ಎಸ್. ಸಮುದಾಯ ಭವನದಲ್ಲಿ ಭಾರತೀಯ ಜನತಾಪಾರ್ಟಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವತಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನದಡಿ ಬುಧವಾರ ನಡೆದ ಸೇವಾ ಯಜ್ಞದಲ್ಲಿ ಸಮರ್ಪಿತ ಜೀವನ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರಮೋದಿರವರು ಪೌರತ್ವ ಕಾಯಿದೆ ತಿದ್ದುಪಡಿ ಜಾರಿಗೆ ತಂದಿರುವುದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಈ ಕಾಯಿದೆಯಿಂದ ನಮ್ಮ ದೇಶದ ಮುಸಲ್ಮಾನರನ್ನು ಹೊರಹಾಕಲಾಗುತ್ತದೆಂದು ಕಾಂಗ್ರೆಸ್ನವರು ಅಪಪ್ರಚಾರ ಮಾಡುತ್ತಿದ್ದಾರೆ. ನಿಜಕ್ಕೂ ಇದು ಒಳ್ಳೆ ಕಾಯಿದೆ. ಪಾಕಿಸ್ತಾನ, ಆಫ್ಭಾನಿಸ್ತಾನ, ಬಂಗಾಳದಲ್ಲಿರುವ ಹಿಂದುಗಳು ಭಾರತಕ್ಕೆ ಬಂದಾಗ ಪೌರತ್ವ ನೀಡುವುದು ಇದರ ಉದ್ದೇಶ. ಜಮ್ಮು ಮತ್ತು ಕಾಶ್ಮೀರದಲ್ಲಿ 371 ನೇ ಕಾಯಿದೆಯನ್ನು ರದ್ದುಪಡಿಸಿರುವುದರಿಂದ ಆ ಭಾಗವನ್ನು ವಶಪಡಿಸಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.
ಮಹಿಳೆಯರಿಗೂ ಸಮಾನ ಹಕ್ಕು ನೀಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರಸ್ತಾಪಿಸಿದ್ದಕ್ಕೆ ನೆಹರು ಒಪ್ಪದಿದ್ದಾಗ ಬೇಸರಗೊಂಡು ಅಂಬೇಡ್ಕರ್ ಮಂತ್ರಿ ಪದವಿಗೆ ರಾಜಿನಾಮೆ ನೀಡುತ್ತಾರೆ. ಆಗ ಮತ್ತೆ ಚುನಾವಣೆಯಾದಾಗ ಅಂಬೇಡ್ಕರ್ ವಿರುದ್ದ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿ ಸೋಲಿಸಿದ್ದು, ಇದೇ ಕಾಂಗ್ರೆಸ್ನವರು. ಪಂಜಾಬ್ನಲ್ಲಿ ರೈತರು ಚಳುವಳಿ ನಡೆಸುತ್ತಿರುವುದು ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕೆಂದು. ಆದರೆ ಕಾಂಗ್ರೆಸ್ನವರು ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡು ಕೇಂದ್ರ ಸರ್ಕಾರದ ಕೃಷಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಗಡ್ಕರಿ ಕೇಂದ್ರ ಸಾರಿಗೆ ಮಂತ್ರಿಯಾದ ಮೇಲೆ ಹೆದ್ದಾರಿ ಕೆಲಸ ಚುರುಕಿನಿಂದ ನಡೆಯುತ್ತಿದೆ. ಸರ್ವರಿಗೂ ಸೂರು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಪ್ರಧಾನಿ ಮೋದಿ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಲಾಕ್ಡೌನ್ ಘೋಷಿಸಿ ಗಟ್ಟಿ ನಿರ್ಧಾರ ತೆಗೆದುಕೊಂಡ ಫಲವಾಗಿ ನಮ್ಮ ದೇಶದಲ್ಲಿ ಸಾವು-ನೋವಿನ ಸಂಖ್ಯೆ ಕಡಿಮೆಯಾಗಿದೆ. ಅದೇ ಮುಂದುವರೆದ ದೇಶಗಳಲ್ಲಿ ಲಕ್ಷಾಂತರ ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆಂದರು.
