ಆನೇಕಲ್‌ ಸ್ಕ್ರ್ಯಾಪ್‌ ರವಿ ಹತ್ಯೆ : ಆರೋಪಿ ಬಂಧನ

ಬೆಂಗಳೂರು:

    ಆನೇಕಲ್ ಪುರಸಭಾ ಸದಸ್ಯ ಸ್ಕ್ರ್ಯಾಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್ ಪೊಲೀಸರು 30 ವರ್ಷದ ರೌಡಿ ಶೀಟರ್ ಒಬ್ಬನ ಕಾಲಿಗೆ ಗುಂಡಿನ ಹಾರಿಸಿ ಬಂಧನಕ್ಕೊಳಪಡಿಸಿದ್ದಾರೆ.

    ಜು.24 ರಂದು ಪುರಸಭಾ ಸದಸ್ಯ ಸ್ಕ್ರಾಪ್‌ ರವಿಯನ್ನು ಮಾರಕಾಸಗಳಿಂದ ಚುಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಹರೀಶ್‌ ಅಲಿಯಾಸ್‌‍ ಹಂದಿ ಹರೀಶ್‌, ವಿನಯ್‌ ಅಲಿಯಾಸ್‌‍ ವಿನಿ ಎಂಬುವರು ಸ್ವಯಂ ಆಗಿ ನ್ಯಾಯಾಲಯಕ್ಕೆ ಶರಣಾಗಿದ್ದರು. ಆದರೆ ಪ್ರಮುಖ ಆರೋಪಿ ಕಾರ್ತಿಕ್‌ ತಲೆ ಮರೆಸಿಕೊಂಡಿದ್ದನು.

    ಈತನ ಪತ್ತೆಗಾಗಿ ಪೋಲಿಸರು ಒಂದು ವಾರದಿಂದ ಹುಡುಕಾಟ ನಡೆಸುತ್ತಿದ್ದರು. ಬುಧಾರ ಬೆಳಗಿನ ಜಾವ ಆರೋಪಿ ಕಾರ್ತಿಕ್‌ ಮೈಸೂರಮ್ಮನ ದೊಡ್ಡಿಯಲ್ಲಿ ಅವಿತು ಕುಳಿತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನಕ್ಕೆ ಪೊಲೀಸರು ತೆರಳಿದ್ದರು. ಸ್ಥಳಕ್ಕೆ ಹೋಗುತ್ತಿದ್ದಂತೆ ಪೊಲೀಸರನ್ನು ಗಮನಿಸಿದ ಆರೋಪಿ, ಸಿಬ್ಬಂದಿ ಮೇಲೆ ಮಾರಕಾಸ್ತಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.

    ಈ ವೇಳೆ ಇನ್ಸ್ ಪೆಕ್ಟರ್‌ ತಿಪ್ಪೇಸ್ವಾಮಿಯವರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪೊಲೀಸರ ಮಾತನ್ನು ಲೆಕ್ಕಿಸದೆ ಆರೋಪಿ ಮತ್ತೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಈ ವೇಳೆ ಕುಸಿದುಬಿದ್ದ ಆರೋಪಿಯನ್ನು ಸುತ್ತುವರಿದು ವಶಕ್ಕೆ ಪಡೆದ ಪೊಲೀಸರು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಸುರೇಶ್‌ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಸಿ.ಕೆ. ಬಾಬಾ, ಡಿವೈಎಸ್ಪಿ ಮೋಹನ್‌ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Recent Articles

spot_img

Related Stories

Share via
Copy link