ಬೆಂಗಳೂರು
ರಸ್ತೆ ಮಾರ್ಗದಲ್ಲಿ ಅಪಘಾತಕ್ಕೀಡಾದ ಯುವಕನಿಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಪ್ರಥಮ ಚಿಕಿತ್ಸೆ ನೀಡಿದ ಘಟನೆ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಬಿಜೆಪಿಯ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ರಾಮಮಗರದಲ್ಲಿ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದಲ್ಲಿ ತಾಲೂಕಿನ ಹಾರೋಹಳ್ಳಿ ನೆಟ್ಟಿಗೆರೆ ಗೇಟ್ ಬಳಿ ಇಬ್ಬರು ಬೈಕ್ ಸವಾರರು ಅಪಘಾತಕ್ಕೀಡಾಗಿದ್ದಾರೆ.
ಅಪಘಾತವನ್ನು ಗಮನಿಸಿದ ಕೂಡಲೇ ತಮ್ಮ ಕಾರನ್ನು ನಿಲ್ಲಿಸಿ ಗಾಯಗೊಂಡ ಬೈಕ್ ಸವಾರರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ, ಬೈಕ್ ಸವಾರಿ ಬೇಡ ಹತ್ತಿರದಲ್ಲಿರುವ ಆಸ್ಪತ್ರೆಗೆ ಆಟೋದಲ್ಲಿ ಹೋಗಿ ವೈದ್ಯರ ಹತ್ತಿರ ಮಾತನಾಡುವಾದಾಗಿ ತಿಳಿಸಿದ್ದಾರೆ, ಅಪಘಾತಗೊಂಡ ವ್ಯಕ್ತಿಯ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ನಿರ್ಣಯಿಸಿದ ನಂತರ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.