ಬಿಜೆಪಿ.ರಾಜ್ಯ ಮಾಧ್ಯಮ ವಕ್ತಾರ ಮೋಹನ್ ವಿಶ್ವ ಮಾತನಾಡುತ್ತ ಗುಜರಾತ್ ಮುಖ್ಯಮಂತ್ರಿಯಿಂದ ಹಿಡಿದು ದೇಶದ ಪ್ರಧಾನಿ ಹುದ್ದೆಗೆ ಹೇರಿರುವ ನರೇಂದ್ರ ಮೋದಿರವರು ಇಪ್ಪತ್ತು ವರ್ಷಗಳಿಂದ ರಾಜಕೀಯ ಅಧಿಕಾರದಲ್ಲಿರುವುದು ದೊಡ್ಡ ಇತಿಹಾಸ. ತಾಳ್ಮೆ, ಮೌನ, ಕಠಿಣ ಶ್ರಮ, ಬದ್ದತೆ, ಜನಸೇವೆಯ ಮೂಲಕವೇ ವಿರೋಧಿಗಳ ಟೀಕೆಗಳಿಗೆ ಉತ್ತರ ನೀಡುತ್ತಿದ್ದಾರೆ. ಗೋದ್ರಾಹತ್ಯಾಕಾಂಡ ಸೇರಿದಂತೆ ಅನೇಕ ವಿಚಾರಣೆಗಳನ್ನು ಎದುರಿಸಿದ ಮೋದಿರವರು ಯಾವ ಆಪಾದನೆ ಟೀಕೆಗಳಿಗೂ ಎದೆಗುಂದಲಿಲ್ಲ. ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಕನಸು ಹೊತ್ತಿದ್ದ ಸ್ವಾಮಿವಿವೇಕಾನಂದರವರ ಆಸೆಯಂತೆ ಭಾರತವನ್ನು ವಿಶ್ವಗುರು ಮಾಡಲು ಹೊರಟಿರುವ ಮೋದಿರವರ ಆದರ್ಶ, ಚಿಂತನೆಗಳನ್ನು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನರೇಂದ್ರಮೋದಿರವರು ಮಕ್ಕಳ ಅಪೌಷ್ಟಿಕತೆಗೆ ಹೆಚ್ಚಿನ ಗಮನ ನೀಡಿದರು. ಗ್ರಾಮಜ್ಯೋತಿ ಯೋಜನೆಯಡಿ ಹಳ್ಳಿ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಎಪ್ಪತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಕನಿಷ್ಟ ಶೌಚಾಲಯವನ್ನು ನಿರ್ಮಿಸಿಲ್ಲ. ಅದೇ ಈಗಿನ ಪ್ರಧಾನಿ ಮೋದಿರವರು ಸ್ವಚ್ಚ ಭಾರತ್ ಯೋಜನೆಯಡಿ ಪ್ರತಿ ಹಳ್ಳಿಗಾಡಿನಲ್ಲಿಯೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ನೆರವು, ಸ್ಮಾರ್ಟ್ಸಿಟಿ, ವಯೋವೃದ್ದರಿಗೆ ಪಿಂಚಣಿ, ಜಲಜೀವನ್ ಮಿಷನ್ ಅಡಿ ಪ್ರತಿ ಮನೆ ಮನೆಗೆ ನಳದ ಮೂಲಕ ನೀರು ಹರಿಸುವ ಚಿಂತನೆ, ಸೇವಾ ಮನೋಭಾವನೆಯುಳ್ಳ ಧೀಮಂತ ನಾಯಕ ಪ್ರಧಾನಿ ಮೋದಿರವರ ಆದರ್ಶಗಳಂತೆ ನಡೆಯಬೇಕಿದೆ ಎಂದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ.ನಗರ ಮಂಡಲ ಅಧ್ಯಕ್ಷ ಕೆ.ಶಶಿಧರ್ ಮಾತನಾಡಿ ದೇಶಭಕ್ತಿ, ನಿಸ್ವಾರ್ಥ ಸೇವೆ ಪ್ರಧಾನಿ ಮೋದಿರವರ ಧ್ಯೇಯ. ಭಾರತವನ್ನು ವಿಶ್ವಗುರು ಮಾಡಬೇಕೆಂಬುದು ಅವರ ಬಯಕೆ. ಹಾಗಾಗಿ ಪ್ರಧಾನಿರವರ ಸಾಧನೆಯನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವ ಕೆಲಸವಾಗಬೇಕೆಂದು ಹೇಳಿದರು.
