ಗದಗ : ರಾಡ್‌ ನಿಂದ ಹೋಡೆದು ವೃದ್ಧನ ಕೊಲೆ

ದಗ

    ರಸ್ತೆ ಮೇಲೆ ಹೆಸರು ಒಣ ಹಾಕಿದ್ದಕ್ಕೆ ಗಲಾಟೆ ನಡೆದು ರಾಡ್‌ನಿಂದ ಹೊಡೆದು ವೃದ್ಧನನ್ನ ಹತ್ಯೆಗೈದ ಘಟನೆ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಬಸಪ್ಪ ಮುಕ್ಕಣ್ಣರ್ (65) ಮೃತಪಟ್ಟ ದುರ್ದೈವಿ.ಓಡಾಡುವ ರಸ್ತೆ ಮೇಲೆ ಹೆಸರು ಒಣ ಹಾಕಿದ್ದಕ್ಕೆ ನಡೆದಿದ್ದ ಗಲಾಟೆ ನಡೆದಿತ್ತು.

    ಕಾರ್ ನಲ್ಲಿ ಬಂದಿದ್ದ ಪಕ್ಕೀರಪ್ಪ ಕುರಿ, ಯಲ್ಲಪ್ಪ ಕುರಿ ಎಂಬುವರು ಬಸಪ್ಪ ಮುಕ್ಕಣ್ಣರ್ ಜತೆ ಗಲಾಟೆ ತೆಗೆದಿದ್ದರು. ಬಡಾವಣೆ ರಸ್ತೆ ಮಧ್ಯ ಒಣಹಾಕಿದ್ದ ಹೆಸರು ಕಾಳು ತೆರವು ಮಾಡುವಂತೆ ಬಸಪ್ಪ ಜತೆ ತಗಾದೆ ತೆಗೆದಿದ್ದರು. 

    ಹೆಸರು ತೆಗೆಯಲು ತಡ ಮಾಡಿದ್ದಕ್ಕೆ ಬಸಪ್ಪ ಮೇಲೆ ಯಲ್ಲಪ್ಪ ಕುರಿ ಏಕಾಏಕಿ ರಾಡ್ ನಿಂದ ಹಲ್ಲೆ ಮಾಡಿದ್ದ, ತಲೆ, ಎದೆ ಭಾಗಕ್ಕೆ ಗಂಭೀರವಾದ ಗಾಯವಾಗಿ ತೆಳಗೆ ಬಿದ್ದಿದ್ದರು ಬಸಪ್ಪ. ಕೂಡಲೇ ಗಾಯಳು ಬಸಪ್ಪರನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬಸಪ್ಪಗೆ ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಬಸಪ್ಪ ನಿನ್ನೆ ಬೆಳಗಿನ ಜಾವ ಬಸಪ್ಪ ಸಾವನ್ನಪ್ಪಿದ್ದಾರೆ.

   ಮನೆಯ ಸೊಸೆಯ ಸೀಮಂತ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ರಸ್ತೆ ಮೇಲೆ ಹೆಸರು ಒಣ ಹಾಕಿದ್ವಿ. ತೆಗೆಯುತ್ತೇವೆ ಎಂದ್ರು ಏಕಾಏಕಿ ಹಲ್ಲೆ ಮಾಡಿದ್ದಾನೆ. ಗಲಾಟೆ ಬಿಸಿಸಲು ಬಂದ ಬಸಪ್ಪನ ಪತ್ನಿ ಹನಮವ್ವ, ಸೊಸೆ ಸಾವಿತ್ರಿ ಮೇಲೂ ಹಲ್ಲೆ ಮಾಡಿದ್ದಾನೆ. ರೈತ ಮುಖಂಡ ಅಂತಾ ಹೇಳಿಕೊಂಡು ಓಡಾಡುವ ವ್ಯಕ್ತಿ ರೈತನ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂದು ಫಕ್ಕೀರಪ್ಪ, ಯಲ್ಲಪ್ಪ ವಿರುದ್ಧ ಬಸಪ್ಪ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recent Articles

spot_img

Related Stories

Share via
Copy link