ಜಿ.ಅನಿತ್ಕುಮಾರ್, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಭದ್ರಿನಾಥ್, ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ಸಿದ್ದಾಪುರ, ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿನಾಗರಾಜ್, ಜಿಲ್ಲಾ ಕಾರ್ಯದರ್ಶಿ ಎ.ರೇಖ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ವೇದಿಕೆಯಲ್ಲಿದ್ದರು.
ಉಚಿತ ನೇತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ
ಬಿಜೆಪಿಯಿಂದ ವಿವಿಧ ಸೇವಾ ಕಾರ್ಯ;ತಿಪ್ಪಾರೆಡ್ಡಿ
ದೇಶದ ಪ್ರಧಾನಿ ಮೋದಿ ಹಾಗೂ ನಡ್ಡರವರ ಆದೇಶದಂತೆ ಸೇವಾ ಮತ್ತು ಸಮರ್ಪಣಾ ಅಭಿಯಾನದಡಿಯಲ್ಲಿ ಸೆ.17 ರಿಂದ ಅ.7 ರವರೆಗೆ ವಿವಿಧ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಭಾರತೀಯ ಜನತಾಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನದಡಿ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣಾ ವಿಭಾಗದ ಸಹಯೋಗದೊಂದಿಗೆ ಬಿಜೆಪಿ.ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನರೇಂದ್ರಮೋದಿ ದೇಶದ ಪ್ರಧಾನಿಯಾದ ಮೇಲೆ ಅನೇಕ ಬದಲಾವಣೆಗಳಾಗಿವೆ. ವಿಶೇಷವಾಗಿ ಜನಸಾಮಾನ್ಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಪಂಡಿತ್ ದೀನ್ದಯಾಳ್ ಉಪಾಧ್ಯ, ಶ್ಯಾಂಪ್ರಸಾದ್ ಮುಖರ್ಜಿ, ಅಟಲ್ಬಿಹಾರಿ ವಾಜಪೇಯಿ ಇವರುಗಳು ಹೋರಾಡಿ ಕಟ್ಟಿದ ಪಕ್ಷ ಬಿಜೆಪಿ. ಇಂತಹ ಮಹಾನ್ ನಾಯಕರ ಪರಿಶ್ರಮ ಹಾಗೂ ಹೋರಾಟದಿಂದ ಜಮ್ಮು-ಕಾಶ್ಮೀರ ಉಳಿದುಕೊಂಡಿದೆ.
ಕಣ್ಣಿನ ತಪಾಸಣೆ ಹಾಗೂ ಶಸ್ತ್ರಿಚಿಕಿತ್ಸೆ ಬಗ್ಗೆ ಯಾರೂ ಭಯಪಟ್ಟುಕೊಳ್ಳುವುದು ಬೇಡ. ಅತ್ಯಾಧುನಿಕ ಸಲಕರಣೆಗಳಿಂದ ಶಸ್ತ್ರಚಿಕಿತ್ಸೆ ನಡೆಸುವ ಪದ್ದತಿಯಿದೆ. ಅದಕ್ಕಾಗಿ ಕಣ್ಣಿನ ತೊಂದರೆಯಿರುವವರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಪ್ರತಿ ಮನೆಯಲ್ಲಿಯೂ ಶೌಚಾಲಯ ಇರಬೇಕೆನ್ನುವುದು ಗೌರವದ ಪ್ರಶ್ನೆಯಾಗಿರುವುದರಿಂದ ಪ್ರಧಾನಿ ಮೋದಿರವರು ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. ಕೊರೋನಾ ಅಪಾಯಕಾರಿ ಪರಿಸ್ಥಿತಿಯಲ್ಲಿ ಲಾಕ್ಡೌನ್ ಘೋಷಿಸಿದ್ದರಿಂದ ಹೆಚ್ಚಿನ ಅನಾಹುತಗಳು ಸಂಭವಿಸುವುದು ತಪ್ಪಿದಂತಾಗಿದೆ. ಮುಂದುವರೆದ ಅಮೇರಿಕಾದಂತ ದೇಶ ಕೊರೋನಾದಿಂದ ತತ್ತರಿಸಿದೆ. ಈಗಲೂ ತಾತ್ಸಾರ ಮಾಡುವಂತಿಲ್ಲ. ಅನೇಕ ಸಮಸ್ಯೆಗಳಿವೆ. ಎಲ್ಲವೂ ಹಂತ ಹಂತವಾಗಿ ಬಗೆಹರಿಯಲಿದೆ ಎಂದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಸೇವಾ ಮತ್ತು ಸಮರ್ಪಣಾ ಅಭಿಯಾನ ಅತ್ಯುತ್ತಮ ಕಾರ್ಯಕ್ರಮ. ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಸೆ.17 ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಸ್ವಾರ್ಥಕ್ಕಿಂತ ಸಮರ್ಪಣೆ ಮುಖ್ಯ. ರಕ್ತದಾನ, ಸ್ವಚ್ಚತೆ, ರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಲಾಗಿದೆ. ಬಿಜೆಪಿ.ಜಿಲ್ಲಾ ಮಹಿಳಾ ಮೋರ್ಚಾದವರು ಉಚಿತ ನೇತ್ರ ತಪಾಸಣೆ ಹಮ್ಮಿಕೊಂಡಿರುವುದು ಅರ್ಥಪೂರ್ಣ. ದೃಷ್ಟಿಯಿಲ್ಲದಿದ್ದರೆ ಜೀವನವೇ ಕತ್ತಲಾಗುತ್ತದೆ. ಅದಕ್ಕಾಗಿ ಎಲ್ಲರೂ ಕಣ್ಣುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ಸಿದ್ದಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿ.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶೈಲಜಾರೆಡ್ಡಿ, ಕಾರ್ಯಕ್ರಮದ ಸಂಚಾಲಕಿ ಜಯಶೀಲ ಮಹೇಶ್ವರಪ್ಪ, ಭುವನೇಶ್ವರಿ, ಸರಸ್ವತಿ, ಎ.ರೇಖ, ಕೀರ್ತಾನಂದಮ್ಮ, ಕಾಂಚನ, ಕವಿತ, ಶಾಂತಮ್ಮ, ಚಂದ್ರಿಕಾ ಲೋಕನಾಥ್, ಮಂಜುಳಮ್ಮ, ಭಾರ್ಗವಿ ದ್ರಾವಿಡ್, ವಕ್ತಾರ ನಾಗರಾಜ್ಬೇದ್ರೆ ಈ ಸಂದರ್ಭದಲ್ಲಿದ್ದರು.
ಡಾ.ಅಶ್ವಿನಿ, ಡಾ.ರವಿಕುಮಾರ್ ತಂಡದವರು ಕಣ್ಣಿನ ತಪಾಸಣೆ ನಡೆಸಿದರು.
ರಾಜ್ಯಮಟ್ಟದ ಕನ್ನಡ ಗೀತೆಗಳ ಗಾಯನ ಸ್ಪರ್ದೆ ಕಲಾವಿದರಿಗೆ ಉತ್ತೇಜ ಅಗತ್ಯ;ಕೆ.ಎಸ್.ನವೀನ್
ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವ ಹಾಗೂ ಶರಣಸಂಸ್ಕøತಿ ಉತ್ಸವ 2021ರ ಅಂಗವಾಗಿ ರಾಜ್ಯಮಟ್ಟದ ಕನ್ನಡ ಗೀತೆಗಳ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಕನ್ನಡ ನಾಡಿನ ವೀರರ ಮಣಿ ಎಂಬ ಹಾಡು ಹಾಡುವ ಮೂಲಕ ಚಾಲನೆ ನೀಡಿದ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್. ನವೀನ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಕಲಾವಿದರಿಗೆ ಅವಕಾಶ ಸಿಗಬೇಕು, ನೆರವು ನೀಡಬೇಕೆಂಬುದು ಶ್ರೀಮಠದ ಸದಾಶಯ. ಹಾಗಾಗಿ ಅವರಿಗೆ ಆಹಾರದ ಕಿಟ್ಗಳನ್ನು ನೀಡುವಂತಹ ಒಂದು ಸಣ್ಣ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ನಡೆಯುತ್ತಿದೆ ಎಂದರು.
ಹಿಂದೆ ರಾಜರು ಸಿಂಹಾಸನವನ್ನು ವಂಶಪಾರಂಪರ್ಯವಾಗಿ ಏರುತ್ತಿದ್ದರು. ಆದರೆ ಚಿತ್ರದುರ್ಗದ ಪಾಳೇಗಾರರ ಆಳ್ವಿಕೆಯಲ್ಲಿ ಸ್ಪರ್ಧೆಯ ಮೂಲಕ ಗೆದ್ದು ರಾಜರಾಗುತ್ತಿದ್ದಂತಹ ಚರಿತ್ರೆ ಇದೆ. ಸ್ಪರ್ಧೆಯ ಮೂಲಕ ಕಲಾವಿದರ ಪ್ರತಿಭೆಯನ್ನು ನಾವು ಗುರುತಿಸಬೇಕು. ಇಲ್ಲಿ ಹಾಡುವ ಕಲಾವಿದರು ಮುಂದೆ ಟಿವಿ ಮಾಧ್ಯಮಗಳಲ್ಲಿ ಹಾಡುವಂತಾಗಬೇಕೆಂದು ಆಶಿಸಿದರು.
ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಸಂಘದ ಅಧ್ಯಕ್ಷ ಶಂಕರ್ ಮಾತನಾಡಿ, ಕೋವಿಡ್ ಕಾರಣದಿಂದ ವಾದ್ಯಗೋಷ್ಠಿ ಕಲಾವಿದರಿಗೆ ಒಂದಿಲ್ಲೊಂದು ರೀತಿಯ ಸಂಕಷ್ಟಗಳು ಎದುರಾಗಿವೆ. ಸರ್ಕಾರ ವಾದ್ಯಗೋಷ್ಠಿ ಕಲಾವಿದರಿಗೆ ಯಾವುದೇ ರೀತಿಯ ಸಹಾಯಕ್ಕೆ ಬರಲಿಲ್ಲ. ವಾದ್ಯಗೋಷ್ಠಿ ಕಲಾವಿದರು ಇದ್ದಾರೆ ಎಂಬುದೇ ಸರ್ಕಾರಕ್ಕೆ ಗೊತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸಿ. ಶಂಕರಮೂರ್ತಿ ಮಾತನಾಡಿ, ಶ್ರೀಮಠವು ಶರಣಸಂಸ್ಕøತಿ ಉತ್ಸವಕ್ಕೆ ಪೂರ್ವಭಾವಿಯಾಗಿ ಇದೇ ಮೊದಲ ಬಾರಿ ರಾಜ್ಯಮಟ್ಟದ ಕನ್ನಡ ಗೀತ ಗಾಯನ ಸ್ಪರ್ಧೆ ಆಯೋಜಿಸಿದ್ದು, ಹಿಂದಿನ ಕಾರ್ಯಕ್ರಮಗಳ ಜೊತೆಗೆ ಇದು ಹೊಸ ರೀತಿಯ ವಿಶೇಷ ಕಾರ್ಯಕ್ರಮವಾಗಿದೆ ಎಂದರು.
ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಈ ವೇದಿಕೆಯ ಮೂಲಕ ಸ್ಥಳೀಯ ಪ್ರತಿಭೆಗಳು ಜಿಲ್ಲಾಮಟ್ಟ, ರಾಜ್ಯಮಟ್ಟದವರೆಗೆ ಬೆಳೆಯಲಿ. ನಿಮ್ಮ ಪ್ರತಿಭೆ ಅನಾವರಣಗೊಳ್ಳಲು ಇಂಥ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸ್ಪರ್ಧಾಳುಗಳಿಗೆ ಶುಭ ಕೋರಿದರು. ಶ್ರೀಮತಿ ಶೃತಿ ಮಹೇಶ್ ಮತ್ತು ವಿಕ್ಟರ್ ಡ್ಯಾನಿಯಲ್ ತೀರ್ಫುಗಾರರಾಗಿ ಭಾಗವಹಿಸಿದ್ದರು. ರೋಹಿತ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








